More

    ಸಂಕೇಶ್ವರದಲ್ಲಿ ಮೊಳಗಿದ ಕನ್ನಡ ನಿನಾದ

    ಸಂಕೇಶ್ವರ, ಬೆಳಗಾವಿ: ಪಟ್ಟಣದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಶನಿವಾರ ಅದ್ದೂರಿಯಾಗಿ ಆಚರಿಸಲಾಯಿತು. ಜಾನಪದ ನೃತ್ಯ, ಶಾಲಾ ಮಕ್ಕಳ ನೃತ್ಯ, ವಾದ್ಯಮೇಳ ಮೆರುಗು ತಂದವು. ಎಲ್ಲೆಡೆ ಕನ್ನಡ ಬಾವುಟ ರಾರಾಜಿಸಿತು. ಮೆರವಣಿಗೆಯಲ್ಲಿ ಯುವಜನರು ಕುಣಿದು ಕುಪ್ಪಳಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವಕ್ಕೆ ಸಂಕೇಶ್ವರದ ಗಾಂಧಿ ಚೌಕ್‌ನಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಿರಿಯರಾದ ಅಪ್ಪಾಸಾಹೇಬ ಶಿರಕೋಳಿ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮೆರವಣಿಗೆಯು ಆಜಾದ್ ರೋಡ್, ಕಮತನೂರ ವೇಸ್, ಸುಭಾಷ ರೋಡ್ ಹಾಗೂ ಪೋಸ್ಟ್ ಸರ್ಕಲ್ ಮೂಲಕ ಸಾಗಿತು.

    ರೂಪಕ ಮೆರವಣಿಗೆ: ಭುವನೇಶ್ವರಿ ದೇವಿ, ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ದಿ.ಉಮೇಶ ಕತ್ತಿ, ಸಂಸ್ಕೃತಿ ಬಿಂಬಿಸುವ, ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಹೋರಾಟಗಾರರ ರೂಪಕಗಳು, ಪುನೀತ್ ರಾಜಕುಮಾರ ಭಾವಚಿತ್ರ, ಕೋಲಾಟ, ಡೊಳ್ಳು ಕುಣಿತ, ಕರಡಿ ಮಜಲು, ಝಾಂಜ್ ಪಥಕ್ ಗಮನ ಸೆಳೆದವು. ಪುರಸಭೆ ಅಧ್ಯಕ್ಷೆ ಸೀಮಾ ಹತನೂರೆ, ಉಪಾಧ್ಯಕ್ಷ ಅಜಿತ ಕರಜಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ ಪರ್ವತರಾವ್, ಸಾಹಿತಿಗಳಾದ ಪ್ರೊ.ಚಂದ್ರಶೇಖರ ಅಕ್ಕಿ, ಮಹೇಶ ಹಟ್ಟಿಹೊಳಿ,
    ಪ್ರಮೋದ ಹೊಸಮನಿ, ದಿಲೀಪ ಹೊಸಮನಿ, ಸಂತೋಷ ಮುಡಶಿ, ಪ್ರೀತಂ ಸುಮಾರೆ, ಬಂಡು ಹತನೂರೆ, ಆನಂದ ಹರಗಾಪೂರೆ, ಪ್ರಶಾಂತ ಮನ್ನಿಕೇರಿ, ಸಂತೋಷ ಸತ್ಯನಾಯಿಕ ಸೇರಿ ಮುಖಂಡರು ಹಾಗೂ ಸಾವಿರಾರು ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts