More

    ಶಾಂತಲಾ ನಾಡಕರ್ಣಿ ಅಂಕೋಲಾ ಪುರಸಭೆ ಅಧ್ಯಕ್ಷೆ

    ಅಂಕೋಲಾ: ಇಲ್ಲಿನ ಪುರಸಭೆಯ ಅಧ್ಯಕ್ಷರಾಗಿ ಬಿಜೆಪಿ ಶಾಂತಲಾ ನಾಡಕರ್ಣಿ ಹಾಗೂ ಉಪಾಧ್ಯಕ್ಷರಾಗಿ ರೇಖಾ ಗಾಂವಕರ್ ಭಾನುವಾರ ಆಯ್ಕೆಯಾದರು.

    ಒಟ್ಟು 23 ಸದಸ್ಯ ಬದಲ ಪುರಸಭೆಯಲ್ಲಿ ಬಿಜೆಪಿಯ 8 ಸದಸ್ಯರು, ಐವರು ಪಕ್ಷೇತರರು ಹಾಗೂ ಶಾಸಕಿ ರೂಪಾಲಿ ನಾಯ್ಕ ಸೇರಿ 14 ಸದಸ್ಯರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು.

    ಕಾಂಗ್ರೆಸ್​ನಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ನಾಮಪತ್ರ ಸಲ್ಲಿಸಿದ್ದ ಮಂಜುನಾಥ ಎಸ್. ನಾಯ್ಕ, ಮತ್ತು ಜೈರಾಬಿ ಬೇಂಗ್ರೆ ತಮ್ಮ ಪಕ್ಷದ 10 ಮತಗಳನ್ನು ಮಾತ್ರ ಪಡೆದು ಪರಾಭವಗೊಂಡರು.

    ತಹಸೀಲ್ದಾರ್ ಉದಯ ಕುಂಬಾರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts