More

    ಸಮಾನತೆಗೆ ಸಂವಿಧಾನ ಸಾಧನ

    ಹುಬ್ಬಳ್ಳಿ: ಸಮಾಜದಲ್ಲಿ ಬೇರು ಬಿಟ್ಟಿರುವ ತಾರತಮ್ಯವನ್ನು ಸಮರ್ಪಕವಾಗಿ ಹೋಗಲಾಡಿಸಲು ಸಂವಿಧಾನವೇ ಸೂಕ್ತ ಸಾಧನವಾಗಿದೆ. ಅದರ ಮೂಲಕ ಜನರಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಗೌರವಗಳನ್ನು ತಂದು ಕೊಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ಎಸ್. ರವೀಂದ್ರ ಭಟ್ಟ ಹೇಳಿದರು.

    ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಶನಿವಾರ ಆನ್​ಲೈನ್ ವೇದಿಕೆಯಲ್ಲಿ ಏರ್ಪಡಿಸಿದ್ದ ಎಲ್.ಜಿ. ಹಾವನೂರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ತಾರತಮ್ಯದ ವಿರುದ್ಧ ಹೋರಾಟಕ್ಕೆ ಬೇಕಾದ ಹೊಸ ಮಾರ್ಗಗಳು’ ಕುರಿತು ಮಾತನಾಡಿದರು.

    ಸಮಾನತೆ ತತ್ವದ ಆಧಾರದಲ್ಲಿ ಸಮಾಜ ನಿರ್ವಿುಸಲು ಸಂವಿಧಾನದ ಮುನ್ನುಡಿಯಲ್ಲೇ ಹೇಳಿರುವಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹಾಗೇ ತಾರತಮ್ಯ ತೊಲಗಿಸಲು ಸಾಕಷ್ಟು ಉಪಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ವಿವರಿಸಿದರು.

    ಅತಿಥಿಯಾಗಿದ್ದ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ ಅವರು ಮಾತನಾಡಿ, ಸರ್ಕಾರಿ ವ್ಯವಸ್ಥೆಯಲ್ಲಿ ಮೀಸಲಾತಿ ನೀತಿ ಜಾರಿ ಮಾಡುವಲ್ಲಿ ಹಾವನೂರ ವರದಿ ಪ್ರಮುಖವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಪ್ರೊ. ಪಿ. ಈಶ್ವರ ಭಟ್ಟ ಮಾತನಾಡಿದರು.

    ಡಾ. ಸುನಿಲ ಬಗಾಡೆ, ಐ.ಬಿ. ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು. ರಶ್ಮಿ ಎಂ. ನಿರೂಪಿಸಿದರು. ರುಕ್ಮೀಣಿ ಪ್ರಾರ್ಥನೆ ಹಾಡಿದರು. ಕುಲಸಚಿವ ಮಹ್ಮದ ಜುಬೇರ್ ಸ್ವಾಗತಿಸಿದರು. ಡೀನ್ ಪ್ರೊ. ರತ್ನಾ ಭರಮಗೌಡರ ಪ್ರಾಸ್ತಾವಿಕ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ. ಜಿ.ಬಿ. ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts