More

    ನವೆಂಬರ್​ನಲ್ಲಿ ಕ್ಯಾನ್ಸರ್​ ಆಸ್ಪತ್ರೆ ಲೋಕಾರ್ಪಣೆ – ಡಾ. ಪ್ರಭಾಕರ ಕೋರೆ

    ಬೆಳಗಾವಿ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಕೆಎಲ್​ಇಯ 200 ಹಾಸಿಗೆಗಳ ಕ್ಯಾನ್ಸರ್​ ಆಸ್ಪತ್ರೆಯನ್ನು ಇದೇ ನವೆಂಬರ್​ನಲ್ಲಿ ಕಾರ್ಪಣೆಗೊಳಿಸಲಾಗುವುದು. ಈ ಭಾಗದ ಕ್ಯಾನ್ಸರ್​ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು ಎಂದು ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದರು.

    ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕಿಯ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಸ್ವಾತಂತ್ರೊ$್ಯತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಯಾನ್ಸರ್​ ಆಸ್ಪತ್ರೆಯ ಜತೆಗೆ ಹುಬ್ಬಳ್ಳಿ ಹಾಗೂ ಪುಣೆಯಲ್ಲಿನ ಆಸ್ಪತ್ರೆಗಳನ್ನು ಜನಸೇವೆಗೆ ಅರ್ಪಿಸಲಾಗುವುದು ಎಂದರು. 1984ರಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷನಾದ ಬಳಿಕ ಪ್ರಥಮ ಸಭೆಯಲ್ಲಿಯೇ ಆಸ್ಪತ್ರೆ ನಿರ್ಮಾಣದ ಕುರಿತು ರ್ನಿಣಯ ಕೈಗೊಳ್ಳಲಾಯಿತು. ಕೆಲವೇ ವರ್ಷಗಳಲ್ಲಿ ಬೃಹತ ಆರೋಗ್ಯ ಕೇಂದ್ರದ ಸಂಕುಲ ತಲೆ ಎತ್ತಿ ನಿಂತಿತು.

    ನನಗೆ ಪುನರಜನ್ಮ ನೀಡಿದ ಆಸ್ಪತ್ರೆಯಲ್ಲಿ ಸುಮಾರು 1.5 ಕೋಟಿಗೂ ಅಧಿಕ ಜನರ ಹೊರರೋಗಿಗಳು ಹಾಗೂ 12 ಲಕ್ಷಕ್ಕೂ ಅಧಿಕ ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 50 ಸಾವಿರಕ್ಕೂ ಅಧಿಕ ಜನರಿಗೆ ಕೋವಿಡ್​ ವ್ಯಾಕ್ಸಿನ್​ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಶಿಕ್ಷಣದೊಂದಿಗೆ ಆರೋಗ್ಯ ಸೇವೆಯನ್ನೂ ಕಲ್ಪಿಸಲಾಗುತ್ತಿದೆ ಎಂದರು.

    ಮರಾಠಾ ಲೈಟ್​ ಇನ್ಫೆಂಟ್ರಿಯ ಬ್ರಿಗೇಡಿಯರ್​ ಜೈದೀಪ ಮುಖರ್ಜಿ ಮಾತನಾಡಿ, ವೈದ್ಯರೂ ಕೂಡ ಸೈನಿಕರೆ ಅವರು ಸಾಮಾಜಿಕ ಆರೋಗ್ಯ ಕಾಪಾಡಲು ಹೋರಾಡಿದರೆ ನಾವು ದೇಶ ರಕ್ಷಣೆಗೆ ಹೋರಾಡುತ್ತಾರೆ. ಅವರೂ ಸಮವಸದಾರಿಗಳು. ಕಳೆದ 75 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೇವೆ. ಆರೋಗ್ಯಯುತ, ಅಭಿವೃದ್ದಿ ಹಾಗೂ ವಿಶ್ವದಲ್ಲಿಯೇ ಮಹೋನ್ನತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬರೂ ಪ್ರತಿೆ ಮಾಡಿವದರೊಂದಿಗೆ ಶ್ರಮಪಡ ಬೇಕಾಗಿದೆ ಎಂದರು.

    ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಎಂ.ವಿ.ಜಾಲಿ ಮಾತನಾಡಿ, ತ್ಯಾಗ, ಬಲಿದಾನವನ್ನು ನಾವು ಮರೆಯುವಂತಿಲ್ಲ. ಅವರಿಂದಲೇ ಇಂದು ನಾವು ಜೀವಂತ ಮತ್ತು ಒಳ್ಳೆಯ ಜೀವನ ಸಾಗುಸುತ್ತಿದ್ದೇವೆ. ಲಾಂತರ ಜನರು ಬಲಿದಾನ ಮಾಡಿದ್ದಾರೆ. ಅದರಲ್ಲಿ ನಮ್ಮ ಸಂಸ್ಥೆಯ ಕಾರ್ಯದ್ಯಕ್ಷ ಡಾ. ಕೋರೆ ಅವರ ತಂದೆ ಬಸವಪ್ರಭು ಕೋರೆ ಅವರೂ ಒಬ್ಬರು. ಕಳೆದ 25 ವರ್ಷಗಳಿಂದ ನಾವು ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತ ಈ ಭಾಗದ ಆರ್ಥಿಕ ಸಬಲತೆಗೆ ಸಹಕಾರ ಕೊಟ್ಟಿದ್ದೇವೆ ಎಂದರು.

    ಉಪಕುಲಪತಿ ಡಾ. ವಿವೇಕ ಸಾವೋಜಿ, ಡಾ. ವಿ.ಡಿ. ಪಾಟೀಲ, ಕುಲಸಚಿವ ಡಾ. ವಿ.ಎ. ಕೋಠಿವಾಲೆ, ಪಾಚಾರ್ಯ ಡಾ. ಎನ್​ ಎಸ್​ ಮಹಾಂತಶೆಟ್ಟಿ, ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ಆರಿಫ್​ ಮಾಲ್ದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts