More

    ಶ್ರೀನಿವಾಸ ಪ್ರಸಾದ್‌ರಿಗೆ ಮಂತ್ರಿ ಸ್ಥಾನ ನೀಡಿ: ಶಾಸಕ ಬಿ. ಹರ್ಷವರ್ಧನ್ ಆಗ್ರಹ

    ಮೈಸೂರು: ಹಳೇ ಮೈಸೂರು ಭಾಗದ ದಲಿತ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಕೇಂದ್ರ ಸರ್ಕಾರದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗಾದರೂ ಮಂತ್ರಿ ಸ್ಥಾನ ನೀಡಬೇಕು ಎಂದು ಶಾಸಕ ಬಿ. ಹರ್ಷವರ್ಧನ್ ಆಗ್ರಹಿಸಿದರು.
    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರಿನ ಪ್ರದೇಶದಲ್ಲಿ ದಲಿತ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ, ಈ ಕುರಿತು ಮನವಿ ಮಾಡಿದ್ದು, ಅದು ನನಗಾದರೂ ಸರಿ, ಬೇರೆ ಯಾರಿಗಾದರೂ ಸರಿ. ರಾಜ್ಯದಲ್ಲಿ ಈ ರೀತಿಯ ಅವಕಾಶ ಕಲ್ಪಿಸಲು ಆಗಲಿಲ್ಲವಾದರೆ ಕೇಂದ್ರ ಸರ್ಕಾರದಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಆ ಮೂಲಕ ಗೌರವಯುತವಾಗಿ ಅವರು ನಿವೃತ್ತಿಯಾಗಲು ಅವಕಾಶ ಮಾಡಿಕೊಡಬೇಕು ಎಂದರು.
    ಈ ಕುರಿತು ದಲಿತ ಸಮುದಾಯದ ಪರವಾಗಿ ಮನವಿ ಮಾಡೋದು ನನ್ನ ಕರ್ತವ್ಯ. ಅದಕ್ಕಾಗಿ ಮುಖ್ಯಮಂತ್ರಿಗೆ ಈ ಕೋರಿಕೆಯನ್ನು ಸಲ್ಲಿಕೆ ಮಾಡಿದ್ದು, ಎಂಎಲ್‌ಸಿ ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಅವಕಾಶ ಇದ್ದರೆ ಅವರಿಗೂ ನೀಡಲಿ ಎಂದು ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts