More

    ಸರ್ಕಾರಿ ಆಸ್ಪತ್ರೆಗಳ ಕೊಡುಗೆ ಅಪಾರ

    ಖಾನಾಪುರ: ಜನರಿಗೆ ಆರೋಗ್ಯಕರ ಜೀವನ ನೀಡುವಲ್ಲಿ ಸರ್ಕಾರಿ ಆಸ್ಪತ್ರೆಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದರು.

    ತಾಲೂಕಿನ ಇಟಗಿಯಲ್ಲಿ ಅಮೃತ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳು ಸಾಮಾನ್ಯ ಮತ್ತು ರೈತ ಕುಟುಂಬಗಳ ಆರೋಗ್ಯ ವ್ಯವಸ್ಥೆಗೆ ಆಧಾರವಾಗಿವೆ. ಆದ್ದರಿಂದ, ಆರೋಗ್ಯ ವ್ಯವಸ್ಥೆಯ ಸಬಲೀಕರಣಕ್ಕೆ ಹೆಚ್ಚಿನ ಗಮನ ನೀಡಲಾಗಿದೆ ಎಂದರು.

    ಇಟಗಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು 12.40 ಕೋಟಿ ರೂ. ಅನುದಾನ ಮಂಜೂರಾಗಿದೆ. 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಎಲ್ಲ ರೀತಿಯ ಆಧುನಿಕ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಖಾನಾಪುರ ಪಟ್ಟಣದಲ್ಲಿ 60 ಹಾಸಿಗೆಗಳ ಎಂಸಿಎಚ್ ಆಸ್ಪತ್ರೆ ಸಿದ್ಧವಾಗಿದೆ. ಖಾನಾಪುರದಲ್ಲಿ ಸರ್ಕಾರಿ ಆಸ್ಪತ್ರೆ ವಿಸ್ತರಣೆಗೆ ಮಂಜೂರಾತಿ ನೀಡಲಾಗಿದ್ದು, 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜೀವ ನಾಂದ್ರೆ, ಡಾ. ಪೂಜಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಕೋಳಿ, ರತ್ನಾಕರ ಟಕೈತ, ರಮೇಶ ಹುಣಶೀಕಟ್ಟಿ, ಕಲ್ಲಪ್ಪ ತೊರೋಜಿ, ಆರ್.ಎಂ. ಕುಂಕೂರ, ಇಕ್ಬಾಲ್ ನದ್ಾ, ಸುನೀಲ್ ಹೀರೋಜಿ, ವಿಜಯ ಸಾಣಿಕೊಪ್ಪ, ರಾಯಪ್ಪ ಬಳಗಪ್ಪನವರ, ವಿಠ್ಠಲ ಕೆಳೋಜಿ, ಯಲ್ಲಪ್ಪ ಗೌರಪ್ಪನವರ, ಅದೃಶ್ಯ ಗಳಗಿ, ನಾಗರಾಜ ಪೂಜಾರ, ದೇಮಣ್ಣ ಗಂಗನಾಯ್ಕ, ದೇಮಣ್ಣ ಬಸರಿಕಟ್ಟಿ, ಕೀರಪ್ಪ ಭೋವಿ, ಆಕಾಶ ಸತ್ಯಾಪುರ, ಭೀಮಪ್ಪ ಭೋಯಿ, ಬಿ.ಕೆ. ತುರಮುರಿ, ರಾಜು ಯಳ್ಳೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts