More

    ಸಂಕಷ್ಟಕ್ಕೀಡಾದವರಿಗೆ ಕೈಹಿಡಿಯುವುದು ಎಲ್ಲರ ಕರ್ತವ್ಯ, ಬ್ರಾಹ್ಮಣ ಸಮಾಜದ ಅರ್ಚಕರಿಗೆ ದಿನಸಿ ಕಿಟ್ ವಿತರಣೆ

    ಆನೇಕಲ್: ಕರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರ ಸಹಾಯಕ್ಕೆ ನಿಲ್ಲಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ಸವಿತಾ ಸಮಾಜದ ಆನೇಕಲ್ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್ ಹೇಳಿದರು.

    ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಬ್ರಾಹ್ಮಣ ಸಮಾಜದ ಅರ್ಚಕರಿಗೆ ದಿನಸಿ ಕಿಟ್ ವಿತರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

    ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಅರ್ಚಕರ ಸಹಾಯಕ್ಕೆ ನಿಲ್ಲುವ ಸಲುವಾಗಿ ಆನೇಕಲ್ ತಾಲೂಕು ಸವಿತಾ ಸಮಾಜದಿಂದ ನಿರ್ಣಯ ಮಾಡಿದ್ದು, ಉತ್ತಮ ಸೇವೆ ಸಲ್ಲಿಸಿದ ಅರ್ಚಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.

    ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಸಂಪತ್ ಕುಮಾರ್ ಸಹಕಾರ ಮತ್ತು ಅತ್ತಿಬೆಲೆ ಎನ್‌ವಿಟಿ ಕಂಪನಿ, ಅತ್ತಿಬೆಲೆಯ ಪೊಲೀಸ್ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್ ಸಹಕಾರದಿಂದ ತಾಲೂಕು ವ್ಯಾಪ್ತಿಯಲ್ಲಿ ಕ್ಷೌರಿಕ ಸಮಾಜದ ಕಲಾವಿದರು ಹಾಗೂ ಇತರ ಸಮಾಜದ ಬಡವರಿಗೆ ಒಟ್ಟು 3600 ಕಿಟ್‌ಗಳನ್ನು ನೀಡಲಾಗಿದೆ ಎಂದರು.

    ಹಿರಿಯ ವೈದ್ಯ ಡಾ.ಎಸ್.ಎಸ್.ಸುಬ್ರಮಣ್ಯ ವೈಲಾಯ ಮಾತನಾಡಿ, ತಾಲೂಕು ಸವಿತಾ ಸಮಾಜ ಸಂಘ ಸಂಸ್ಥೆ ಸಹಕಾರದೊಂದಿಗೆ ಬಡವರಿಗೆ ದಿನಸಿ ಕಿಟ್ ನೀಡುತ್ತಾ ಬಂದಿದ್ದು, ಇಂತಹ ಸೇವಾ ಮನೋಭಾವವನ್ನು ಎಲ್ಲರೂ ರೂಢಿಸಿಕೊಂಡರೆ ಬಡವರು ಹಾಗೂ ನಿರ್ಗತಿಕರಿಗೆ ಹೆಚ್ಚಿನ ಸಹಾಯ ದೊರೆಯುತ್ತದೆ ಎಂದರು.

    ವೈದ್ಯ ಡಾ.ಎಸ್.ಎಸ್. ಸುಬ್ರಮಣ್ಯ ವೈಲಾಯ, ಆನೇಕಲ್ ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಸಿ.ವಿ ರಾಮಮೂರ್ತಿ, ಪುರಸಭಾ ಸದಸ್ಯೆ ಎಚ್.ಆರ್ ಅನಿತಾ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

    ಬ್ರಾಹ್ಮಣ ಸಮಾಜದ ಮುಖಂಡರಾದ ಸಿ.ಎನ್. ರವಿಶಾಸ್ತ್ರಿ, ರಾಜಕುಮಾರ, ನರಸಿಂಹಮೂರ್ತಿ, ಉಮೇಶ ಶಾಸ್ತ್ರಿ, ಸೀತಾರಾಮಶಾಸ್ತ್ರಿ, ಆನೇಕಲ್ ತಾಲೂಕು ಸವಿತಾ ಸಮಾಜದ ಉಪಾಧ್ಯಕ್ಷ ಎಂ. ಎಸ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮುನಿರಾಜು, ಖಜಾಂಚಿ ಎಂ. ನಾಗರಾಜು, ಸಂಚಾಲಕ ಮೋಹನ್ ಬಾಬು, ಆನೇಕಲ್ ಟೌನ್ ಅಧ್ಯಕ್ಷ ಎಂ. ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಜಿ.ವರದರಾಜು, ಗೌರವ ಅಧ್ಯಕ್ಷ ರಾಜಗೋಪಾಲ, ಸಂಘಟನಾ ಕಾರ್ಯದರ್ಶಿ ಎಂ.ದೀಪ್ತಿರಾಜು, ಚಂದಾಪುರ ಅಧ್ಯಕ್ಷ ಎಂ. ಶ್ರೀನಿವಾಸ್, ಬನ್ನೇರುಘಟ್ಟ ಸಂಘದ ನಿರ್ದೇಶಕ ರಾಜಗೋಪಾಲ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts