More

    ಗವಿರಂಗ ಹಣಮಂತ ದೇವರ ಅದ್ದೂರಿ ಕಾರ್ತಿಕೋತ್ಸವ

    ಕಕ್ಕೇರಾ: ಸಮೀಪದ ಗವಿರಂಗ ಹಣಮಂತ ದೇವರ ಕಾರ್ತಿಕೋತ್ಸವ ಭಾನುವಾರ ಅಪಾರ ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.

    ಶನಿವಾರ ರಾತ್ರಿಯೇ ಹಣಮಂತ ದೇವರ ದೇವಸ್ಥಾನದಿಂದ ಏದಲಬಾವಿ ಹತ್ತಿರದ ಹೊಳಿ ಜಟ್ಟೆಪ್ಪ ಗುಡಿ ಹತ್ತಿರದ ದೇವರ ಗಂಗಸ್ಥಳ ನಡೆದು ಬೆಳಗಿನ ಜಾವ ಗುಡಿ ಗವಿರಂಗ ಪ್ರವೇಶಗೊಂಡಿತು. ಬೆಳಗ್ಗೆ ಭಕ್ತರು ದೀಡ್ ನಮಸ್ಕಾರ, ಕೊಡೆ, ನೈವೇದ್ಯ, ಕಾಯಿ-ಕರ್ಪೂರ ಅರ್ಪಣೆ ಸೇರಿ ಅನೇಕ ಧಾರ್ಮಿಕ ಕಾರ್ಯಗಳು ನಡೆದವು. ಪೂರ್ವಜರ ಕಾಲದಿಂದಲೂ ನಡೆದು ಬಂದ ಪದ್ಧತಿಯಂತೆ ಐದು ಜನ ಭಕ್ತರು ಬಂಡೆಕಲ್ಲಿನ ಮೇಲೆ ಹೊಳಿಗೆ ಊಟದ ನಂತರ ಮಹಾಪ್ರಸಾದ ಪ್ರಾರಂಭಗೊಂಡಿತು. ಜಾನಪದ ಕಲಾವಿದರಾದ ಮರೆಮ್ಮ ಪೂಜಾರಿ, ಜೆಟ್ಟೆಪ್ಪ ಯಲಗಟ್ಟಿ ತಂಡದವರಿಂದ ಜನಪದ ಹಾಡುಗಳು ನೆರೆದಿದ್ದ ಭಕ್ತರ ಮನಸೂರೆಗೊಂಡವು.

    ನಂತರ ದೇವಾಲಯದ ಪೂಜ್ಯರಾದ ಭೀಮಣ್ಣ ಪೂಜಾರಿ, ರೇವಣಸಿದ್ದಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಸಾಮಣ್ಣ ಜುಮ್ಮಾರ ಸೇರಿ ಅನೇಕ ಪೂಜ್ಯರಿಂದ ವರ್ಷದ ಮೊದಲ ದೇವರ ಹೇಳಿಕೆ ನಡೆದಾಗ, ನೆರೆದಿದ್ದ ಭಕ್ತವೃಂದ ಶಾಂತಚಿತ್ತದಿಂದ ಆಲಿಸಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

    ಮುಖಂಡರಾದ ಹಣಮಂತ್ರಾಯಗೌಡ ಏದಲಭಾವಿ, ವೀರಸಂಗಪ್ಪ ಸಾಹುಕಾರ್, ರಾಜು ಹವಾಲ್ದಾರ್, ಬಾಲಪ್ಪ ದೇಸಾಯಿ, ಅಲ್ಲಾಭಕ್ಷ ಪೂಜಾರಿ, ಸಿದ್ದಣ್ಣನಾಯಕ ದೇಸಾಯಿ, ವಿಜಯ ಪೂಜಾರಿ, ಶಿವಣ್ಣ ಬೆಂಚಿಗಡ್ಡಿ, ಭೀಮಣ್ಣ ಪೂಜಾರಿ, ಅಂಬ್ರಪ್ಪ ಮುಂಡರಗಿ, ಅಮರಪ್ಪ ಬೆಂಚಿಗಡ್ಡಿ, ಸಣ್ಣನಿಂಗಪ್ಪ ಕುಂಟೋಜಿ, ನಿಂಗಪ್ಪನಾಯ್ಕ್, ಕೆ.ಗವಿಸಿದ್ದೇಶ ಹೊಗರಿ, ಜೆಟ್ಟೆಪ್ಪ ಗದಗ್, ಜೆಟ್ಟೆಪ್ಪ ಯಲಗಟ್ಟಿ, ಮರೆಮ್ಮ ಪೂಜಾರಿ ಅನೇಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts