More

    ಶೌರ್ಯ ಸಾಹಸದ ಪ್ರತೀಕ ಶಿವಾಜಿ

    ಬೀದರ್: ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ ಮತ್ತು ಸಾಹಸದ ಪ್ರತೀಕವಾಗಿದ್ದಾರೆ. ಅವರ ಈ ಗುಣಗಳು ಎಲ್ಲರಿಗೂ ಅನುಕರಣೀಯವಾಗಿವೆ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.
    ಜಿಲ್ಲಾಡಳಿತದಿಂದ ಬುಧವಾರ ಇಲ್ಲಿನ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಶಿವಾಜಿ ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದರು ಎಂದರು.
    ಮಹಾರಾಷ್ಟ್ರದ ಪರಭಣಿಯ ಕೇಶವ ಖಟಿಂಗ್ ಉಪನ್ಯಾಸ ನೀಡಿ, ಶಿವಾಜಿ ಮಹಾರಾಜರ ಸಾಧನೆಗಳು ಕೇವಲ ಮರಾಠಿ ಮತ್ತು ಮಹಾರಾಷ್ಟ್ರಕ್ಕೆ ಸೀಮಿತವಲ್ಲ, ಇಡೀ ವಿಶ್ವಾದ್ಯಂತ ಹರಡಿವೆ. ಅವರು ಯುದ್ಧ್ದ ಕೌಶಲಗಳನ್ನು ಕನರ್ಾಟಕದಲ್ಲಿ ಪಡೆದಿದ್ದರು ಎಂದರು. ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಅಧ್ಯಕ್ಷತೆ ವಹಿಸಿದ್ದರು. ಅಪರ ಡಿಸಿ ರುದೆ್ರೇಶ ಗಾಳಿ, ಮುಖಂಡರಾದ ರಘುನಾಥರಾವ್ ಜಾಧವ್, ಮುರುಳೀಧರರಾವ ಕಾಳೆ, ಆರ್.ಎಂ.ಪಾಟೀಲ್ ಇತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ಚನ್ನಬಸವ ಹೇಡೆ ನಿರೂಪಣೆ ಮಾಡಿದರು.
    ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ನಿಮಿತ್ತ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಡಿಸಿ ಕಚೇರಿ ಸಭಾಂಗಣದಲ್ಲಿ ಸಂಸದ ಭಗವಂತ ಖೂಬಾ, ಡಿಸಿ ಡಾ.ಎಚ್.ಆರ್.ಮಹಾದೇವ ಅವರು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಅಲ್ಲಿಂದ ಹೊರಟ ಮೆರವಣಿಗೆಯು ಹರಳಯ್ಯ ವೃತ್ತ, ಕನ್ನಡಾಂಬೆ ವೃತ್ತ ಮೂಲಕ ರಂಗಮಂದಿರಕ್ಕೆ ತೆರಳಿ ಮುಕ್ತಾಯಗೊಂಡಿತು. ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಎಸ್ಪಿ ನಾಗೇಶ್ ಡಿ.ಎಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಮುಖಂಡರಾದ ಡಾ. ಶೈಲೇಂದ್ರ ಬೆಲ್ದಾಳೆ, ಸೂರ್ಯಕಾಂತ ನಾಗಮಾರಪಳ್ಳಿ, ರಮೇಶ ಪಾಟೀಲ್ ಸೋಲಪುರ, ಕಾಶಪ್ಪ ಧನ್ನೂರ, ಬಸವರಾಜ ಧನ್ನೂರ, ಅಶೋಕಕುಮಾರ ಕರಂಜಿ, ಬಾಬುರಾವ ಕಾರಬಾರಿ, ಕೊಂಡಿಬಾರಾವ ಪಾಂಡ್ರೆ ಇತರರಿದ್ದರು. ನಗರದ ವಿವಿಧ ಬಡಾವಣೆಗಳಿಂದ ಯುವ ಸಮೂಹಗಳು ಅಲಂಕೃತ ವಾಹನದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಸಿದವು. ಡಿಜೆ ಸೌಂಡ್ ಸಿಸ್ಟಮ್ ಎದುರು ಕುಣಿದು ಕುಪ್ಪಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts