More

    ಸಮಾಜ ಸೇವೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ

    ಮದ್ದೂರು: ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಮಾದೇಗೌಡ ಹಾಲ್‌ನಲ್ಲಿ ಸಂಸ್ಕೃತಿ ಅಲಯನ್ಸ್ ಸಂಸ್ಥೆ ಉದ್ಘಾಟನೆ ಹಾಗೂ ಪದಾಕಾರಿಗಳಿಗೆ ಪ್ರತಿಜ್ಞಾವಿ ಬೋಧನಾ ಸಮಾರಂಭವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

    ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಸಮಾಜ ಸೇವೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸ್ವಾತಂತ್ರ್ಯ ನಂತರ ಭಾರತದಲ್ಲಿ ಹಲವು ಸ್ವಯಂ ಸೇವಾ ಸಂಸ್ಥೆಗಳು ಹುಟ್ಟಿಕೊಂಡವು. ಸಮುದಾಯ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಹುಟ್ಟಿದಂತಹ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮುನ್ನಡೆಯುತ್ತಿದೆ ಎಂದರು.

    ಸಂಸ್ಥೆಯು 2008ರಲ್ಲಿ ಪ್ರಾರಂಭವಾಗಿದ್ದು, 25 ಸಾವಿರ ಸದಸ್ಯರು, 1600 ಶಾಖೆಗಳು, 100 ಜಿಲ್ಲೆಗಳು, ಹಾಗೂ 22 ದೇಶಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಸ್ನೇಹ ಮತ್ತು ಸೇವೆ ಎಂದರು.

    ಸಂಸ್ಥೆಯ ಪ್ರಾಂತಪಾಲ ಮಾದೇಗೌಡ ಮಾತನಾಡಿ, ಈ ಸಂಸ್ಥೆಗೆ ಹೆಚ್ಚು ಸದಸ್ಯರು ಸೇರ್ಪಡೆಗೊಂಡು, ತಮ್ಮ ದುಡಿಮೆಯಲ್ಲಿ ಬರುವ ಆದಾಯದ ಸ್ವಲ್ಪ ಭಾಗವನ್ನು ಸಮಾಜದಲ್ಲಿ ತುಳಿತಕ್ಕೆ ಒಳಗಾದಂತವರ ಹಾಗೂ ಕಟ್ಟ ಕಡೆಯ ವ್ಯಕ್ತಿಗಳ ಸಬಲೀಕರಣಕ್ಕೆ ಉಪಯೋಗಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

    ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ನಿರ್ದೇಶಕ ನಾಗರಾಜ್ ವಿ.ಬೈರಿ ಅವರು ನೂತನ ಅಧ್ಯಕ್ಷ ಎಲ್.ರಾಮಯ್ಯ ಹಾಗೂ ತಂಡ ಪ್ರತಿಜ್ಞಾ ವಿ ಬೋಸಿದರು.

    ಅಲಿ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಪದಾಕಾರಿ ಸತೀಶ್, ಹಿರಿಯ ವಕೀಲ ಮಾದೇಗೌಡ , ಅಲಯನ್ಸ್ ಸಂಸ್ಥೇಯ ಜಿ.ಪಿ.ದಿವಾಕರ್, ಅಜಂತಾ ರಂಗಸ್ವಾಮಿ, ಉಪ ಪ್ರಾಂತಪಾಲ, ಕೆ.ಆರ್.ಶಶಿಧರ್, ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಖಜಾಂಚಿ ರಕ್ಷಿತ್‌ರಾಜ್, ಅಪ್ಪಾಜಿ, ಮಹೇಶ್, ಸುರೇಶ್, ತ್ಯಾಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts