More

    ಶೀಘ್ರ ಕಾಮಗಾರಿ ಮುಗಿಸಲು ಶ್ರಮಿಸಿ

    ರಾಮದುರ್ಗ: ಕಳೆದ ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ ಭರವಸೆಗಳು ಈಡೇರುವಂತಾಗಲು ಅಧಿಕಾರಿಗಳು ಮಾರ್ಚ್‌ದೊಳಗೆ ಕಾಮಗಾರಿಗಳನ್ನು ಮುಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2022- 23ನೇ ಸಾಲಿನ 3ನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದೀರಿ. ಚುನಾವಣೆ ಬರುತ್ತವೆ, ಹೋಗುತ್ತವೆ. ಆದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಕಾರ್ಯಗಳು ಆಗಬೇಕಾದಲ್ಲಿ ಅಧಿಕಾರಿಗಳು ಸಹಕಾರ ಅವಶ್ಯ ಎಂದರು.

    ಕಳೆದ ವರ್ಷ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮುದಕವಿ ಸರ್ಕಾರಿ ಪ್ರೌಢ ಶಾಲೆಯ ಸುಚಿತ್ರಾ ಭೂತಪ್ಪನವರ (618 ಅಂಕ), ಆನೆಗುದ್ದಿ ಸರ್ಕಾರಿ ಪ್ರೌಢ ಶಾಲೆಯ ಹೇಮಾವತಿ ಪಮ್ಮಾರ (617 ), ತೃತೀಯ ಸ್ಥಾನ ಪಡೆದ ಆನೆಗುದ್ದಿ ಗ್ರಾಮದ ಅಂಕಿತಾ ಬೂದಿ (616), ತೋರಣಗಟ್ಟಿ ಪ್ರೌಢ ಶಾಲೆಯ ತನುಜಾ ಸಿಂಗಾರಗೊಪ್ಪ (616) ಅವರಿಗೆ ಶಾಸಕರು ಲ್ಯಾಪ್‌ಟಾಪ್ ವಿತರಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಇಲ್ಲಿಯವರೆಗೆ ಹಮ್ಮಿಕೊಂಡ ಕಾರ್ಯಕ್ರಮಗಳ ಪ್ರಗತಿ ಕುರಿತು ಮಾಹಿತಿ ನೀಡಿದರು. ತಹಸೀಲ್ದಾರ್ ಬಸವರಾಜ ನಾಗರಾಳ, ತಾಪಂ ಇಒ ಪ್ರವೀಣಕುಮಾರ ಸಾಲಿ, ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಾಂತಯ್ಯ ಆರುಟಗಿ, ನಾಮನಿರ್ದೇಶಿತ ಸದಸ್ಯರಾದ ಸಿದ್ದು ಮೇತ್ರಿ, ಶಾಂತವ್ವ ಬೊಮ್ಮಣ್ಣವರ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts