More

    ಸಮಾಜದ ಮುನ್ನೆಲೆಗೆ ಬರಲು ಸಜ್ಜಾಗಿ

    ಮುನವಳ್ಳಿ: ಶಿಂಪಿ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಮುಖ್ಯವಾಹಿನಿಗೆ ಬರಬೇಕಾದರೆ ಸಾಂಘಿಕ ಒಗ್ಗಟ್ಟು ಮುಖ್ಯವಾಗಿದೆ ಎಂದು ಭಾವಸಾರ ಶಿಂಪಿ ಸಮುದಾಯದ ಜಿಲ್ಲಾಧ್ಯಕ್ಷ ಅಪ್ಪು ಅಮಠೆ ಹೇಳಿದರು. ಪಟ್ಟಣದಲ್ಲಿ ಶ್ರೀ ನಾಮದೇವ ಶಿಂಪಿ ದೈವಕಿ ಸಮಾಜ ಸಂಘವನ್ನು ಜ್ಯೋತಿ
    ಬೆಳಗಿಸಿ ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲ ಒಗ್ಗಟ್ಟಿನ ಮಂತ್ರದಿಂದ ಮುನ್ನೆಲೆಗೆ ಬರಬೇಕು ಎಂದರು.

    ಸಂಘದ ಅಧ್ಯಕ್ಷ ಜನಾರ್ಧನ ಮಿರಜಕರ ಮಾತನಾಡಿ, ಶಿಂಪಿ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದ್ದು, ಎಲ್ಲ ರಂಗಗಳಲ್ಲಿಯೂ
    ಹಿಂದೆ ಉಳಿದಿದೆ. ಆದ್ದರಿಂದ ಸರ್ಕಾರ ಶಿಂಪಿ ಸಮುದಾಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

    ಜ್ಞಾನೇಶ್ವರ ತೇಲಕರ, ಶ್ರೀಕಾಂತ ಮಿರಜಕರ, ಸತೀಶ ರೇಣಕೆ, ಅಶೋಕ ರೇಣಕೆ, ಮುರಳೀಧರ ರೇಣಕೆ, ಸುರೇಶ ರೇಣಕೆ, ಸಂಘದ ಉಪಾಧ್ಯಕ್ಷ
    ಧನಂಜಯ ರೇಣಕೆ, ಕಾರ್ಯದರ್ಶಿ ನವೀನ ರೇಣಕೆ, ಖಜಾಂಚಿ ಗಜಾನನ ರೇಣಕೆ, ಸದಸ್ಯರಾದ ಸುಧಾಕರ ರೇಣಕೆ, ಅಮೀತ ರೇಣಕೆ, ರಮೇಶ ರೇಣಕೆ,
    ಅಂಗದ ರೇಣಕೆ, ರಾಮಚಂದ್ರ ಗಾಯಡೋಳೆ, ಅಮರ ಚಾಳ, ಪೃಥ್ವಿರಾಜ ರೇಣಕೆ, ಸಂಜೀವ ಗಾಯಡೋಳೆ ಇತರರು ಇದ್ದರು.

    ಒಳಮೀಸಲಾತಿಗೆ ಒತ್ತಾಯ: ನಾಮದೇವ ಸಮುದಾಯ ವಂಶ ಪಾರಂಪರಿಕವಾಗಿ ಆರ್ಥಿಕವಾಗಿ ಹಿಂದೆ ಉಳಿದಿದ್ದು, ಸರ್ಕಾರ ನಾಮದೇವ ಶಿಂಪಿ ಸಮುದಾಯವನ್ನು 2ಎ ದಲ್ಲಿ ಪ್ರತ್ಯೇಕ ಪ್ರವರ್ಗವನ್ನಾಗಿಸಿ ಶೇ. 5 ಮೀಸಲಾತಿ ನೀಡಬೇಕು.

    ಇಲ್ಲವಾದಲ್ಲಿ ಪ್ರವರ್ಗ 1ಕ್ಕೆ ಶೇ.8 ಮೀಸಲಾತಿ ಮಾಡಿ ನಾಮದೇವ ಶಿಂಪಿ ಸಮಾಜವನ್ನು ಪ್ರವರ್ಗ 1 ರಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅಗ್ರಹಿಸಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts