More

    ಸಮಯ ವ್ಯರ್ಥ ಮಾಡಬೇಡಿ

    ಮಂಡ್ಯ: ಓದುವ ಕಾಲದಲ್ಲಿ ಸಮಯ ವ್ಯರ್ಥ ಮಾಡಿ ನಂತರ ಪಶ್ಚಾತಾಪಪಟ್ಟರೆ ಪ್ರಯೋಜನವಿಲ್ಲ ಎಂದು ವಿದ್ಯಾರ್ಥಿಗಳಿಗೆ ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಡಾ.ನಾಗರಾಜು ವಿ.ಭೈರಿ ಕಿವಿಮಾತು ಹೇಳಿದರು.


    ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ಕೃಷಿಕ ಲಯನ್ಸ್ ಸಂಸ್ಥೆ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ, ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಹಳಷ್ಟು ದಾರಿಗಳಿವೆ. ಆದರೆ, ಯಾವ ಕಾಲದಲ್ಲಿ ಓದಬೇಕೋ ಅದನ್ನು ಆಯಾ ಸಮಯದಲ್ಲಿ ಮುಗಿಸಿಕೊಳ್ಳುವುದು ಸೂಕ್ತ. ಇದರಿಂದ ಸಾಧನೆ ಮಾಡುವುದಕ್ಕೆ ಸಹಕಾರಿ ಆಗುತ್ತದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಓದುವ ಹವ್ಯಾಸದ ಬದಲಾವಣೆಗಳನ್ನು ಕಂಡುಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವ ಮನೋಭಾವ ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.


    ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಅಕ್ಷರದವ್ವ ಎಂದು ಸಾವಿತ್ರಿಬಾಯಿ ಫುಲೆ ಅವರನ್ನು ಕರೆಯಲಾಗುತ್ತಿತ್ತು. ಅದೇರೀತಿ ಸರ್ವೆಪಲ್ಲಿ ಡಾ.ರಾಧಾಕೃಷ್ಣನ್ ಅವರನ್ನು ವಿಶೇಷವಾಗಿ ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ಗೌರವಿಸಲಾಗುತ್ತಿದೆ. ಎಲ್ಲ ಶಿಕ್ಷಕರನ್ನು ಗೌರವಿಸುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.


    ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಡಯಟ್ ಪ್ರಾಂಶುಪಾಲ ಎಂ.ಶಿವಮಾದಪ್ಪ, ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್‌ಕುಮಾರ್, ಪ್ರಾಂಶುಪಾಲ ತಮ್ಮೇಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ನಾಗೇಶ್, ಶಿಕ್ಷಕರಾದ ಸಿ.ಕೆ.ರಾಜಣ್ಣ, ಶಶಿಧರ್ ಈಚಗೆರೆ ಇತರರಿದ್ದರು.


    ಇದೇ ವೇಳೆ ಡಾ.ಬಿ.ಕೆ.ಲೋಕೇಶ್, ಪ್ರೊ.ವೈ.ಕೆ.ಭಾಗ್ಯಾ, ಪ್ರೊ.ಡೇವಿಡ್ ಪ್ರತಿಭಾಂಜಲಿ, ಎಚ್.ಎಂ.ಶ್ರೀನಿವಾಸ್, ಎಚ್.ಬಿ.ಮರೀಗೌಡ, ಡಾ.ಎಸ್.ಯೋಗೇಂದ್ರಕುಮಾರ್, ಡಾ.ಎಸ್.ಹರೀಶ್, ಆರ್.ಮೋಹನ್‌ಕುಮಾರ್, ಡಿ.ಆರ್.ಈರಪ್ಪ, ಟಿ.ಎಲ್.ಮಂಜುಳಾ, ಎಸ್.ನೇತ್ರಾವತಿ, ಎಸ್.ಎಚ್.ವಿಜಯಕುಮಾರಿ, ನೀಲಾವತಿ, ಸಾವಿತ್ರಿ, ಎಚ್.ಕೆ.ಆನಂದ, ಎ.ಎನ್.ನಾಗಸ್ವಾಮಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂತೆಯೇ ಮೈಸೂರಿನ ಸುಮಾ ರಾಜ್‌ಕುಮಾರ್ ಅವರಿಂದ ಮಾತನಾಡುವ ಗೊಂಬೆ ಹಾಗೂ ಜಾದು ಪ್ರದರ್ಶನ, ಪ್ರತಿಭಾಂಜಲಿ ಡೇವಿಡ್ ತಂಡದಿಂದ ಗೀತ ಗಾಯನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts