More

    ಸಂವಿಧಾನಬದ್ಧ ಹಕ್ಕು ಕೇಳುತ್ತಿದ್ದೇವೆ

    ಬ್ಯಾಡಗಿ: ಕುರುಬ ಸಮಾಜವನ್ನು ಹೊಸದಾಗಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಿ ಎಂದು ಕೇಳುತ್ತಿಲ್ಲ. ಸ್ವಾತಂತ್ರ್ಯೂರ್ವದಿಂದಲೂ ಇದು ಹಿಂದುಳಿದ ಪಟ್ಟಿಯಲ್ಲಿತ್ತು. ಸಂವಿಧಾನದಲ್ಲಿ ಕುರುಬರಿಗೆ ಅವಕಾಶ ಕಲ್ಪಿಸಿದ್ದರೂ ಸಿಗಬೇಕಾದ ಹಕ್ಕು ದೊರೆತಿಲ್ಲ. ಅದಕ್ಕಾಗಿ ಹೋರಾಟ ತೀವ್ರಗೊಳಿಸಿ ದ್ದೇವೆ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.

    ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕುರುಬ ಸಮಾಜದ ಎಸ್​ಟಿ ಹೋರಾಟ ಪಾದಯಾತ್ರೆ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.

    ಎಸ್ಟಿ ಸೇರ್ಪಡೆಗಾಗಿ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವನೆ ಕಳುಹಿಸಲಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ಸಚಿವೆ ರೇಣುಕಾ ಸಿಂಗ್ ಅವರನ್ನು ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಭೇಟಿ ಮಾಡಿ ದಾಖಲೆ ಸಮೇತ ಮನವರಿಕೆ ಮಾಡಿಕೊಟ್ಟಾಗ, ನ್ಯಾಯದ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಾಲದಲ್ಲಿ ಕುರುಬ ಜಾತಿ ಪಟ್ಟಿಯಿಂದ ಬಿಟ್ಟುಹೋಗಿರುವ ಕುರಿತು ದಾಖಲೆ ಪರಿಶೀಲನೆಗೆ ಸೂಚಿಸಿದ್ದಾರೆ. ಸಂವಿಧಾನಬದ್ಧ ಹಕ್ಕಿಗಾಗಿ ಸಮಾಜದವರು ಸ್ವಯಂಪ್ರೇರಿತರಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶನಿವಾರ ಕದರಮಂಡಲಗಿಯಲ್ಲಿ ವಾಸ್ತವ್ಯವಿದ್ದು, ಭಾನು ವಾರ ರಾಣೆಬೆನ್ನೂರಿಗೆ ಪಾದಯಾತ್ರೆ ತೆರಳಲಿದೆ ಎಂದರು.

    ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದುಳಿದ ಕುರುಬ ಸಮಾಜದ ಸಂಕಷ್ಟ ಅರಿತು ಎಸ್ಟಿ ಪಟ್ಟಿಯಲ್ಲಿ ಸೇರಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರು. ಅವರೇ ನಮಗೆ ನ್ಯಾಯ ಕೊಟ್ಟಿದ್ದು, ಇದನ್ನು ಪಡೆಯುವುದು ನಮ್ಮ ಜನ್ಮಸಿದ್ಧ ಹಕ್ಕಾಗಿದೆ. ಬೆಂಗಳೂರಿನಲ್ಲಿ ಫೆ. 7ರಂದು ಸಮಾಜದ 10 ಲಕ್ಷ ಜನರು ಸೇರಬೇಕು. 60 ಲಕ್ಷ ಶೋಷಿತ ಸಮುದಾಯಕ್ಕೆ ನ್ಯಾಯ ಕೊಡಿಸಲು ಕನಕಗುರುಪೀಠ ಕಂಕಣ ಬದ್ಧವಾಗಿದೆ ಎಂದರು. ಗುರುಪೀಠದ ಸಿದ್ಧರಾಮಾನಂದಪುರಿ, ತಿಂಥಿಣಿ ಶ್ರೀಗಳು, ರೇವಣಸಿದ್ಧ ಶ್ರೀಗಳು, ಬೆಂಗಳೂರಿನ ಮುತ್ತೇಶ್ವರ ಶ್ರೀಗಳು, ಚಿದಾನಂದಯ್ಯ ತುರುವಿನಹಾಳ ಶ್ರೀಗಳು, ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಹರಿಹರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಂಕ್ರಣ್ಣ ಮಾತನವರ, ರಾಜೇಂದ್ರ ಹಾವೇರಣ್ಣನವರ, ಪುರಸಭೆ ಸದಸ್ಯರಾದ ಮಹೇಶ ಶಿಕಾರಿಪುರ, ಮಂಜಪ್ಪ ಬಣಕಾರ, ಬೀರಪ್ಪ ಬಣಕಾರ, ಮೈಲಾರದ ರಾಮಜ್ಜ ಒಡೆಯರ, ಸೋಮಯ್ಯ ಮನಗುಳಿ, ಮಹದೇವಯ್ಯ ಒಡೆಯರು, ಎಸ್.ಕೆ. ಕರಿಯಣ್ಣನವರ, ಚಿಕ್ಕಪ್ಪ ಹಾದಿಮನಿ, ನಾಗರಾಜ ಆನ್ವೇರಿ, ಮಲ್ಲಿಕಾರ್ಜುನ ಕರಿಲಿಂಗಪ್ಪನವರ, ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts