More

    ಸಮರ್ಪಕ ನೀರು ಪೂರೈಕೆಗೆ ಆಗ್ರಹ; ಗ್ರಾಮಸ್ಥರು, ಗ್ರಾಪಂ ಸಿಬ್ಬಂದಿ, ಸದಸ್ಯರ ನಡುವೆ ಮಾತಿನ ಚಕಮಕಿ

    ತ್ಯಾಗರ್ತಿ: ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳಾ ಗ್ರಾಮದಲ್ಲಿ ಸೋಮವಾರ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರು, ಗ್ರಾಪಂ ಸಿಬ್ಬಂದಿ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
    ಹಿರೇಬಿಲಗುಂಜಿ ಗ್ರಾಪಂನಿಂದ ಇತ್ತೀಚೆಗೆ ಮಳ್ಳಾ ಗ್ರಾಮದಲ್ಲಿ ಅಕ್ರಮ ನಲ್ಲಿ ಸಂಪರ್ಕ ತೆರವುಗೊಳಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಮಳ್ಳಾ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಹೆಚ್ಚಾಗಿದ್ದು ಪದೇಪದೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಇದರಿಂದ ಕಳೆದ ನಾಲ್ಕೈದು ದಿನಗಳಿಂದ ಕುಡಿಯುವ ನೀರು ಪೂರೈಸುವುದು ಗ್ರಾಪಂ ಸಿಬ್ಬಂದಿಗೆ ಸವಾಲಾಗಿತ್ತು
    ಪ್ರತಿಭಟನಾ ಸ್ಥಳಕ್ಕೆ ತಾಪಂ ಮಾಜಿ ಸದಸ್ಯ ಸೋಮಶೇಖರ್ ಲಾವಿಗ್ಗೆರೆ ಆಗಮಿಸಿ ಗ್ರಾಮಸ್ಥರು ಹಾಗೂ ಪಿಡಿಒ, ಅಧ್ಯಕ್ಷರ ಜತೆ ಮಾತುಕತೆ ನಡೆಸಿದರು. ಅಕ್ರಮ ನಲ್ಲಿ ಸಂಪರ್ಕದಿಂದ ನೀರಿನ ಪೂರೈಕೆ ವ್ಯವಸ್ಥೆಯು ಸಂಪೂರ್ಣ ಹಾಳಾಗುತ್ತದೆ. ಗ್ರಾಮಸ್ಥರು ಸ್ಥಳೀಯ ಆಡಳಿತದ ಜತೆಗೆ ನೀರಿನ ವಿಚಾರದಲ್ಲಿ ಘರ್ಷಣೆ ಆಗದಂತೆ ಸಹಕರಿಸಬೇಕು. ಸಾರ್ವಜನಿಕ ಕುಡಿಯುವ ನೀರಿನ ಸ್ಥಾವರಕ್ಕೆ ವಿದ್ಯುತ್ ವ್ಯತ್ಯಯ ಆಗದಂತೆ ಮೆಸ್ಕಾಂ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts