More

    ಸತತ ಅಧ್ಯಯನದಿಂದ ಉನ್ನತ ಹುದ್ದೆ ಸಾಧ್ಯ

    ಕಕ್ಕೇರಾ : ಸತತ ಅಧ್ಯಯನದಿಂದ ಮಾತ್ರ ಉನ್ನತ ಹುದ್ದೆ ಪಡೆಯಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಹೇಳಿದರು.

    ಬನದೊಡ್ಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಗುರುಮೂರ್ತಿ ಅವರ ವರ್ಗಾವಣೆ ನಿಮಿತ್ತ ಆಡಳಿತ ಮಂಡಳಿ ಸೋಮವಾರ ಹಮ್ಮಿಕೊಂಡ ಸನ್ಮಾನ ಹಾಗೂ ಬೀಳ್ಕೊಡುಗೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನದಲ್ಲಿ ಪ್ರತಿಯೊಂದರಲ್ಲೂ ಸ್ಪರ್ಧೆ ಇದ್ದು, ಚಿಕ್ಕ ಹುದ್ದೆಯಿಂದ ದೊಡ್ಡ ಹುದ್ದೆ ಅಲಂಕರಿಸಬೇಕಾದರೆ ಸತತ ಅಧ್ಯಯನ ಅಗತ್ಯವಾಗಿದೆ ಎಂದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಗುರುಮೂರ್ತಿ, ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ನನ್ನ ಗರಡಿಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು, ಪೊಲೀಸ್, ಪಿಡಿಒ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದರು.

    ಎಡಿಎAಸಿ ಅಧ್ಯಕ್ಷ ಹಣಮಂತ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಹನುಮಂತ್ರಾಯಗೌಡ ಜಹಾಗೀರದಾರ್, ಪುರಸಭೆ ಸದಸ್ಯ ವೆಂಕಟೇಶನಾಯಕ ಜಹಾಗೀರದಾರ್, ಅಣ್ಣವೀರಯ್ಯ ಮಠಪತಿ, ಬಿಆರ್‌ಪಿ ಕಾಂತೇಶ ಹಲಗಿಮನಿ, ಪ್ರಮುಖರಾದ ಸಂಗಣ್ಣ ಬಡಿಗೇರ, ಧನಸಿಂಗ್ ರಾಠೋಡ್, ಚಂದ್ರು ವಜ್ಜಲ್, ಹಣಮಂತ ಸುಂಕಾಪುರ, ಬಸವರಾಜ ಗಂಟಿ, ಗುಡದಪ್ಪ ಅನೀಪ್, ಶರಣಪ್ಪ, ಪರಮಣ್ಣ, ಗಂಗಪ್ಪ, ಬಸಣ್ಣ ಗಡ್ಡಿ, ರಂಗಪ್ಪ, ಬಸವರಾಜ ಇತರರಿದ್ದರು.

    ಸಿಆರ್‌ಪಿ ಸುಭಾಸ ಒಂಟಿ ಪ್ರಾಸ್ತಾವಿಕ ಮಾತನಾಡಿದರು. ಯಮನಪ್ಪ ಹಡಪದ ಸ್ವಾಗತಿಸಿದರು. ಮಾಧುರಿ ಸಾಳಿ ವಂದಿಸಿದರು. ಸಿದ್ದಪ್ಪ ಅಗ್ನಿ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts