More

    ಶಿಶು ಮರಣ ಪ್ರಮಾಣ ನಿಯಂತ್ರಣಕ್ಕೆ ಪೂರಕ ಆರೋಗ್ಯ ಸೇವೆ ಅಗತ್ಯ

    ಚಿತ್ರದುರ್ಗ: ಮನೆ ಮಟ್ಟದಲ್ಲಿ ನವಜಾತ ಶಿಶುಗಳ ಆರೈಕೆ ಸೇವೆ ಬಲಪಡಿಸಿ,ಶಿಶು ಮರಣ ಪ್ರಮಾಣ ತಗ್ಗಿಸಬೇಕಿದೆ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
    ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅ ಭಿಯಾನ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಚಿತ್ರದುರ್ಗ ತಾಲೂಕಿನ ಅಂಕಿ ಅಂಶ ಪರಿಶೀಲಿಸಿದಾಗ ದೊಡ್ಡಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್‌ನಿಂದ ಈವರೆಗೆ ಆಗಿರುವ 208 ಹೆರಿಗೆಗಳಲ್ಲಿ ಏಳು ಶಿಶುಗಳು ಮರಣವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಜನ್ಮ ದೋಷಗಳು,ಜನನ ಉಸಿರುಕಟ್ಟುವಿಕೆ,ನ್ಯೂಮೇನಿಯಾ,ನವಜಾತ ಶಿಶುವಿನ ಸೋಂಕು,ಅತಿಸಾರ,ಮಲೇರಿಯಾ,ದಡಾರ,ಅಪೌ ಷ್ಟಿಕತೆ,ಹೆರಿಗೆ ತೊಡಕುಗಳು ಶಿಶು ಮರಣ ಪ್ರಮುಖ ಕಾರಣಗಳಾಗಿವೆ. ಪ್ರಸವಪೂರ್ವ ಆರೈಕೆ ಕೊರತೆ,ಶಿಕ್ಷಣ ಕೊರತೆ,ಪರಿಸರದ ಪರಿಸ್ಥಿತಿ ಗಳು ಮತ್ತು ವೈದ್ಯಕೀಯ ನೆರವಿನ ಕೊರತೆಯಂಥ ಅಂಶಗಳಿಂದಲೂ ಶಿಶು ಮರಣ ಹೆಚ್ಚಾಗುತ್ತಿವೆ. ಶುದ್ಧ ಕುಡಿಯುವ ನೀರು, ಸಾಂಕ್ರಾ ಮಿಕ ರೋಗಗಳ ವಿರುದ್ಧ ರಕ್ಷಣೆ ಮತ್ತು ಪೂರಕ ಆರೋಗ್ಯ ಸೇವೆಗಳು ಶಿಶು ಮರಣದ ಪ್ರಮಾಣ ತಗ್ಗಿಸಬಹುದಾಗಿದೆ ಎಂದರು.
    ಪ್ರಾಥಮಿಕ ಆರೋಗ್ಯ ಕೇಂದ್ರ ಡಾ.ಶಮೈಲಾ ಅವರು ಮಾತನಾಡಿ,ಶಿಶು ಜನಿಸಿದ ಮೊದಲ 6 ತಿಂಗಳು ಕೇವಲ ತಾಯಿ ಹಾಲು,6 ತಿಂಗಳ ನಂತರ ಪೂರಕ ಆಹಾರ ಹಾಗೂ 2 ವರ್ಷಗಳ ತಾಯಿ ಹಾಲು ಉಣಿಸುವುದನ್ನು ಮುಂದುವರಿಸ ಬೇಕೆಂದರು.
    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್,ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ರೇಣು ಕಮ್ಮ,ಆರೋಗ್ಯ ನಿರೀಕ್ಷಣಾಧಿಕಾರಿ ಮಾರುತಿ,ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಅನಿತಾ,ರೇಖಾ,ರತ್ನಮ್ಮ ಮಂಜುಳಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts