More

    ಸಮಸ್ಯೆ ತಂದಿಟ್ಟ ಸಮಯ ಬದಲಾವಣೆ

    ಲಕ್ಷ್ಮೇಶ್ವರ: ಸರ್ಕಾರ ಲಾಕ್​ಡೌನ್ ಸಡಿಲಗೊಳಿಸಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ಕಲ್ಪಿಸಿದೆ. ಆದರೆ, ಪಟ್ಟಣದ ವ್ಯಾಪಾರಸ್ಥರ ಸಂಘದವರು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ನಡೆಸಲು ತೀರ್ಮಾನ ಕೈಗೊಂಡಿದ್ದು ಗ್ರಾಹಕರು ಹಾಗೂ ಇನ್ನಿತರ ಸಣ್ಣಪುಟ್ಟ ಪ್ಯಾಪಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

    ವ್ಯಾಪಾರಸ್ಥರ ಸಂಘ ವ್ಯಾಪಾರ-ವಹಿವಾಟಿಗೆ ಕೇವಲ 5 ಗಂಟೆ ಮಾತ್ರ ನಿಗದಿಪಡಿಸಿದ್ದರಿಂದ ಹೆಚ್ಚು ಜನಸಂದಣಿ ಉಂಟಾಗುತ್ತಿದೆ. ಜನರು ಖರೀದಿಗೆ ಮುಗಿ ಬೀಳುತ್ತಿದ್ದಾರೆ.

    ಸರ್ಕಾರ ವ್ಯಾಪಾರಕ್ಕೆ ಬೆಳಗ್ಗೆಯಿಂದ ಸಂಜೆವರೆಗೂ ಅವಕಾಶ ನೀಡಿದ್ದರೂ ಪೊಲೀಸರು 2 ಗಂಟೆಯಾಗುತ್ತಲೇ ಅಂಗಡಿ ಬಂದ್ ಮಾಡಲು ಹೇಳುತ್ತಾರೆ. ಇನ್ನು ಪುರಸಭೆಯವರು ಬೆಳಗ್ಗೆ 9 ಗಂಟೆಯವರೆಗೂ ಅಂಗಡಿ ತರೆಯಲು ಅವಕಾಶ ಕೊಡುತ್ತಿಲ್ಲ. ಎಂಬುದು ಸಣ್ಣಪುಟ್ಟ ವ್ಯಾಪಾರಸ್ಥರ ಆರೋಪವಾಗಿದೆ. ಆದ್ದರಿಂದ, ಸರ್ಕಾರದ ನಿಯಮಾವಳಿಯಂತೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಯಾವುದೇ ನಿರ್ಬಂಧ ಹೇರದೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಕೆಲ ವ್ಯಾಪಾರಸ್ಥರು, ಜನಸಾಮಾನ್ಯರು ಒತ್ತಾಯಿಸಿದ್ದಾರೆ.

    ಸರ್ಕಾರ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಕಾಲಾವಕಾಶ ಕೊಟ್ಟಿದ್ದರೂ ಪಟ್ಟಣದಲ್ಲಿನ ವ್ಯಾಪಾರಸ್ಥರ ಸಂಘದವರು ವ್ಯಾಪಾರ-ವಹಿವಾಟಿನ ವೇಳೆಯನ್ನು ಬೆಳಗ್ಗೆ 9 ರಿಂದ 2 ಗಂಟೆವರೆಗೆ ಮಾತ್ರ ನಿಗದಿಪಡಿಸಿಕೊಂಡಿರುವುದರಿಂದ ಬೀದಿ ಬದಿ ವ್ಯಾಪಾರಸ್ಥರಿಗೆ, ಜನತೆಗೆ ಸಾಕಷ್ಟು ತೊಂದರೆಯಾಗುತ್ತಿದೆ.

    | ಸೋಮಣ್ಣ ಮುಳಗುಂದ, ಪುರಸಭೆ ಮಾಜಿ ಸದಸ್ಯ

    ಪಟ್ಟಣಕ್ಕೆ ನೆರೆಯ ಮೂರ್ನಾಲ್ಕು ತಾಲೂಕಿನ ಜನರು ವ್ಯಾಪಾರಕ್ಕೆ ಬರುತ್ತಾರೆ. ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಭದ ದೃಷ್ಟಿಯ ಹೊರತಾಗಿ ಜನರ ಆರೋಗ್ಯದ ದೃಷ್ಟಿಯಿಂದ ಎಲ್ಲ ವ್ಯಾಪಾರಸ್ಥರು ಸೇರಿ ಸ್ವಯಂ ಪ್ರೇರಣೆಯಿಂದ ಬೆಳಗ್ಗೆ 9 ರಿಂದ 2 ಗಂಟೆ ವರೆಗೆ ಮಾತ್ರ ವ್ಯಾಪಾರ ಮಾಡಲು ತೀರ್ವನಿಸಿದ್ದೇವೆ. ಇದರಲ್ಲಿ ಯಾವುದೇ ಒತ್ತಾಯವಿಲ್ಲ. ಕೆಲ ದಿನಗಳವರೆಗೆ ಎಲ್ಲ ವ್ಯಾಪಾರಸ್ಥರು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರು, ಕಂದಾಯ, ಪೊಲೀಸ್, ಪುರಸಭೆಯವರು ಸಹಕಾರ ಕೊಡಬೇಕೆಂದು ಮನವಿ ಮಾಡುತ್ತೇವೆ.

    | ಬಸವೇಶ ಮಹಾಂತಶೆಟ್ಟರ್, ವ್ಯಾಪಾರಸ್ಥರ ಸಂಘದ ಅಧ್ಯಕ್ಷ

    ಸರ್ಕಾರದ ಸೂಚನೆಯಂತೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 9 ರಿಂದ 2 ಗಂಟೆವರೆಗೆ ಮಾತ್ರ ವ್ಯಾಪಾರ ಮಾಡಲು ವ್ಯಾಪಾರಸ್ಥರೇ ಸ್ವಯಂ ಪ್ರೇರಣೆಯಿಂದ ಕೈಗೊಂಡ ಒಮ್ಮತದ ತೀರ್ವನವಾಗಿದೆ. ಸರ್ಕಾರ ಸೂಚಿಸಿದ ವೇಳೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಒತ್ತಾಯದಿಂದ ಬಂದ್ ಮಾಡಿಸದಂತೆ ಪೊಲೀಸರು, ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

    | ಭ್ರಮರಾಂಬ ಗುಬ್ಬಿಶೆಟ್ಟಿ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts