More

    ಶ್ರೀಗಂಧ ಮರಗಳ್ಳರ ಬಂಧನ

    ಬೀದರ್: ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದವರನ್ನು ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಎಂಟು ಜನರನ್ನು ಬಂಧಿಸಿದೆ.

    ಹುಮನಾಬಾದ್ ತಾಲೂಕಿನ ಕನಕಟ್ಟಾ ರಸ್ತೆ ಸಮೀಪದ ದ್ರಾಕ್ಷಿ ತೋಟದಲ್ಲಿ ಗುರುವಾರ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆ ಕಡಿಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬಂಧಿತರಿAದ ೧.೨೫ ಲಕ್ಷ ಮೌಲ್ಯದ ೩೯.೨೮ ಕೆಜಿ ಶ್ರೀಗಂಧದ ಕಟ್ಟಿಗೆ ತುಂಡು, ಕೃತ್ಯಕ್ಕೆ ಬಳಸಿದ ೧.೩೦ ಲಕ್ಷದ ಎರಡು ಬೈಕ್, ೯ ಮೊಬೈಲ್ ಮತ್ತು ಎರಡು ಕೊಡಲಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ನಿಯಮದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

    ಇತ್ತೀಚೆಗೆ ಜಿಲ್ಲೆಯಲ್ಲಿ ಶ್ರೀಗಂಧ ಮರಗಳ ಕಳ್ಳ ಸಾಗಣೆ ಬಗ್ಗೆ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಖಾಕಿ ಪಡೆ ತೀವ್ರ ನಿಗಾ ವಹಿಸಿದ್ದರಿಂದ ಈ ಪ್ರಕರಣ ಪತ್ತೆ ಸಾಧ್ಯವಾಗಿದೆ. ಬರುವ ದಿನಗಳಲ್ಲಿ ಶ್ರೀಗಂಧದ ಕಳ್ಳ ಸಾಗಣೆ ಮೂಲ ಪತ್ತೆಗೆ ಅರಣ್ಯ ಮತ್ತು ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ. ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನಕ್ಕೆ ಸಂಬಂಧಿಸಿದAತೆ ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬನನ್ನು ಬಂಧಿಸಿ ೨.೧೦ ಲಕ್ಷ ರೂ. ಮೌಲ್ಯದ ಎರಡು ಬೈಕ್ ಜಪ್ತಿ ಮಾಡಿದ್ದಾರೆ ಎಂದರು.

    ಉಪ ಅರಣ್ಯ ಸಂಕ್ಷಣಾಧಿಕಾರಿ ವಾನತಿ ಎಂ.ಎಂ. ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಶ್ರೀಗಂಧದ ಅಕ್ರಮ ಸಾಗಣೆ ಪ್ರಕರಣಗಳು ವರದಿಯಾಗುತ್ತಿವೆ. ಈ ದಂಧೆ ತಡೆಯುವಲ್ಲಿ ಜಿಲ್ಲೆಯ ಜನರ ಸಹಕಾರ ಮುಖ್ಯವಾಗಿದೆ. ಶ್ರೀಗಂಧ ಮರಗಳ ಕಳ್ಳತನ ಅಥವಾ ಮರಗಳನ್ನು ಕಡಿಯುವುದು ಕಂಡು ಬಂದಲ್ಲಿ ತಕ್ಷಣ ಅರಣ್ಯ ಅಥವಾ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಕೋರಿದರು.

    ಶ್ರೀಗಂಧ ಮರಗಳ್ಳರನ್ನು ಬಂಧಿಸಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗೆ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಯಿತು. ಹುಮನಾಬಾದ್ ವಲಯ ಅರಣ್ಯ ಅಧಿಕಾರಿ ಶಿವಕುಮಾರ, ಪಿಎಸ್‌ಐಗಳಾದ ಉಪೇಂದ್ರಕುಮಾರ, ಕಿರಣ, ಸಂತೋಷ ತಾವರಖೇಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts