More

    ಶಾಲಾ ಶಿಕ್ಷಕರಿಗೆ ಸೂಕ್ತ ರಕ್ಷಣೆ ನೀಡಿ

    ಸಾಗರ: ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾಗಮನ ಪಾಠಕ್ಕೆ ಮನೆಮನೆಗೆ ಹೋಗುತ್ತಿರುವ ಶಿಕ್ಷಕಿಯರಿಗೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಎಸಿಗೆ ಮನವಿ ಸಲ್ಲಿಸಲಾಯಿತು.

    ಸಂಘದ ಗೌರವಾಧ್ಯಕ್ಷ ಡಿ.ಗಣಪತಪ್ಪ ಮಾತನಾಡಿ, ಸರ್ಕಾರ ವಿದ್ಯಾಗಮನ ಯೋಜನೆ ಜಾರಿಗೆ ತರುವ ಮೂಲಕ ಕರೊನಾ ಸಂದರ್ಭದಲ್ಲೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನ ಮಾಡಿದೆ. ವಿದ್ಯಾಗಮನ ಯೋಜನೆಯಡಿ ಎಲ್ಲ ಶಿಕ್ಷಕರು ದೇಗುಲ, ಸಮುದಾಯ ಭವನಗಳಲ್ಲಿ ಮಕ್ಕಳಿಗೆ ಬೋಧಿಸುತ್ತಿದ್ದಾರೆ. ತಾಲೂಕಿನಲ್ಲಿ ಯೋಜನೆ ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದೆ ಎಂದರು.

    ಗ್ರಾಮಾಂತರ ಪ್ರದೇಶಗಳಿಗೆ ಹೋಗಲು ಮಹಿಳಾ ಶಿಕ್ಷಕಿಯರಿಗೆ ಸಮಸ್ಯೆ ಉಂಟಾಗುತ್ತಿದೆ. ತಾಲೂಕಿನಲ್ಲಿ ಅತ್ಯಂತ ಕುಗ್ರಾಮಗಳಿದ್ದು ಅಲ್ಲಿ ಶಾಲೆಗಳಿವೆ. ತಾಲೂಕಿನಲ್ಲಿ ಶೇ.70 ಮಹಿಳಾ ಶಿಕ್ಷಕರಿದ್ದು ಅವರಿಗೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ. ಇದರಿಂದ ಮಹಿಳಾ ಶಿಕ್ಷಕರು ಇತರೆ ವಾಹನ ಆಶ್ರಯಿಸುವ ಸ್ಥಿತಿ ನಿರ್ವಣವಾಗಿದೆ. ಹೊಸನಗರದಲ್ಲಿ ಮಹಿಳಾ ಶಿಕ್ಷಕಿಯೊಬ್ಬರ ಸರಗಳ್ಳತನ ನಡೆದಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.

    ಸಂಘದ ಅಧ್ಯಕ್ಷ ಎನ್.ಎಚ್.ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಳೆ, ನಿರ್ದೇಶಕ ಮಾಲತೇಶ್, ಶಿಕ್ಷಕರಾದ ಕೆ.ಬಿ.ಪಾರ್ವತಿ, ಎಸ್.ಎಂ.ಶಾರದಾ, ಲಲಿತಾ ಹೆಗಡೆ, ದಿವಾಕರ್, ಗುತ್ಯಪ್ಪ, ದೇವೇಂದ್ರಪ್ಪ, ಚಂದ್ರಶೇಖರ್, ವೀರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts