More

    ಕಾಂಗ್ರೆಸ್‌ನವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಕೇಸ್ ಹಾಕ್ತಾರೆ; ಬಸವರಾಜ ಬೊಮ್ಮಾಯಿ ಆರೋಪ

    ಹಾವೇರಿ: ಕಾಂಗ್ರೆಸ್‌ನವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಕೇಸ್ ಹಾಕುತ್ತಾರೆ. ವ್ಯಕ್ತಿ ಸ್ವಾತಂತ್ರೃ ಹಾಗೂ ಪ್ರಜಾಪ್ರಭುತ್ವ ಉಳಿತಾ ಇಲ್ಲ. ರಾಜ್ಯಾದ್ಯಂತ ಅಘೋಷಿತ ಪರಿಸ್ಥಿತಿಯಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
    ತಡಸ ಗ್ರಾಮದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಕಾಂತ ಪೂಜಾರಿಯನ್ನು ಒಳಗಡೆ ಹಾಕಿದರ ಬಗ್ಗೆ ಕೇಸ್ ಇಲ್ಲ. ದ್ವೇಷದ ರಾಜಕಾರಣಕ್ಕೆ ಗೃಹ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಶಾಂತಿ ಭಂಗ ಮಾಡುತ್ತ ಕೋಮು ಸೌಹಾರ್ದತೆ ಕೆಡಿಸುತ್ತಿದ್ದಾರೆ. ಓಟಿನ ರಾಜಕಾರಣಕ್ಕಾಗಿ ಈ ರೀತಿ ವಿಭಜನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
    ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣಲ್ಲಿ ಆರೋಪಿಗಳು ಅಮಾಯಕರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಅಮಾಯಕರು ಅಂತಾ ತಿರ್ಮಾನ ಮಾಡೋರು ಯಾರು? ಡಿ.ಕೆ. ಶಿವಕುಮಾರ ಮಾಡೋಕೆ ಆಗುತ್ತಾ? ಬೊಮ್ಮಾಯಿ ಮಾಡೋಕೆ ಆಗುತ್ತಾ? ಹಾಗಾದರೆ ಬೆಂಕಿ ಹಚ್ಚಿದವರು ಅಮಾಯಕರಾ? ಎಂದು ಪ್ರಶ್ನಿಸಿದರು. ಇದನ್ನು ಸಹಿಸೋಕೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಅಂದು ಪೋಲಿಸರ ಕ್ರಮ ತೆಗೆದುಕೊಂಡರು. ಇಲ್ಲವಾಗಿದ್ದರೆ ರಾಜ್ಯದಲ್ಲಿ ಇದೆ ಹರಡುತ್ತಾ ಇತ್ತು. ಪೋಲಿಸರ ಕ್ರಮ ಸರಿ ಇದೆ ಎಂದು ಇದೆ ಸರ್ಕಾರ ಒಪ್ಪಿಕೊಂಡಿದೆ. ಇದು ಒಲೈಕೆ ರಾಜಕಾರಣ. ಕೋರ್ಟ್ ತಿರ್ಮಾನ ಮಾಡುತ್ತದೆ. ನಾವೇ ತಿರ್ಮಾನ ಮಾಡಿ ಸರ್ಟಿಫಿಕೇಟ್ ಕೊಡಲು ಬರಲ್ಲ. ಈ ಕೇಸ್‌ನಲ್ಲಿ ಕೆಟ್ಟವರನ್ನು ಉಳಿಸುವ ಪ್ರಯತ್ನ ನಡೆಯಲ್ಲ ಎಂದರು.
    ಕಾಂಗ್ರೆಸ್ ನಾಯಕರಿಗೆ ತಿರುಗೇಟು…
    ಬಿ.ಕೆ. ಹರಿಪ್ರಸಾದ ಹೇಳಿಕೆಗೆ ಪ್ರತಿಕ್ರಿಯೆ ಅವರು, ಗೋದ್ರಾ ಮಾದರಿಯಲ್ಲಿ ಹತ್ಯೆ ಆಗುತ್ತದೆ ಎಂದು ಹರಿಪ್ರಸಾದ ಹೇಳುತ್ತಾರೆ. ಕನಿಷ್ಟ ಗೃಹ ಸಚಿವರಾದರು ಇದನ್ನು ಕೇಳಬೇಕಿತ್ತು. ಅವರ ವಿರುದ್ಧ ಸಮನ್ಸ್ ಕೊಡಬೇಕಿತ್ತು. ಬಿಜೆಪಿಯವರು ಹೇಳಿದ್ದರೆ ಬಿಡುತ್ತಾ ಇದ್ರಾ ಎಂದು ಪ್ರಶ್ನಿಸಿದರು. ಅಲ್ಲದೆ ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದರು.
    ನ್ಯಾಯ ಕೊಡದಿದ್ದರೆ ಸಿಡಿದೆಳುತ್ತೇನೆ ಎಂಬ ವಿ. ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದ ಹಿರಿಯವರು ಕುಳಿತು ಬಗೆಹರಿಸುತ್ತಾರೆ. ಈಗಾಗಲೇ ಅವರು ಮಾತಾಡಿದ್ದಾರೆ. ಅವರ ಸಮಸ್ಯೆಗಳಿಗೆ ನ್ಯಾಯ ಸಿಗುತ್ತದೆ ಬಗೆಹರಿಸುತ್ತಾರೆ ಎಂದರು.
    ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರ ಕುರಿತು ಮಾತನಾಡಿದ ಅವರು, ಈ ಸಂಬಂಧ ನನ್ನ ಜತೆ ಯಾರು ಮಾತಾಡಿಲ್ಲ. ನಾನು ನಿಲ್ಲುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಚುನಾವಣೆಯಲ್ಲಿ ಹಲವಾರು ಜನರ ಹೆಸರು ಓಡಾಡುತ್ತವೆ. ಹಾಗಂತ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದರು. ಹೈಕಮಾಂಡ್ ತಮ್ಮ ಹೆಸರು ಸೂಚಿಸಿದರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಮೌನಕ್ಕೆ ಶರಣಾದದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts