More

    ಸಂಗೋಳಿ ರಾಯಣ್ಣ ಇತಿಹಾಸ ಪಠ್ಯದಿಂದ ಕೈಬಿಡದಂತೆ ಆಗ್ರಹ

    ಜೇವರ್ಗಿ: ಪಠ್ಯ ಪುಸ್ತಕದಿಂದ ಐತಿಹಾಸಿಕ ಸಾಮಾಜಿಕ ಕ್ರಾಂತಿ ಮಾಡಿದ ಸಂಗೋಳ್ಳಿ ರಾಯಣ್ಣ ಅವರ ಇತಿಹಾಸ್ ತೆಗೆದು ಹಾಕದಂತೆ ಒತ್ತಾಯಿಸಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ತಾಲೂಕು ಘಟಕದ ವತಿಯಿಂದ ತಹಸಿಲ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ನಿಂಗಣ್ಣ ರದ್ದೇವಾಡಗಿ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಪಠ್ಯ ಪುಸ್ತಕದಿಂದ ಈ ಮಹಾನ್ ನಾಯಕನ ಇತಿಹಾಸ ಕೈಬಿಟ್ಟಿದ್ದು, ಈ ಮಹಾನ್ ವ್ಯಕ್ತಿ ಸಮಸ್ತ ಸಮುದಾಯ ಹಾಗೂ ಯುವ ಪೀಳಿಗೆಗೆ ತಮ್ಮದೇಯಾದ ತ್ಯಾಗ, ಬಲಿದಾನ, ದೇಶ ಪ್ರೇಮ, ಶೌರ್ಯಗಳಿಂದ ಸರ್ವರಿಗೂ ಆದರ್ಶಪ್ರಾಯ. ಪಠ್ಯದಿಂದ ತೆಗೆದರೆ ಈ ಐತಿಹಾಸಿಕ ಪುರುಷರ ಅಭಿಮಾನಿಗಳ ತಾಕತ್ತನ್ನು ಪರೀಕ್ಷೆಗೆ ಒಡ್ಡಿದಂತೆ ಆಗುತ್ತದೆ ಎಂದರು.
    ನಂತರ ತಹಸೀಲ್ದಾರ್ ಸಿದ್ದರಾಯ ಭೋಸಗಿ ಅವರ ಮೂಲಕ ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಕನಕಗುರು ಪೀಠ ತಿಂಥಣಿಯ ಲಿಂಗಬೀರ ದೇವರು, ಮುಖಂಡರಾದ ಸಮಾಧಾನ ಪೂಜಾರಿ, ಸಂಘಟನೆ ತಾಲೂಕು ಕಾರ್ಯಧ್ಯಕ್ಷ ಸಿದ್ಧು ಮಾವನೂರ, ಸಿದ್ದು ಗಜ, ಮರೆಪ್ಪ ಸರಡಗಿ, ರಮೇಶ ಸಿದ್ನಾಳ, ಬಸವರಾಜ ಮದ್ರಕಿ, ಸಿದ್ದು ಅಂಕಸದೊಡ್ಡಿ, ಮಾಳಪ್ಪ ಪೂಜಾರಿ, ಬಸವರಾಜ ಬಾಗೇವಾಡಿ, ಶಂಕರಲಿಂಗ ಕರಕಿಹಳ್ಳಿ, ಸಂತೋಷ ಗುಡೂರ, ರವಿಚಂದ್ರ ಗುತ್ತೇದಾರ, ರೇವಣಸಿದ್ದ ಯಡ್ರಾಮಿ, ಯಲ್ಲಾಲಿಂಗ ಅಪಜಲ್ಪೂರ, ಶರಣಗೌಡ ಪೂಜಾರಿ, ನಾಗರಾಜ ಮಾಡಬೂಳ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts