More

    ಕೂಡ್ಲಿಗಿಗೆ ಐದು ಪಿಎಚ್‌ಸಿ ಮಂಜೂರು

    ಕಾನಹೊಸಹಳ್ಳಿ: ಕ್ಷೇತ್ರದ ಜನರಿಗೆ ಆರೋಗ್ಯ ಸೇವೆ ಕಲ್ಪಿಸುವುದು ಗುರಿಯಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
    ಕಾನಹೊಸಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಸುಸಜ್ಜಿತ ಆಸ್ಪತ್ರೆ, ತಜ್ಞ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

    ಕ್ಷೇತ್ರದ ಜನರಿಗೆ ಆರೋಗ್ಯ ಸೇವೆ ನೀಡಲು ಬದ್ಧ

    ಕಾನಹೊಸಹಳ್ಳಿಯ ಆರೋಗ್ಯ ಕೇಂದ್ರವು ಸುಸಜ್ಜಿತವಾಗಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೇ ಗ್ರಾಮಕ್ಕೆ ಅಗ್ನಿಶಾಮಕ ಠಾಣೆ, ಪ್ರವಾಸಿಮಂದಿರ ಸೇರಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ. ಶೀಘ್ರವೇ ಎಲ್ಲ ಬೇಡಿಕೆಗಳು ಈಡೇರಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಇದನ್ನೂ ಓದಿ: ರಾಮ ಮಂದಿರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿ: ಉದ್ಧವ್ ಠಾಕ್ರೆ ಆಗ್ರಹ

    ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕುಮಾರಗೌಡ ಮಾತನಾಡಿ, ಕಾನಹೊಸಹಳ್ಳಿ ಪಟ್ಟಣ ಸೇರಿ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗುವಂತೆ ಪಿಎಚ್‌ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಆಸ್ಪತ್ರೆಗೆ ಹೆಚ್ಚುವರಿಯಾಗಿ ವೈದ್ಯರನ್ನು ನೇಮಿಸಬೇಕು. ಗ್ರಾಮಕ್ಕೆ ಮುಕ್ತಿ ವಾಹನ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

    ಡಿಎಚ್‌ಒ ಡಾ.ಶಂಕರನಾಯ್ಕ, ಟಿಎಚ್‌ಒ ಎಸ್.ಪಿ.ಪ್ರದೀಪ್ ಕುಮಾರ್, ಪಿಎಚ್‌ಸಿ ವೈದ್ಯಾಧಿಕಾರಿ ವಿಶ್ವನಾಥ ಮಾತನಾಡಿದರು. ಗ್ರಾಪಂ ಸದಸ್ಯರಾದ ಲಕ್ಷ್ಮೀ, ಟಿ.ಸಿದ್ದಪ್ಪ, ಪಿತಾಂಬರಿ, ಮಕ್ಬುಲ್, ಶಿವಕುಮಾರ, ಲೋಕೋಪಯೋಗಿ ಇಲಾಖೆ ಎಇಇ ಡಿ.ವೆಂಕಟರಮಣ, ಜೆಇ ನಾಗೇಂದ್ರಪ್ಪ, ಗ್ರಾಪಂ ಪಿಡಿಒ ಬಸಮ್ಮ ಬಿ, ಮುಖಂಡರಾದ ಎ.ಸಿ.ಚನ್ನಬಸಪ್ಪ, ದುಗ್ಗಪ್ಪ, ಎಂ.ಒ.ಮಂಜುನಾಥ, ಗಫರ್, ಬಳೆಗಾರ ಜಗದೀಶ್, ಎಚ್.ಬಿ.ಸತೀಶ್, ಸೂರ್ಯಪ್ರಕಾಶ್, ಎಳನೀರು ಗಂಗಣ್ಣ, ಜಿ.ಓಬಣ್ಣ, ಆರೋಗ್ಯ ಕೇಂದ್ರದ ಸಿಬ್ಬಂದಿ ರಾಘವರೆಡ್ಡಿ, ಸೋಮಶೇಖರ್, ಸುಪ್ರಿಯಾ ಸೇರಿ ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts