More

    ಶುದ್ಧ ಕುಡಿಯುವ ನೀರು ಪೂರೈಸಲು ಒತ್ತಾಯ, ವಿಜಯಪುರ 16ನೇ ವಾರ್ಡ್ ನಿವಾಸಿಗಳು ಪ್ರತಿಭಟನೆ

    ವಿಜಯಪುರ: ಪುರಸಭೆಯಿಂದ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿ ಪಟ್ಟಣದ 16ನೇ ವಾರ್ಡ್ ನಿವಾಸಿಗಳು ಭಾನುವಾರ ಖಾಲಿ ಬಿಂದಿಗೆ ಹಿಡಿದು ವಾರ್ಡ್‌ನಲ್ಲಿ ಪ್ರತಿಭಟನೆ ನಡೆಸಿದರು.

    ವಾರ್ಡ್‌ಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿರುವ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಲಾರ್ವಾಗಳು ಬೆಳೆದಿವೆ. ಈ ಬಗ್ಗೆ ಪುರಸಭೆ ಗಮನಕ್ಕೆ ತಂದಿದ್ದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

    ಪೈಪ್ ಲೈನ್ ಮೂಲಕ ಕುಡಿಯುವ ನೀರು ಪೂರೈಸದೆ ಟ್ಯಾಂಕರ್‌ಗಳಲ್ಲಿ ನೀಡುತ್ತಿದ್ದಾರೆ. ಹಲವಾರು ಬಾರಿ ಟ್ಯಾಂಕರ್‌ಗಳಲ್ಲಿ ಮಣ್ಣು, ಪಾಚಿ ಮಿಶ್ರಿತ ನೀರು ಬರುತ್ತಿದೆ. ಈ ಬಗ್ಗೆ ಪುರಸಭೆಯ ಸದಸ್ಯರು, ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಎಂದು ಸ್ಥಳೀಯ ಮುಖಂಡ ಭಾನುಚಂದ್ರ ಆಕ್ರೋಶ ವ್ಯಕ್ತಪಡಿಸಿದರು.

    ವಾರ್ಡ್‌ನಲ್ಲಿ ಬಹುತೇಕರು ಪರಿಶಿಷ್ಟ ಜಾತಿಯವರು ಇರುವ ಕಾರಣ ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಪುರಸಭೆ ಅಧ್ಯಕ್ಷೆ, ಕೇವಲ 3 ವಾರ್ಡ್‌ಗಳಲ್ಲಿನ ಜನರ ಸಮಸ್ಯೆ ಆಲಿಸಿದ್ದಾರೆ. ಹೆಚ್ಚು ಸಮಸ್ಯೆಗಳಿರುವ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆ ಕೇಳಿಲ್ಲ ಎಂದು ನಿವಾಸಿ ಮುನಿರತ್ನಮ್ಮ ಕಿಡಿ ಕಾರಿದರು.

    ಕಳೆದ ಬಾರಿ ಬಂದಿದ್ದ ಎಲ್ಲ ಟ್ಯಾಂಕರ್‌ಗಳಲ್ಲಿನ ನೀರು ಮಣ್ಣು ಮಿಶ್ರಿತವಾಗಿತ್ತು. ಈ ಬಕ್ಕೆ ಕೇಳಿದರೆ ಮೋಟಾರು ಕೆಟ್ಟಿದ್ದರಿಂದ ನೀರು ಮಣ್ಣು ಮಿಶ್ರಿತವಾಗಿ ಬರುತ್ತಿವೆ ಎಂದು ಹೇಳಿದ್ದರು. ಆ ನಂತರವೂ ನೀರು, ಅದೇ ರೀತಿಯಾಗಿ ಬರುತ್ತಿವೆ.ಎಂದು ಸ್ಥಳೀಯ ನಿವಾಸಿ ಲಕ್ಷ್ಮಮ್ಮ ಆರೋಪಿಸಿದರು.

    ಟ್ಯಾಂಕರ್‌ಗಳಲ್ಲಿ ಸರಬರಾಜು ಮಾಡುತ್ತಿರುವ ನೀರಿನಲ್ಲಿ ಲಾರ್ವಾಗಳು ಇರುವ ಬಗ್ಗೆ ದೂರು ಬಂದಿದೆ. ಪೈಪ್‌ಲೈನ್ ಅಳವಡಿಸಲು ಏನು ಸಮಸ್ಯೆ ಇದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಇಂಜಿನಿಯರ್‌ಗೆ ಸೂಚನೆ ನೀಡಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುತ್ತದೆ.

    ಮೋಹನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts