More

    ಶ್ರವಣ ದೋಷದ ಜಾಗೃತಿ ಅವಶ್ಯ

    ಧಾರವಾಡ: ಶ್ರವಣ ದೋಷ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

    ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ವಿಶ್ವ ಶ್ರವಣ ದಿನಾಚರಣೆಯ ಜಾಥಾಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಭಾರತದಲ್ಲಿ ಶ್ರವಣ ದೋಷ ಇರುವವರ ಪ್ರಮಾಣವು ಅಂದಾಜು ಶೇ. 6.3ರಷ್ಟಿದೆ. ಆನುವಂಶೀಯತೆ, ಜನನದ ಸಮಯದಲ್ಲಿನ ತೊಡಕುಗಳು, ದೀರ್ಘಕಾಲದ ಕಿವಿ ಸೋಂಕುಗಳು, ಕಿವಿಗೆ ಹಾನಿಕಾರಕ ಔಷಧಗಳ ಬಳಕೆ, ಅತಿಯಾದ ಶಬ್ಧ ಮತ್ತು ವೃದ್ಧಾಪ್ಯದ ಕಾರಣದಿಂದ ಶ್ರವಣ ದೋಷ ಉಂಟಾಗಬಹುದು. ಸುರಕ್ಷತಾ ಸಾಧನಗಳು ಮತ್ತು ಸಮಯೋಚಿತ ವೈದ್ಯಕೀಯ ಸೇವೆಗಳ ಸಹಾಯದಿಂದ ಸುಲಭವಾಗಿ ಶ್ರವಣ ದೋಷ ನಿವಾರಿಸಬಹುದು ಎಂದರು.

    ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಯಶವಂತ ಮದೀನಕರ, ಆರ್.ಸಿ.ಎಚ್ ಅಧಿಕಾರಿ ಡಾ. ಹೊನಕೇರಿ, ಡಾ. ಸುಜಾತಾ ಹಸಬಿಮಠ, ಡಾ. ಎ.ಎಸ್. ಪಾಟೀಲ, ಇತರರಿದ್ದರು. ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಹಳೆಯ ಬಸ್ ನಿಲ್ದಾಣ, ಆಲೂರು ವೆಂಕಟರಾವ್ ವೃತ್ತದ ಮೂಲಕ ಸಾಗಿ ಆರೋಗ್ಯ ಇಲಾಖೆ ಕಚೇರಿಗೆ ವಾಪಸಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts