More

    ಸಂಗೀತ ಎಂಬುದು ಗಾಂಧರ್ವ ವಿದ್ಯೆ


    ಯಾದಗಿರಿ: ಭಾರತದ ಸಂಸ್ಕೃತಿ ಪ್ರಪಂಚದ ಪ್ರತಿಯೊಂದು ದೇಶದ ಸಂಸ್ಕೃತಿಗಿಂತ ಶ್ರೇಷ್ಠ ಮತ್ತು ವಿಭಿನ್ನವಾಗಿದೆ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಅಗಾಧವಾದ ಶಕ್ತಿ ಇದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು.

    ಭಾನುವಾರ ನಗರದ ಜಿಲ್ಲಾ ಕಸಾಪ ಭವನದಲ್ಲಿ ಯಡಿಯೂರ ಸಿರಿ ಕಲಾ ಸಂಸ್ಥೆಯಿಂದ ಪಂಡಿತ್ ಕಿರಣ ಹಾನಗಲ್ರ 5ನೇ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ `ಉದಯ ರಾಗದಿಂದ ಸಂಧ್ಯಾರಾಗದ’ ವರೆಗೆ ಗಾನ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಗೀತ ಗಾಂಧರ್ವ ವಿದ್ಯೆ. ಇದನ್ನು ಸಾಧಿಸಬೇಕಾದರೆ ಹಲವು ವರ್ಷ ಅತ್ಯಂತ ಶೃದ್ಧೆಯಿಂದ ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಎಂದರು.

    ಸಂಗೀತ ಗಾಯನದಿಂದ ದೇಹದ ಚೆತನ್ಯ ಶಕ್ತಿ ವೃದ್ಧಿಸುತ್ತದೆ. ಆಸಕ್ತಿಯಿಂದ ಸಂಗೀತ ಆಲಿಸಿ, ನಿರಾಳತೆಯನ್ನು ಹೊಂದುವವರು ಯಾವಾಗಲೂ ಸುಖಿಗಳು. ಜಗತ್ತಿನ ಪ್ರತಿಯೊಂದು ಚಳುವಳಿಗೆ ಸಾಹಿತ್ಯ ಪ್ರೆರಣೆ ನೀಡಿದೆ. ಶ್ರೆಷ್ಠ ಸಾಹಿತ್ಯದೊಂದಿಗೆ ಸಂಗೀತ ಸೇರಿಕೊಂಡರೆ ಅಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಆಸ್ಪದ ಇರುವುದಿಲ್ಲ. ಸಂಗೀತ, ಸಾಹಿತ್ಯಕ್ಕೆ ಮನುಷ್ಯ ಕುಲವನ್ನು ಪರಿವರ್ತನೆಗೊಳಿಸುವ ಶಕ್ತಿ ಇದೆ ಎಂದು ತಿಳಿಸಿದರು.

    ಶ್ರೀರಕ್ಷ ಪದವಿ ಕಾಲೇಜಿನ ಪ್ರಾಚಾರ್ಯ ಡಾ,ಕೃಷ್ಣಮೂತರ್ಿ ಕುಲಕಣರ್ಿ ಮಾತನಾಡಿ, ಜಿಲ್ಲಾಕೇಂದ್ರವಾದ ಯಾದಗಿರಿಯಲ್ಲಿ ಇಷ್ಟು ವರ್ಷ ಸಂಗೀತ ಪಾಠಶಾಲೆ ಇರದೆ ನಮ್ಮ ಮಕ್ಕಳು ಇಂಥ ಅಮೂಲ್ಯ ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ, ಯಡಿಯೂರ ಸಿರಿ ಶಾಲೆ ಇಂದು ಸಾಕಷ್ಟು ಮಕ್ಕಳಿಗೆ ಸಂಗೀತ ಪಾಠ ಹೇಳಿ ಕೊಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

    ಪಾಠಶಾಲೆ ಶರಣುಕುಮಾರ ವಠಾರ ಮಾತನಾಡಿ, ಗುರು ಪುಟ್ಟರಾಜ ಗವಾಯಿಗಳ ಆಶಿವರ್ಾದದಿಂದ ಶಾಸ್ತ್ರೀಯ ಸಂಗೀತದ ಜ್ಞಾನ ಹೊಂದಿದ ನಾನು ಯಾದಗಿರಿಯಲ್ಲಿನ ಮಕ್ಕಳಿಗೆ ಅದನ್ನು ಉಣಬಡಿಸುವ ಹಂಬಲವಿಟ್ಟುಕೊಂಡಿದ್ದೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts