More

    ಶಿಕ್ಷಕರಿಗೆ ಕಾಲಕಾಲಕ್ಕೆ ಮಾಹಿತಿ ಸಿಗಲಿ


    ಯಾದಗಿರಿ: ಸಕರ್ಾರಿ ಉದರ್ು ಶಾಲಾ ಶಿಕ್ಷಕರಿಗೆ ಶಿಕ್ಷಣದ ಹೊಸ ವಿಧಾನಗಳ ಬಗ್ಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿ ಸಿಕ್ಕರೆ, ಮಕ್ಕಳಿಗೆ ಕಲಿಸುವ ಕ್ಷಮತೆ ಹೆಚ್ಚಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿದರ್ೇಶಕ ಎಚ್.ಟಿ. ಮಂಜುನಾಥ ಅಭಿಪ್ರಾಯಪಟ್ಟರು.

    ನಗರದ ನಗರದ ಬೈತುಲ್ಮಾಲ್ ಫಂಕ್ಷನ್ಹಾಲ್ನಲ್ಲಿ ಭಾನುವಾರ ತಂಜಿಮುಲ್ ಮುಸ್ಲಿಮಿನ್ ಓ. ಬೈತುಲ್ ಮಾಲ್, ಅಖಿಲ ಭಾರತ ಉದರ್ು ಅಭಿವೃದ್ಧಿ ಸಂಘದ ಜಿಲ್ಲಾ ಘಟಕ, ಗುರುಮಠಕಲ್ನ ಉಮ್ಮೀದ್ ವೆಲ್ಫೇರ್ ಅಸೋಸಿಯೇಷನ್ ಮತ್ತು ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಷನ್ಗಳ ಸಹಯೋಗದಲ್ಲಿ ಆಯೋಜಿಸಿದ್ದ ಉದರ್ು ಶಿಕ್ಷಕರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ವದ ಒಂದು ದಿನದ ತರಬೇತಿ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಮೊದಲ ಬಾರಿಗೆ ಇಂಥ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದರಿಂದ ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದರು.

    ಮೊದಲ ಗೋಷ್ಠಿಯಲ್ಲಿ ಬೆಂಗಳೂರಿನ ಶಿಕ್ಷಣ ಸಂಯೋಜಕ ಮಹಮ್ಮದ್ ಮಾಜ್, ಸಕರ್ಾರಿ ಶಾಲೆಗಳ ಅಭಿವೃದ್ಧಿ ಕುರಿತು ಮಾತನಾಡಿ, ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಸಕರ್ಾರಗಳು ಮುಂದಾಗಬೇಕು. ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಜ್ಞಾನ ದೇಗುಲದಲ್ಲಿ ಸಿಗುವಂತಾಗಬೇಕು ಎಂದರು.

    ಇದೇ ವೇಳೆ ಜಿಲ್ಲೆಯ ಮೂರು ಸಕರ್ಾರಿ ಶಾಲೆಗಳಿಗೆ ಅತ್ಯುತ್ತಮ ಉದರ್ು ಶಾಲೆಗಳೆಂದು ಗುರುತಿಸಿ ಬಹುಮಾನ ವಿತರಿಸಲಾಯಿತು. ಸಮಾಜಿಕ ಹೊರಾಟಗಾರ ಉಮೇಶ ಕೆ. ಮುದ್ನಾಳಗೆ ಸಾಮಾಜಿಕ ಸಾಧಕ ಪುರಸ್ಕಾರ ನೀಡಲಾಯಿತು. ಇದರ ಜತೆಗೆ ಉದರ್ು ಭಾಷೆಯಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

    ಮುಖಂಡರಾದ ಸನ್ನಿಗೌಡ ತುನ್ನೂರ, ಪ್ರಭಾರಿ ಬಿಇಒ ಮಲ್ಲಿಕಾಜರ್ುನ ಪೂಜಾರಿ, ಹಫೀಜ್ ಪಟೇಲ್, ವಕ ಕಮಿಟಿ ಮಾಜಿ ಜಿಲ್ಲಾಧ್ಯಕ್ಷ ಜಿಲಾನಿ ಅಫಘಾನ, ಉಮ್ಮೀದ್ ವೆಲ್ಫೇರ್ ಕಮಿಟಿ ನಿದರ್ೇಶಕ ಖಾಜಾ ಮೈನುದ್ದಿನ್, ನಗರಸಭೆ ಸದಸ್ಯ ಮನ್ಸೂರ್ ಅಫಘಾನ್, ಡಾ.ರಫೀ ಸೌದಾಗರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts