More

    ಶ್ರೀನಿವಾಸಸಂದ್ರ ರೈತ ಸೇವಾ ಸಂಕ್ಕೆ ಕಾಯಕಲ್ಪ: ಪುನಶ್ಚೇತನಗೊಳಿಸಿ, ರೈತರಿಗೆ 10 ಕೋಟಿ ರೂ. ಸಾಲ ಘೋಷಿಸಿದ ಬ್ಯಾಲಹಳ್ಳಿ ಗೋವಿಂದಗೌಡ

    ಕೆಜಿಎಫ್: ದಶಕದಿಂದ ಬೀಗ ಹಾಕಲಾಗಿದ್ದ ಶ್ರೀನಿವಾಸಂದ್ರ ವ್ಯವಸಾಯ ಸೇವಾ ಸಹಕಾರ ಸಂವನ್ನು ಪುನಶ್ಚೇತನಗೊಳಿಸಿ ಕಟ್ಟಡವನ್ನು 5 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಿ ಈ ಭಾಗದ ರೈತರಿಗೆ 10 ಕೋಟಿ ರೂ. ಸಾಲ ನೀಡುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ಶ್ರೀನಿವಾಸಂದ್ರದಲ್ಲಿ ಶುಕ್ರವಾರ ರೈತರು ಮತ್ತು ಸ್ತ್ರೀಶಕ್ತಿ ಸಂಗಳ ಸಭೆ ಉದ್ದೇಶಿಸಿ ವಾತನಾಡಿ, ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಗೆ ಬರುವ 18 ಗ್ರಾಮಗಳ ರೈತರನ್ನು ಪಟ್ಟಿ ವಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ಸವಾಜದ ಮುಖ್ಯವಾಹಿನಿಗೆ ತರಲು ಸಕಲ್ಪ ಮಾಡಲಾಗುವುದು ಎಂದರು.

    ಮಹಿಳೆಯರು, ರೈತರು ಆರ್ಥಿಕವಾಗಿ ಸದೃಢರಾಗಬೇಕು. 5ರಿಂದ 10 ಗುಂಟೆ ಜಮೀನಿರುವ ರೈತರಿಗೂ ಬ್ಯಾಂಕ್ ಸಾಲ ನೀಡಲಿದೆ. ಕಟ್ಟಕಡೆಯ ರೈತನಿಗೆ ಬ್ಯಾಂಕ್ ಸಹಾಯ ಹಸ್ತ ನೀಡಲಿದೆ ಎಂದರು.

    ಬಡವರಿಗೆ ಕಲ್ಪವೃಕ್ಷವಾಗಿರುವ ಬ್ಯಾಂಕ್ ವಿರುದ್ಧ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದೆ ಬಡವರಿಗೆ ಪ್ರ್ರಾವಾಣಿಕವಾಗಿ ಸಾಲ ಸಿಗುವಂತೆ ವಾಡಲಾಗುವುದು. ಮುಖಂಡರು ರೈತರ ಮನೆಗಳಿಗೆ ಭೇಟಿ ನೀಡಿ ಅಗತ್ಯವಿರುವವರಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ವಾಡಬೇಕು. ಪಿ ನಂಬರ್ ಜಮೀನುಗಳಿಗೂ ಸಾಲ ನೀಡಲಾಗುವುದು. ಆದರೆ ರೈತರ ಆಧಾರ್ ಕಾರ್ಡ್ ಇತರ ಬ್ಯಾಂಕ್‌ಗಳಲ್ಲಿ ಜೋಡಣೆಯಾಗಿರಬಾರದು. ಕೋಳಿ ಫಾರ್ಮ್, ಕುರಿ, ಮೇಕೆ ಸಾಕಾಣಿಕೆ ಸೇರಿ ವಿವಿಧ ಕಸಬುಗಳಿಗೆ ಸಾಲ ನೀಡಲಾಗುವುದು. ಇದನ್ನು ರೈತರು ಸದ್ಬಳಕೆ ವಾಡಿಕೊಳ್ಳಬೇಕು ಎಂದರು.

    ಪಿಎಲ್‌ಡಿ ಬ್ಯಾಂಕ್ ವಾಜಿ ಅಧ್ಯಕ್ಷ ವೆಂಕಟಕೃಷ್ಣಾರೆಡ್ಡಿ, ಟ್ಟವಾದಮಂಗಲ ಗ್ರಾಪಂ ಅಧ್ಯಕ್ಷ ಹರಿಕೃಷ್ಣ, ಜಿಪಂ ವಾಜಿ ಸದಸ್ಯ ಅಪ್ಪಿ ವೆಂಕಟರಾಮರೆಡ್ಡಿ, ಕೃಷ್ಣಮೂರ್ತಿ, ಜಕ್ಕರಸಕುಪ್ಪ ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಕಮ್ಮಸಂದ್ರ ಗ್ರಾಪಂ ವಾಜಿ ಅಧ್ಯಕ್ಷ ನಾಗರಾಜ್, ಮುಖಂಡರಾದ ಆನಂದಮೂರ್ತಿ, ಬಾಲಕೃಷ್ಣ, ಸುರೇಂದ್ರಗೌಡ, ಶ್ರೀನಿವಾಸರೆಡ್ಡಿ ಇತರರು ಇದ್ದರು.

    ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಆಧಾರ ಸ್ತಂಭವಾಗಿದೆ. ದೇಶದಲ್ಲಿ ಹಲವು ರಾಷ್ಟ್ರೀಕತ ಬ್ಯಾಂಕ್ ಕಾರ‌್ಯ ನಿರ್ವಹಿಸುತ್ತಿದ್ದರೂ, ಯಾವುದೂ ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಕೆಜಿಎಫ್ ತಾಲೂಕಿನಲ್ಲಿ 100 ಕೋಟಿ ರೂ. ಸಾಲ ನೀಡುವುದಾಗಿ ಆಶ್ವಾಸನೆ ನೀಡುತ್ತಿದ್ದು, ರೈತರು ಸದ್ಬಳಕೆ ವಾಡಿಕೊಳ್ಳಬೇಕು.
    ಎಂ.ರೂಪಕಲಾ, ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts