More

    ಶಿವಾಜಿ ಸಮುದಾಯಕ್ಕೆ ಸೀಮಿತರಲ್ಲ

    ಚಿಕ್ಕೋಡಿ: ಶಿವಾಜಿ ಮಹಾರಾಜರು ಕೇವಲ ಮರಾಠ ಸಮುದಾಯಕ್ಕೆ ಸೀಮಿತರಲ್ಲ. ಅವರು ಎಲ್ಲ ಸಮುದಾಯದ ಕಣ್ಣುಗಳಿದ್ದಂತೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

    ತಾಲೂಕಿನ ಬೆಳಕೂಡ ಗ್ರಾಮದಲ್ಲಿ 20 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಸಾಂಸ್ಕೃತಿಕ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಶೀಘ್ರದಲ್ಲಿ ಬೆಳಕೂಡ, ನಾಗರಮುನ್ನೊಳಿ ಸಂಪರ್ಕಿಸುವ ಹಿರಿ ಹಳ್ಳಕ್ಕೆ ಬ್ರಿಡ್ಜ್ ಕಂ ಬಾಂದಾರ ನಿರ್ಮಿಸಲು 2 ಕೋಟಿ ರೂ. ಅನುದಾನ ಕೊಡಿಸುವುದಾಗಿ ತಿಳಿಸಿದ ಅವರು, ಬಿಜೆಪಿ ಸರ್ಕಾರ ಮರಾಠ ಅಭಿವದ್ಧಿ ನಿಗಮವನ್ನು ಪ್ರಾರಂಭಿಸಿ, ಅದಕ್ಕೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಸಮುದಾಯದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

    ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಛತ್ರಪತಿ ಶಿವಾಜಿ ಅವರಿಗೆ ಶೂರರ, ಧೀರರ ಇತಿಹಾಸಕಾರರ ಕತೆಗಳನ್ನು ಹೇಳುತ್ತ ಜಿಜಾಬಾಯಿ ಹಾಲು ಕುಡಿಸುತ್ತಿದ್ದರು. ಗಡಿಭಾಗದ ಧರ್ಮವನ್ನು ಉಳಿಸಿದವರು ಶಿವಾಜಿ ಮಹಾರಾಜರು. ಅವರ ಆದರ್ಶ ಇಂದಿನ ಯುವ ಪೀಳಿಗೆಗೆ ಮೈಗೂಡಿಸಿಕೊಳ್ಳಬೇಕು ಎಂದರು. ಮಾಂಜರಿ ಸಿದ್ಧ್ದಗಿರಿ ಸೇವಾ ಮಠದ ಶ್ರೀಪಾದ ಗಿರಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಬೆಳಕೂಡ ಗ್ರಾಪಂ ಅಧ್ಯಕ್ಷ ಬಸವರಾಜ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ, ಬಜರಂಗದಳ ಕರ್ನಾಟಕ ಉತ್ತರ ಪ್ರಾಂತ ಪ್ರಮುಖ ವಿಠ್ಠಲ ಜೀ, ವಕೀಲ ಬಿ.ಆರ್.ಯಾದವ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಅನಿಲ ಮಾನೆ, ಬಾಳಾಸಾಹೇಬ ಪಾಟೀಲ, ವಿಠ್ಠಲ ಮಾಗಮಾರೆ, ಟಿ.ಎಸ್.ಮೋರೆ ಇತರರಿದ್ದರು. ನಟರಾಜ ಹಿರೇಮಠ ಸ್ವಾಗತಿಸಿ ನಿರೂಪಿಸಿದರು. ಟಿ.ಎಸ್.ಮೋರೆ ವಂದಿಸಿದರು.

    ಐನಾಪುರ: ದೇಶದಲ್ಲಿ ಹಿಂದು ಸಾಮ್ರಾಜ್ಯ ರೂಪಿಸುವ ಮೂಲಕ ಲಕ್ಷಾಂತರ ಜನರನ್ನು ರಕ್ಷಿಸಿದವರು ಛತ್ರಪತಿ ಶಿವಾಜಿ ಮಹಾರಾಜರು ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಪಟ್ಟಣದ ಗಾಂಧಿ ಚೌಕದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರಲ್ಲಿ ಉಚ್ಚ-ನೀಚ ಎಂಬ ಭೇದ ಇರಲಿಲ್ಲ ಎಂದರು.
    ಮೌಳಿ ಸಮುದಾಯದ ಸೈನಿಕರನ್ನು ಕಟ್ಟಿಕೊಂಡು ಚಾಣಾಕ್ಷತೆಯಿಂದ ಸಾಮ್ರಾಜ್ಯ ವಿಸ್ತರಿಸಿದರು. ಗುರು ರಾಮದಾಸ್ ಹಾಗೂ ತಾಯಿ ಜಿಜಾಮಾತೆಯ ಗರಡಿಯಲ್ಲಿ ಉತ್ತಮ ಸಂಸ್ಕಾರವನ್ನು ಪಡೆದು ಸಾಮ್ರಾಜ್ಯ ಸ್ಥಾಪಿಸಿದರು ಎಂದರು. ಬಿಜೆಪಿ ಮುಖಂಡ ದಾದಾ ಪಾಟೀ, ತಮ್ಮಣ್ಣ ಪಾರಶೆಟ್ಟಿ ಹಾಗೂ ಸಂಜೀವ ಬಿರಡಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯ ಅರುಣ ಗಾಣಿಗೇರ, ರಾಜೇಂದ್ರ ಪೋತದಾರ, ಪಿ.ಕೆ.ಪಿ.ಎಸ್ ಅಧ್ಯಕ್ಷ ಕುಮಾರ ಅಪರಾಜ, ಸಂಜಯ ಕೂಚನುರೆ, ಪ್ರವೀಣ ಗಾಣಿಗೇರ ಇತರರಿದ್ದರು.

    ತೆಲಸಂಗ: ಭಾರತೀಯ ಪರಿಕಲ್ಪನೆಗೆ ಅರ್ಥ ತಂದ ವ್ಯಕ್ತಿ ಶಿವಾಜಿ ಮಹಾರಾಜರು ಎಂದು ಯುವ ಮುಖಂಡ ಪ್ರಭಾಕರ ಮೋರೆ ಹೇಳಿದರು. ಗ್ರಾಮದ ಛತ್ರಪತಿ ಶಿವಾಜಿ ವತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಇನ್ನೂ ಹದಿಹರೆಯದಲ್ಲೇ ಬಿಜಾಪುರ ಸುಲ್ತಾನರ ವಶದಲ್ಲಿದ್ದ ತೋಮಾ, ರಾಯಗಡ ಮತ್ತು ಕೊಂಡಾನ ಕೋಟೆಗಳನ್ನು ಜಯಿಸುವ ಮೂಲಕ ವೀರರೆನಿಸಿದ್ದರು ಎಂದು ತಿಳಿಸಿದರು. ತಾಪಂ ಮಾಜಿ ಸದಸ್ಯ ಅರವಿಂದ ಉಂಡೋಡಿ, ಶ್ರೀಶೈಲ ಶೆಲ್ಲೆಪ್ಪಗೋಳ, ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ನಿವತ್ತ ಸೈನಿಕ ಗ್ಯಾನು ನಲವಡೆ, ಸುಭಾಸ ಖೋಬ್ರಿ, ಕೇಶವ ಉಂಡೋಡಿ, ವಾಸು ಮೋರೆ, ಬಸವರಾಜ ರೋಡಗಿ, ಸಂದೀಪ ಮೋರೆ, ಜಗದೀಶ ಮಠದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts