More

    ಸಂಸ್ಕೃತ ಹಾಗೂ ಸಂಸ್ಕೃತಿ ಭಾರತದ ಪ್ರತಿಷ್ಠೆ: ಎಚ್.ಸತ್ಯಪ್ರಸಾದ್

    ಮೈಸೂರು: ಸಂಸ್ಕೃತ ಕಠಿಣ ಭಾಷೆಯಲ್ಲ. ಸಾಮಾನ್ಯರ ಭಾಷೆ. 200 ವರ್ಷ ಹಿಂದೆ ಆಡಳಿತ ಭಾಷೆಯಾಗಿತ್ತು. ಈಗಲೂ ಸಾವಿರಾರು ಮನೆಗಳಲ್ಲಿ ಸಂಸ್ಕೃತವನ್ನೇ ಮಾತನಾಡುತ್ತಾರೆ ಎಂದು ವಿಜಯ ವಿಠಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಸತ್ಯಪ್ರಸಾದ್ ಹೇಳಿದ್ದಾರೆ.


    ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜು (ಸ್ವಾಯತ್ತ) ಮತ್ತು ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಸಂಸ್ಕೃತ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ಸಂಸ್ಕೃತೋತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತ ಹಾಗೂ ಸಂಸ್ಕೃತಿ ಭಾರತದ ಪ್ರತಿಷ್ಠೆ ಎಂದರು.


    ಭಾರತದಲ್ಲಿ ಅತಿ ಹೆಚ್ಚು ಜನರು ಬಳಸುವ 3ನೇ ಭಾಷೆ ಸಂಸ್ಕೃತ. ಭಾರತದ 800 ಕಾಲೇಜುಗಳಲ್ಲಿ, 80 ದೇಶಗಳ 450 ವಿವಿಗಳಲ್ಲಿ ಸಂಸ್ಕೃತವನ್ನು ಪ್ರಮುಖವಾಗಿ ಕಲಿಸಲಾಗುತ್ತಿದೆ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ವಿ.ಸುರೇಶ್ ಮಾತನಾಡಿ, ನಾವು ಮಾಡಿದ ಪುಣ್ಯ ನಮ್ಮನ್ನು ಕಾಪಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಾವು ಮಾಡಿದ ಪಾಪ ಮಾತ್ರ ಜೀವನ ಪೂರ್ತಿ ನಿರಂತರವಾಗಿ ನಮ್ಮನ್ನು ಕಾಡುತ್ತದೆ. ಹೀಗಾಗಿ ಸದಾ ಒಳ್ಳೆಯದನ್ನೇ ಮಾಡುವ, ಯೋಚಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.


    ಇದಕ್ಕೂ ಮುನ್ನ ಹಿರಿಯ ಪತ್ರಕರ್ತ ಶಿವಮೂರ್ತಿ ಜುಪ್ತಿಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಎಂ.ಪಿ.ರಾಜೇಶ್ವರಿ, ಶೈಕ್ಷಣಿಕ ಡೀನ್ ಡಾ.ಎಚ್.ಬಿ.ಸುರೇಶ್, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಷಡಕ್ಷರಿ, ಡಾ.ಎಂ.ಎಸ್.ಕೋಮಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts