More

    ಸಂಭ್ರಮದ ರುದ್ರಮುನೀಶ್ವರರ ರಥೋತ್ಸವ

    ಅಣ್ಣಿಗೇರಿ: ಪಟ್ಟಣದ ಶ್ರೀ ರುದ್ರಮುನಿ ಮಹಾಸ್ವಾಮಿಗಳ 56ನೇ ಜಾತ್ರಾ ಮಹೋತ್ಸವದ ರಥೋತ್ಸವ ಗುರುವಾರ ಸಂಜೆ 5 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ಜರುಗಿತು. ದಾಸೋಹ ಮಠದ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠದಲ್ಲಿ ಬೆಳಗ್ಗೆ ಪೂಜೆ, ಧಾರ್ವಿುಕ ವಿಧಿ-ವಿಧಾನಗಳು ಜರುಗಿದವು. ನಂತರ ಅನ್ನ ದಾಸೋಹ ನಡೆಯಿತು. ಸಂಜೆ ಸ್ಥಳೀಯ ವಿವಿಧ ವಾದ್ಯ ಮೇಳಗಳೊಂದಿಗೆ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹಾಬಳೇಶ್ವರ ಹೆಬಸೂರ, ಉಪಾಧ್ಯಕ್ಷ ದೇವಪ್ಪ ಬಿಷ್ಠಕ್ಕನವರ, ಶಿವಾನಂದ ಹೊಸಳ್ಳಿ, ವಿಜಯಕುಮಾರ ಗುಡ್ಡದ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts