More

    ಸಂಡೇ ಕರ್ಫ್ಯೂಗೆ ಸಾರ್ವಜನಿಕರ ಸಹಕಾರ

    ಹಳಿಯಾಳ: ತಾಲೂಕಿನಲ್ಲಿ ಸಂಡೇ ಕರ್ಫ್ಯೂಗೆ ಜನ ಸಂಪೂರ್ಣ ಸಹಕಾರ ನೀಡಿದ್ದಾರೆ. ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಹೊರತು ಪಡಿಸಿ ಇತರ ವಹಿವಾಟುಗಳು ಸಂಪೂರ್ಣ ಬಂದ್ ಆಗಿದ್ದವು. ಪಟ್ಟಣದಲ್ಲಿ ಜು. 6ರಿಂದ ಸಂಜೆ 6.30ರಿಂದ ಎಲ್ಲ ಆರ್ಥಿಕ ವಹಿವಾಟುಗಳನ್ನು, ಅಂಗಡಿ, ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ವ್ಯಾಪಾರಸ್ಥರ ಒಕ್ಕೂಟದ ತಾಲೂಕು ಅಧ್ಯಕ್ಷ ಸಚಿನ್ ಹಳ್ಳಿಕೇರಿ ತಿಳಿಸಿದ್ದಾರೆ.

    ಯಲ್ಲಾಪುರದಲ್ಲಿ ಮಳೆ ಜೋರಾಗಿದ್ದರಿಂದ ಜನ ಮನೆಯಿಂದ ಹೊರಬರಲಿಲ್ಲ. ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ತರಕಾರಿ, ಮೀನು, ಮಾಂಸ ಮಾರಾಟಕ್ಕೆ ಅನುಮತಿ ಇದ್ದರೂ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು. ವಾಹನ, ಜನರ ಓಡಾಟ ತೀರಾ ವಿರಳವಾಗಿತ್ತು. ಬಸ್, ಆಟೋಗಳ ಸಂಚಾರ ಸ್ಥಗಿತಗೊಂಡಿತ್ತು.

    ಭಟ್ಕಳ ತಾಲೂಕಿನಲ್ಲಿ ಜನರು ಮನೆಯಿಂದ ಹೊರಗೆ ಬರಲಿಲ್ಲ. ಔಷಧ ಅಂಗಡಿ ಹೊರತುಪಡಿಸಿ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಪಿಎಸ್​ಐ ಎಚ್. ಕುಡಗಂಟಿ ಮಾತನಾಡಿ, ಸಾರ್ವಜನಿಕರು ಈ ಬಾರಿ ತಾಲೂಕಾಡಳಿತದೊಂದಿಗೆ ಸಹಕಾರ ನೀಡಿದ್ದಾರೆ. ಎಲ್ಲಿಯೂ ನಮಗೆ ನಿಯಂತ್ರಿಸುವ ಪ್ರಮೇಯವೇ ಬಂದಿಲ್ಲ. ರಸ್ತೆಗಳೆಲ್ಲ ಖಾಲಿಯಾಗಿದ್ದವು. ಪೊಲೀಸರ ವಿನಃ ಮತ್ಯಾರೂ ಕಂಡು ಬಂದಿಲ್ಲ. ಜನರು ಇದೇ ತೆರನಾಗಿ ಇಲಾಖೆಗೆ ಆಡಳಿತಕ್ಕೆ ಸಹಕರಿಸಿಲಿ’ ಎಂದು ಹೇಳಿದರು. ಮುಂಡಗೋಡ ಪಟ್ಟಣದಲ್ಲಿ ಸಿಪಿಐ ಪ್ರಭುಗೌಡ ಕಿರೇದಳ್ಳಿ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸಿದ್ದಾಪುರ, ದಾಂಡೇಲಿಯಲ್ಲಿ ಪ್ರಮುಖ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts