More

    ಶಿವಶರಣರ ಸಂದೇಶಗಳು ಬದುಕಿನ ದಾರಿದೀಪ

    ಬಾಗಲಕೋಟೆ: ಶಿವ ಶರಣರು ತಮ್ಮ ವಚನಗಳ ಮೂಲಕ ಸಾರಿದ ಸಂದೇಶಗಳು ಎಲ್ಲರ ಬದುಕಿಗೆ ಮಾರ್ಗದರ್ಶನಗಳಾಗಿವೆ ಎಂದು ಸಂಸದ ಪಿ.ಸಿ ಗದ್ದಿಗೌಡರ ಹೇಳಿದರು.
    ನವನಗರದ ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ನುಲಿಯ ಚಂದಯ್ಯನವರು ಒಬ್ಬ ಕಾಯಕಯೋಗಿಯಾಗಿದ್ದವರು. ಕಾಯಕದ ಬಗ್ಗೆ ಹೆಚ್ಚು ಮಹತ್ವ ಕೊಟ್ಟಿದ್ದಲ್ಲದೇ ತಮ್ಮ ಕಾಯಕದಲ್ಲೇ ದೇವರನ್ನು ಕಂಡವರು. ನೂಲು ನೆಯುವ ಕಾಯಕ ಮಾಡುತ್ತ, ಅನುಭವ ಮಂಟಪದಲ್ಲಿ ತಮ್ಮನ್ನು ತೊಡಗಿಸಿಕೊಂಡ ಶಿವಶರಣರಲ್ಲಿ ಒಬ್ಬರಾದವರು. ಇವರನ್ನು ನೋಡಿಯೇ ಬಸವಣ್ಣನವರು ಕಾಯಕವೇ ಕೈಲಾಸ ಎನ್ನುವಂತಾಯಿತಿ ಎಂದು ಹೇಳಿದರು.
    ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಮಾತನಾಡಿ, ಪ್ರಥಮ ಬಾರಿಗೆ ಸರ್ಕಾರವು ಶಿವಶರಣ ಚಂದಯ್ಯನವರ ಜಯಂತಿಯನ್ನು ಆಚರಿಸುತ್ತಿರುವುದು ಕೊರವ ಸಮಾಜಕ್ಕೆ ಸಂತಸ ತಂದಿದ್ದು, ಸಮಾಜ ಬಾಂದವರೆಲ್ಲ ನುಲಿಯ ಚಂದಯ್ಯನವರಂತೆ ಕಾಯಕ ನಿಷ್ಠೆ ತೋರಿ, ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು ಎಂದರು.

    ಕೊರವ ಸಮಾಜದ ಶಿವಾರೂಡ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾಹಿತಿ ಹಾಗೂ ಸಂಶೋದಕ ಡಾ. ಲೋಕಣ್ಣಾ ಭಜಂತ್ರಿ ಅವರು ಶಿವ ಶರಣ ನೂಲಿಯ ಚಂದಯ್ಯನವರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಂಜುಳಾ ಸಂಬಾಳದ ಹಾಗೂ ತಂಡದವರು ವಚನ ಗಾಯನ ಪ್ರಸ್ತುತ ಪಡಿಸಿದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹಾಗೂ ಕೊರವ ಸಮಾಜದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts