More

    ಸಮಸ್ಯೆ ಪರಿಹರಿಸಲು ಶ್ರಮಿಸಿ

    ಜೇವರ್ಗಿ (ಕಲಬುರಗಿ): ಜನರ ನಾಡಿ ಮಿಡಿತ ಅರಿತು, ಸಮಸ್ಯೆಗಳ ಮೇಲೆ ಬೆಳಕು ಚಲ್ಲುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದು ಅಗತ್ಯ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.

    ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ತಾಲೂಕಿನಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

    ಜೆಡಿಎಸ್ ಮುಖಂಡ ವಿಜಯಕುಮಾರ ಹಿರೇಮಠ, ಬಿಜೆಪಿ ಮುಖಂಡ ರಮೇಶಬಾಬು ವಕೀಲ, ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ಕಾಂಗ್ರೆಸ್ ಮುಖಂಡ ರಾಜಶೇಖರ ಸೀರಿ, ಬಸವರಾಜ ಸಾಸಬಾಳ, ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಶಿವರಂಜನ ಸತ್ಯಂಪೇಟ್ ಮಾತನಾಡಿದರು.
    ಸಂಘದ ತಾಲೂಕು ಅಧ್ಯಕ್ಷ ರಮೇಶ ಆಲೂರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಶರಣಮ್ಮ ತಳವಾರ, ಉಪಾಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಸಂಗಮನಾಥ ರೇವತಗಾಂವ್, ದೇವಿಂದ್ರಪ್ಪ ಕಪನೂರ, ವೆಂಕಟೇಶ ಹರವಾಳ, ಶಿವಪುತ್ರಪ್ಪ ಕೋಣಿನ್, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ರವಿ ಕುಳಗೇರಿ, ಸಾಹೇಬಗೌಡ ಹಿರೇಗೌಡ, ಪ್ರಕಾಶ ಬಿರಾದಾರ, ಮರೆಪ್ಪ ಸರಡಗಿ, ಪ್ರಕಾಶ ಫುಲಾರೆ, ನಾಗರಾಜ ಗುತ್ತೇದಾರ್, ಸಿದ್ದು ಸಾಹು ಅಂಗಡಿ, ಇತರರಿದ್ದರು.

    ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರವೀಂದ್ರ ವಕೀಲ ಸ್ವಾಗತಿಸಿದರು. ಶಿಕ್ಷಕ ಎಸ್.ಕೆ.ಬಿರಾದಾರ ನಿರೂಪಣೆ ಮಾಡಿದರು. ಸಂಘದ ಗೌರವಾಧ್ಯಕ್ಷ ಪ್ರಕಾಶ ಆಲಬಾಳ ವಂದಿಸಿದರು.

    ಸಮಾಜದಲ್ಲಿನ ಪ್ರತಿಯೊಬ್ಬರೂ ಸತ್ಯ, ಶುದ್ಧ ಕಾಯಕಕ್ಕೆ ಪ್ರಾಮುಖ್ಯತೆ ನೀಡಬೇಕು. ಇಂದಿನ ಯುವಕರು ಕಾಲಹರಣ ಮಾಡದೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದರೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯ. ಯಾವುದೇ ಕಾರಣಕ್ಕೂ ಆಂಧ್ರ ರೈತರಿಗೆ ನಿಮ್ಮ ಜಮೀನುಗಳನ್ನು ಸಾಗುವಳಿಗೆ ನೀಡಬೇಡಿ.
    | ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು, ಶಖಾಪುರ

    ಪತ್ರಕರ್ತರ ಭವನ ನಿರ್ಮಾಣ: ಪತ್ರಕರ್ತರ ಹಲವು ದಿನಗಳ ಬೇಡಿಕೆಯಾದ ಪತ್ರಿಕಾ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕರೂ ಆದ ಶಾಸಕ ಡಾ.ಅಜಯಸಿಂಗ್ ಭರವಸೆ ನೀಡಿದ್ದಾರೆ. ದೂರವಾಣಿ ಮೂಲಕ ಸಂದೇಶ ನೀಡಿದ ಅವರು, ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಆಗಮಿಸಲು ಆಗಿಲ್ಲ. ಪತ್ರಕರ್ತರ ಭವನ ನಿಮರ್ಾಣ ಹಾಗೂ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ: ಸಾಧಕರಾದ ಜಗದೇವಿ ಪೂಜಾರಿ (ಸಮಾಜ ಸೇವಾ ರತ್ನ), ಜೇವರ್ಗಿ ಸಾರಿಗೆ ಘಟಕದ ಚಾಲಕ ಪ್ರದೀಪಕುಮಾರ ಆಲಬಾಳ (ಅಪಘಾತ ರಹಿತ ಚಾಲನೆ ಪ್ರಶಸ್ತಿ), ಉದ್ಯಮಿ ಶರಣು ಅವರಾದ, ವಿದ್ಯಾರ್ಥಿ ನಿಖಿಲ ಇಬ್ರಾಹಿಂಪುರ (ಪರಿಶ್ರಮ ಜೀವಿ), ಪತ್ರಕರ್ತರಾದ ಸಂಜಯ ಚಿಕ್ಕಮಠ, ಪ್ರವೀಣರೆಡ್ಡಿ, ಓಂಪ್ರಕಾಶ ಮುನ್ನೂರ, ಅರುಣ ಕದಂ, ಅನೀಲಸ್ವಾಮಿ, ರಾಜಶೇಖರ ಸ್ವಾಮಿ, ಗೋಪಾಲರಾವ್ ಕುಲಕರ್ಣಿ, ಪುರುಷೋತ್ತಮ ಕುಲಕರ್ಣಿ, ಬಜರಂಗಿ, ಶ್ರೀಕಾಂತ (ಮಾಧ್ಯಮ ರತ್ನ) ಅವರಿರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts