More

    ಸಂಕಷ್ಟದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರು

    ಕಾರವಾರ: ವೈದ್ಯಕೀಯ ಪದವಿ ಪಡೆಯಲು ಮೂರು ತಿಂಗಳ ಹಿಂದೆ ಫಿಲಿಪಿನ್ಸ್​ಗೆ ತೆರಳಿದ್ದ ಕಾರವಾರ, ಚಿತ್ರದುರ್ಗ ಮೂಲದ ನಾಲ್ವರು ವಿದ್ಯಾರ್ಥಿನಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಅಮದಳ್ಳಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾಗಿರುವ ಜೈ ರಂಗನಾಥ ಅವರ ಪುತ್ರಿ ಅನುಶ್ರೀ, ಚಿತ್ರದುರ್ಗದ ಲಿಖಿತಾ ರೇವಣಸಿದ್ದಪ್ಪ, ಚಂದನಾ ಮತ್ತು ಮೇಘನಾ ಸಂಕಷ್ಟಕ್ಕೆ ಒಳಗಾಗಿದ್ದರಾರೆ.

    ಫಿಲಿಪಿನ್ಸ್​ನಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಇಡೀ ರಾಷ್ಟ್ರವನ್ನು ಶಟ್​ಡೌನ್ ಮಾಡಲಾಗಿದೆ. ಅಲ್ಲಿಂದ ಭಾರತಕ್ಕೆ ಬರುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಹಾಗಾಗಿ ವಿದ್ಯಾರ್ಥಿನಿಯರು ಭಾರತಕ್ಕೆ ಬರಲೂ ಆಗದೆ, ಆ ದೇಶದಲ್ಲಿ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

    ‘ಹಾಸ್ಟೆಲ್​ನಲ್ಲಿ ಸದ್ಯಕ್ಕೆ ಊಟ, ತಿಂಡಿ ಎಲ್ಲ ಸಿಗುತ್ತಿದೆ. ಆದರೆ, ಇಡೀ ರಾಷ್ಟ್ರ ಬಂದಾಗಿರುವುದರಿಂದ ಮುಂದೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಅನುಶ್ರೀ.

    ಪಾಲಕರು ಆತಂಕದಲ್ಲಿ: ಉನ್ನತ ಶಿಕ್ಷಣಕ್ಕಾಗಿ ಹೆಣ್ಣು ಮಕ್ಕಳನ್ನು ವಿದೇಶಕ್ಕೆ ಕಳಿಸಿದ ಪಾಲಕರು ಆತಂಕದಲ್ಲಿದ್ದಾರೆ. ಮಗಳಿಗೆ ಎಲ್ಲಿ ತೊಂದರೆಯಾಗುವುದೋ ಎಂಬ ಕಾರಣಕ್ಕೆ ಶೀಘ್ರ ಸ್ವದೇಶಕ್ಕೆ ಬರಲು ತಿಳಿಸಿದ್ದರು. ಮಾ. 19 ರಂದು ವಿಮಾನ ಟಿಕೆಟ್ ಕೂಡ ಕಾಯ್ದಿರಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ವಿಮಾನ ಸಂಚಾರವನ್ನೇ ಬಂದ್ ಮಾಡಲಾಗಿದೆ. ಭಾರತ ಸರ್ಕಾರ ಫಿಲಿಪಿನ್ಸ್​ನಲ್ಲಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆತರಬೇಕು ಎಂದು ಪಾಲಕರಾದ ಜೈ ರಂಗನಾಥ, ನಾಗರತ್ನ ಹಾಗೂ ರೇವಣಸಿದ್ದಪ್ಪ ಅವರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts