More

    ಸಕಾಲಕ್ಕೆ ನೀರಿಲ್ಲದೆ ಒಣಗುತ್ತಿವೆ ನೆಟ್ಟ ಸಸಿ

    ತೆಲಸಂಗ: ಪರಿಸರ ಸಂರಕ್ಷಣೆಗಾಗಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ಗ್ರಾಮದ ಹೊರ ವಲಯದಲ್ಲಿ ಸಸಿಗಳ ನೆಡಲಾಗಿದೆಯಾದರೂ ಸಕಾಲಕ್ಕೆ ನೀರುಣಿಸದ ಪರಿಣಾಮ ಅವು ಒಣಗುತ್ತಿವೆ.

    ತೋಡಿರುವ ಗುಂಡಿಗಳಲ್ಲಿ ಸಸಿ ನೆಟ್ಟು ಮಳೆಗಾಲದ ವರೆಗೆ ನೀರುಣಿಸಬೇಕೆಂಬ ಜವಾಬ್ದಾರಿಯನ್ನೇ ಇಲಾಖೆ ಮರೆತಂತಿದೆ. ಆದರೆ, ಸಸಿ ನೆಡುವಾಗಲೂ ನೀರು ಹಾಕಿಲ್ಲ ಮತ್ತು ಸದ್ಯಕ್ಕೆ ಒಣಗುತ್ತಿರುವಾಗಲೂ ಜಲ ಸೌಲಭ್ಯ ಕಲ್ಪಿಸುತ್ತಿಲ್ಲ. ಗರಸು ನೆಲ ಬಹುಬೇಗ ಒಣಗುತ್ತಿದ್ದು ಸಸಿಗಳೆಲ್ಲ ಬಿಸಿಲಿಗೆ ಬಾಡುತ್ತಿವೆ. ಅಥಣಿ ತಾಲೂಕಿನಾದ್ಯಂತ 1 ಲಕ್ಷ ಸಸಿ ನೆಡಲು ಗುರಿ ಹಾಕಿಕೊಂಡಿದ್ದು ಈಗಾಗಲೇ ಗುಂಡಿ ತೋಡಲಾಗಿದೆ. ಕೆಲವೆಡೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆಯಾದರೂ ನೀರಿನ ವ್ಯವಸ್ಥೆ ಮಾಡಿಕೊಂಡಿಲ್ಲ.

    ನೀರಿಲ್ಲದೆ ಸಸಿ ಒಣಗುತ್ತಿರುವ ಮಾಹಿತಿ ಈಗಷ್ಟೇ ತಿಳಿದಿದೆ. ಎಲ್ಲ ಸಸಿಗೂ ನಿತ್ಯ ನೀರು ಹಾಕುವಂತೆ ಗ್ರಾಪಂಗೆ ಸೂಚಿಸಲಾಗಿದೆ. ಪ್ರಮಾದ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು.

    | ರಾಜು ಕಾಂಬಳೆ ವಲಯ ಅರಣ್ಯಾಧಿಕಾರಿ ಅಥಣಿ

    ಕಲ್ಲು ಪ್ರದೇಶದ ಗುಂಡಿಯಲ್ಲಿ ಮಣ್ಣು ತುಂಬದೆ ಸಸಿ ನೆಟ್ಟಿದ್ದು ಮಾತ್ರವಲ್ಲದೆ ನೀರು ಹಾಕಿಲ್ಲ. 15 ದಿನಗಳಿಂದ ಮಳೆಯೂ ಇಲ್ಲ. ಇದಕ್ಕಾಗಿ ಮೀಸಲಿರಿಸಿದ ಹಣ ಎಲ್ಲಿ ಮಾಯವಾಯಿತು ಎಂದು ಹೇಳಬೇಕು.

    | ಸಂಜಯ ಹುಜರೆ ತೆಲಸಂಗ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts