More

    ಸಂಭ್ರಮಕ್ಕಿಲ್ಲ ದರದ ಬಿಸಿ

    ಹುಬ್ಬಳ್ಳಿ; ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ದರ ಹೆಚ್ಚಿದೆ. ಆದರೂ ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಗಿಲ್ಲ. ಎಲ್ಲಿ ನೋಡಿದರೆಲ್ಲ ಮುಗಿ ಬಿದ್ದು ಜನರು ವ್ಯಾಪಾರ ಭರಾಟೆಯಲ್ಲಿ ತೊಡಗಿದ್ದಾರೆ.

    ನಗರದ ದುರ್ಗದಬೈಲ್, ಜನತಾ ಬಜಾರ್, ಕೊಯಿನ್ ರಸ್ತೆ, ಮರಾಠಾ ಗಲ್ಲಿ ಇತರೆಡೆ ಜನಜಂಗುಳಿ ಇದೆ. ಬೀದಿ ಬದಿ ಹೂವು, ಬಾಳೆದಿಂಡು, ಕಬ್ಬು, ಹಣ್ಣು, ಪ್ರಣತಿ, ಆಕಾಶ ಬುಟ್ಟಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಿತ್ತು. ಜುವೆಲರಿ, ಬಟ್ಟೆ, ರ್ಕಿದಿ ಖಾತೆ ಪುಸ್ತಕಗಳ ಮಾರಾಟವೂ ಜೋರಾಗಿ ನಡೆದಿದೆ.

    ಕಳೆದ ವರ್ಷಕ್ಕಿಂತ ಈ ಬಾರಿ ದೀಪಾವಳಿ ಖರೀದಿ ಅಷ್ಟು ಜೋರಿಲ್ಲವೆಂದರೂ ಕಳೆದ ಮೂರು ದಿನಗಳಿಂದ ಮಾರಾಟ ಮಾಡಲು ಮಾರುಕಟ್ಟೆಗೆ ಬರುವವರ ಸಂಖ್ಯೆ ಹೆಚ್ಚಿದೆ. ಎಷ್ಟೇ ದುಬಾರಿ ಬೆಲೆ ಇದ್ದರೂ ಹಬ್ಬದ ಸಂಭ್ರಮದಲ್ಲಿ ಮಿಂದೇಳಲು ಜನರು ತಯಾರಾಗಿದ್ದಾರೆ. ಕುಟುಂಬ ಸಮೇತ ಕೆಲವರು ದ್ವಿಚಕ್ರ ವಾಹನದಲ್ಲಿ ಬಂದರೆ ಮತ್ತೆ ಕೆಲವರು ಕಾರ್​ಗಳಲ್ಲಿ ಆಗಮಿಸಿ ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಪರಸ್ಪರ ಅಂತರ ಕಾಯ್ದುಕೊಂಡು ವಹಿವಾಟು ನಡೆಸುತ್ತಿದ್ದಾರೆ. ಅಂಗಡಿ ಮಾಲೀಕರೂ ಕರೊನಾ ಸೋಂಕು ತಾಗದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಎಲ್ಲೆಡೆ ನಿರ್ಭಯವಾಗಿ ವ್ಯಾಪಾರ ನಡೆದಿದೆ.

    ಫುಟ್​ಪಾತ್ ಬಳಕೆಯಿಂದ ದಟ್ಟಣೆ: ಕೆಲವು ವ್ಯಾಪಾರಿಗಳು ಫುಟ್​ಪಾತ್ ಮೇಲೆ ಕುಳಿತು ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೂ ಅಡ್ಡಿಯಾಗಿತ್ತು. ಅಲ್ಲಿಯೇ ಇದ್ದ ಪೊಲೀಸರು ಸುಮ್ಮನೆ ನೋಡುತ್ತಿದ್ದರು. ಮಾಸ್ಕ್ ಹಾಕಿಕೊಂಡಿದ್ದರೂ ಧೂಳಿನಿಂದ ಜನರು ಕಂಗೆಟ್ಟಿದ್ದರು.

    ಕಳೆದ 2 ದಿನಗಳಿಂದ ವ್ಯಾಪಾರ ವಹಿವಾಟು ಜೋರು ನಡೆದಿದೆ. ರ್ಕಿದಿ ಖಾತೆ ಪುಸ್ತಕ ಖರೀದಿಸುವ ಮೊದಲು ಪೂಜಾ ನಿಯಮಗಳನ್ನು ಪಾಲಿಸುತ್ತಿದ್ದರು. ಈಗೀಗ ರೆಡಿಮೇಡ್ ಲಕ್ಷ್ಮೀ ಬುಕ್ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಿದ್ದಾರೆ ಅಷ್ಟೇ. ಮೊದಲೆಲ್ಲ ಅಕೌಂಟ್, ಕ್ಯಾಷ್, ಲೆಕ್ಜರ್ ಬುಕ್ ಖರೀದಿ ಜಾಸ್ತಿ ಇತ್ತು. | ಸಂಗಮ ಹಂಜಿ ಗಂಗಾಧರ ಬುಕ್ ಡಿಪೋ ಮಾಲೀಕ

    ದರ ವಿವರ: * ವಿಶಿಷ್ಟ ಪ್ರಣತಿ-30ರಿಂದ 100 ರೂ. * ಚೆಂಡು ಹೂವು-80 ರೂ. (ಮಾರು) * ಮಲ್ಲಿಗೆ-30 ರೂ. * ಕನಕಾಂಬರ-80 ರೂ. * ಸೀತಾಫಲ-220 ರೂ. ಕೆಜಿ * ಬಾಳೆ ಹಣ್ಣು-30 ರೂ. ಡಜನ್ *ಮೋಸಂಬಿ-160 ರೂ. ಕೆಜಿ *ಸೇಬು-160ರಿಂದ 200 ರೂ. ಕೆಜಿ *ದಾಳಿಂಬೆ-200 ರೂ. ಕೆಜಿ *ಕಬ್ಬು-120 ರೂ.ಗೆ 5 *ಬಾಳೆ ದಿಂಡು-2ಕ್ಕೆ 50 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts