More

    ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರ 6ಕ್ಕೆ ತೆರೆಗೆ 

    ದಾವಣಗೆರೆ: ಛಾಯಾಗ್ರಾಹಕರ ಬದುಕಿನ ಕಥಾ ಹಂದರವುಳ್ಳ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಲನಚಿತ್ರ, ಜ.6ರಂದು ರಾಜ್ಯದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
    ಫೋಟೋಗ್ರಾಫರ್‌ಗಳಿಗೆ ಅವರದೇ ಆದ ನೋವು, ಕಾಯಕ ಹಾಗೂ ಭಾವನೆಗಳಿವೆ. ಈ ಚಿತ್ರದಲ್ಲಿ ಅವುಗಳನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ, ನಟ ರಾಜೇಶ್ ಧ್ರುವ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಹಳ್ಳಿಯಲ್ಲಿದ್ದರೆ ಜೀವನದಲ್ಲಿ ಮುಂದೆ ಬರಲು ಆಗದು, ನಗರಕ್ಕೆ ಹೋದರೆ ಕೈತುಂಬಾ ಹಣ ದುಡಿಯಬಹುದು. ಉತ್ತಮ ಸಾಧನೆ ಮಾಡಬಹುದು ಎಂಬ ಕನಸು ಹೊತ್ತ ಫೋಟೋಗ್ರಾಫರ್ ಕೊನೆಯಲ್ಲಿ ಆತ ಗೆಲ್ಲುತ್ತಾನೋ ಅಥವಾ ಸೋಲುತ್ತಾನೋ ಎಂಬುದು ಚಿತ್ರದಲ್ಲಿ ತಿಳಿಯುತ್ತದೆ ಎಂದು ಹೇಳಿದರು.
    ಹೊಸ ವರ್ಷದಲ್ಲಿ ತೆರೆ ಕಾಣುತ್ತಿರುವ ಈ ಸಿನಿಮಾದಲ್ಲಿ ಹೊಸ, ಸ್ಥ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಇದು ನನ್ನ ಮೊದಲ ಪ್ರಯತ್ನ. ಉತ್ತರಕನ್ನಡ ಭಾಷೆಯನ್ನು ಮೊದಲ ಬಾರಿಗೆ ಬಳಸಿಕೊಳ್ಳಲಾಗಿದೆ. ಚಿತ್ರದ ಪುಕ್ಸಟ್ಟೆ..ಹಾಡು ಈಗಾಗಲೇ ಟ್ರೆಂಡ್ ಸೃಷ್ಟಿಸಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಶ್ರೀರಾಮ್ ಗಂಧರ್ವ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.
    ದಾವಣಗೆರೆ ಸಿನಿ ಸ್ಟುಡಿಯೋದ ಮನೋಜ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಸಂಪತ್, ಜಯರಾಂ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಶುಭಲಕ್ಷ್ಮೀ ಸೇರಿ ಹಲವರು ಇದ್ದಾರೆ. ದಾವಣಗೆರೆಯ ಮೂವಿಟೈಮ್‌ನಲ್ಲಿ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.
    ಮನೋಜ್, ಸಂಪತ್, ರವಿ ಸಾಲಿಯಾನ್, ಶರತ್, ಎಚ್.ಕೆ.ಸಿ. ರಾಜು, ವಿಜಯ್ ಜಾಧವ್, ತಿಪ್ಪೇಶ್, ಶ್ರೀನಾಥ್, ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts