More

    ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಿ

    ಕೊಕಟನೂರ: ಹಿಪ್ಪರಗಿ ಅಣೆಕಟ್ಟು ಹಾಗೂ ಝೀರೋ ಪಾಯಿಂಟ್ ಬಳಿ ಇರುವ ನಂದೇಶ್ವರ, ಜನವಾಡ, ಮಹಿಷವಾಡಗಿ ಹಾಗೂ ಸವದಿ, ಸವದಿ ದರ್ಗಾ ಕಾಳಜಿ ಕೇಂದ್ರಗಳಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಬುಧವಾರ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆ ಆಲಿಸಿದರು.

    ಕಾಳಜಿ ಕೇಂದ್ರದಲ್ಲಿ ನಮಗೆ ಸರಿಯಾದ ವ್ಯವಸ್ಥೆ ಇಲ್ಲ. ಅನ್ನ, ಸಾಂಬಾರ ನೀಡುತ್ತಾರೆ. ಜಾನುವಾರುಗಳಿಗೆ ಸರಿಯಾಗಿ ಮೇವು ವಿತರಿಸುತ್ತಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. ಅದಕ್ಕೆ ಸ್ಪಂದಿಸಿದ ಪಾಟೀಲ, ಇದು ಬಿಸಿಯೂಟ ಕೇಂದ್ರವಲ್ಲ. ಕಾಳಜಿ ಕೇಂದ್ರ. ಕೇವಲ ಅನ್ನ ನೀಡಿದರೆ ಸಾಲದು. ಸರಿಯಾದ ಊಟ ನೀಡಬೇಕು. ಜಾನುವಾರುಗಳಿಗೆ ಸರಿಯಾಗಿ ಮೇವು ಕೊಡಬೇಕು ಎಂದು ಅಥಣಿ ತಹಸೀಲ್ದಾರ್ ದುಂಡಪ್ಪ ಕೋಮಾರಗೆ ಸೂಚಿಸಿದರು, ನಂದೇಶ್ವರ ನಿವಾಸಿಗಳು ಮಾತನಾಡಿ, ನಮ್ಮ ಸರಹದ್ದಿನ 290 ಎಕರೆ ಜಮೀನು ವ್ಯಾಪ್ತಿಯಲ್ಲಿ ಜನವಾಡ ಗ್ರಾಮಸ್ಥರಿಗೆ ಜಾಗ ನೀಡಿದ್ದಾರೆ. ಆ ಜಾಗ ನಮಗೆ ಸೇರುವಂತೆ ಮಾಡಬೇಕು ಎಂದು ವಿನಂತಿಸಿದರು. ಹಿಪ್ಪರಗಿ ಅಣೆಕಟ್ಟೆಯ ನೀರಿನಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರಿಗೆ ಶಾಶ್ವತ ಪುನರ್ವಸತಿ ನೀಡಿ ಮನೆಗಳ ಹಕ್ಕು ಪತ್ರ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಕರೆ ಮಾಡಿದ ಎಸ್.ಆರ್.ಪಾಟೀಲ, ಸ್ಥಳ ಪರಿಶೀಲನೆ ಮಾಡಿ ಸಂತ್ರಸ್ತರ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು. ಗಜಾನನ ಮಂಗಸೂಳಿ, ಸುರೇಶಗೌಡ ಪಾಟೀಲ, ಅನಿಲ ಸುಣಧೋಳಿ, ಸತ್ಯಪ್ಪ ಬಾಗೆಣ್ಣವರ, ಬಸವರಾಜ ಬುಟಾಳಿ, ಧರೆಪ್ಪ ಠಕ್ಕಣ್ಣವರ, ಸಿದ್ಧಾರ್ಥ ಶಿಂಗೆ, ಸುನೀಲ ಸಂಕ, ಸುನೀತಾ ಐಹೊಳೆ, ಸುಶೀಲಕುಮಾರ ಬೆಳಗಲಿ, ಉಮರ್ ಸೈಯದ್ ಇದ್ದರು.

    ನಂದೇಶ್ವರ ವರದಿ: ನಾವು ಉಪವಾಸ ಇರುತ್ತೇವೆ. ಆದರೆ ನಮ್ಮ ಕುಟುಂಬಗಳಿಗೆ ಆಧಾರವಾಗಿರುವ ದನಕರುಗಳಿಗೆ ಮೇವು ಒದಗಿಸಿ ಎಂದು ಝೀರೋ ಪಾಯಿಂಟ್ ಕಾಳಜಿ ಕೇಂದ್ರದಲ್ಲಿರುವ ನಂದೇಶ್ವರ ಹಾಗೂ ವಿವಿಧ ಗ್ರಾಮಸ್ಥರು ಬುಧವಾರ ಅಥಣಿ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಮನವಿ ಮಾಡಿದರು. ಕೃಷ್ಣಾ ನದಿ ಪ್ರದೇಶ ಹುಲ್ಲುಗಾವಲು ಇರುವುದರಿಂದ ಒಂದು ಕುಟುಂಬದಲ್ಲಿ ಕನಿಷ್ಠ 4 ದನಕರುಗಳಿವೆ. ಬೆಲೆೆ ಬಾಳುವ ದನಗಳನ್ನು ನಮ್ಮ ಜತೆಗೆ ತಂದಿದ್ದೇವೆ. ಹೈನುಗಾರಿಕೆಯೇ ನಮಗೆ ಆಧಾರವಾಗಿದೆ. ಮೂಕ ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ನಮ್ಮ ಉಪ ಜೀವನ ಮಂಕಾಗುತ್ತದೆ. ಅವುಗಳಿಗೆ ಮೇವು ದೊರಕದಿದ್ದರೆ ನಮಗೆ ರಾತ್ರಿ ನಿದ್ರೆಯೇ ಬರುವುದಿಲ್ಲ ಎಂದು ಅಳಲು ತೋಡಿಕೊಂಡರು. ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ದುಂಡಪ್ಪ ಕೋಮಾರ, ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿರು. ನೋಡಲ್ ಅಧಿಕಾರಿಗೆ ಸೂಚನೆ ನೀಡಿ ಮೇವಿನ ವ್ಯವಸ್ಥೆ ಮಾಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts