More

    ಸಮಸ್ಯೆಗಳನ್ನು ಜಾಣ್ಮೆಯಿಂದ ನಿಬಾಯಿಸ ಬೇಕು

    ಚಿತ್ರದುರ್ಗ: ಸತಿ-ಪತಿಗಳ ಮನಸ್ಸು ಮತ್ತು ಆಲೋಚನೆಗಳು ಒಂದೇ ಆಗಿರಬೇಕೆಂದು ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾ ಮೀಜಿ ಹೇಳಿದರು.
    ನಗರದ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದಲ್ಲಿ ಸೋಮವಾರ ಆಯೋಜಿಸಿದ್ದ 34ನೇ ವರ್ಷದ 2ನೇ ತಿಂಗಳ ಸಾಮೂ ಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವವಚನ ನೀಡಿದ ಶ್ರೀಗಳು, ದಂಪತಿ ನಡುವೆ ಪರಸ್ಪರ ಪ್ರೀತಿ,ವಿಶ್ವಾಸವಿದ್ದಾಗ ಬದು ಕು ಸ್ವರ್ಗವಾಗುತ್ತದೆ. ಸತಿ-ಪತಿ ಕೊನೆಯವರೆಗೂ ಹೊಂದಿಕೊಂಡು ಬಾಳಬೇಕು. ಸಾಂಸಾರಿಕವಾಗಿ ಸಮಸ್ಯೆಗಳು ಬರುವುದು ಸಹಜ, ಅಂಜದೆ ಅವುಗಳನ್ನು ನಿವಾರಿಸುವ ಜಾಣ್ಮೆ ನಿಮ್ಮದಾಗ ಬೇಕೆಂದು ನವ ದಂಪತಿಗೆ ಕಿವಿ ಮಾತು ಹೇಳಿದರು.
    ಸಮ್ಮುಖ ವಹಿಸಿದ್ದ ಗುಡ್ಡದಆನ್ವೇರಿ ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ,ಅನುಭವ ಮಂಟಪದ ಅನುಭವ ದೊಡ್ಡದು. ಅನೇಕ ಶಿವಶರಣರು ಅಲ್ಲಿ ಆಧ್ಯಾತ್ಮಿಕ ಅನುಭವ ಪಡೆದುಕೊಂಡಿದ್ದಾರೆ,ವಚನಗಳನ್ನು ರಚಿಸಿದ್ದಾರೆ. 12ನೇ ಶತಮಾನದಲ್ಲೇ ದಾಸೋಹ,ಕಾಯಕಗಳ ಮಹತ್ವ ಮತ್ತು ಶ್ರೇಷ್ಠತೆಯ ಅರಿವು ಮೂಡಿಸಿದ್ದಾರೆ. ಭೌತಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತು ಮುಖ್ಯವೆಂದಿ ದ್ದಾರೆ ಎಂದರು.
    ರಾಜ್ಯಯುವ ಕಾಂಗ್ರೆಸ್ ಕಾರ‌್ಯದರ್ಶಿ ವಿನಯ್‌ತಿಮ್ಮಾಪೂರ ಮಾತನಾಡಿ,ಶ್ರೀ ಮುರುಘಾಮಠ ಹಿಂದುಳಿದವರಿಗೆ ಆಶಾಕಿರಣವಾಗಿ ದೆ.ಬುದ್ಧ,ಬಸವ,ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳು ನಮಗೆಲ್ಲರಿಗೂ ಆದರ್ಶವಾಗಿವೆ. ಜಾತಿ ವಿಷಬೀಜ ಬಿತ್ತುವ ಇಂದಿನ ದಿನ ಮಾನಗಳಲ್ಲಿ ಶಾಂತಿ ನೆಲೆಸಲಿ.
    ನಮ್ಮ ನಾಡು ಶಾಂತಿಯ ಬೀಡು. ಸಾಮೂಹಿಕ ಕಲ್ಯಾಣದಂತಹ ಮಹತ್ಕಾರ್ಯಗಳು ನಿರಂತರ ಎಲ್ಲೆಡೆ ನಡೆದರೆ ನಾವೆಲ್ಲರೂ ಒಂ ದೇ ಎಂಬ ಭಾವನೆಗೆ ಸಹಕಾರಿಯಾಗಲಿದೆ. ನಮ್ಮದು ಉತ್ತಮ ಸಂಸ್ಕಾರವುಳ್ಳ ರಾಷ್ಟ್ರ. ಇಲ್ಲಿ ಜನಿಸಿರುವುದೇ ನಮ್ಮ ಪುಣ್ಯ. ನಾವು ಇನ್ನೊಬ್ಬರ ಶ್ರೇಯಸ್ಸನ್ನು ಬಯಸುತ್ತಾ,ಬೆಳೆಯಬೇಕೆಂದರು. 7 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿವು.
    ಶ್ರೀ ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ, ನಿಪ್ಪಾಣಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ,ಶ್ರೀ ಬಸವಕುಂಬಾರ ಗು ಂಡಯ್ಯ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ,ಮುರುಘೇಂದ್ರ ಸ್ವಾಮೀಜಿ,ಫೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts