More

    ಶರಣಬಸವ ವಿವಿಯಲ್ಲಿ ಐಇಇಇ ವಿದ್ಯಾರ್ಥಿ ಶಾಖೆ ಉದ್ಘಾಟನೆ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಕಂಪ್ಯೂಟರ್ ಸೈನ್ಸ್, ಮ್ಯಾನೇಜ್ಮೆಂಟ್, ಸೈನ್ಸ್ ಮತ್ತು ಟೆಕ್ನಾಲೊಜಿ ಎಂಜಿನಿಯರಿಂಗ್ ವಿದ್ಯಾರ್ಥಿ ಗಳಿಗೆ ಸಂಶೋಧನಾ ಮತ್ತು ಗುಣಾತ್ಮಕ ಸಂಶೋಧನಾ ಕಾರ್ಯಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಹಯೋಗದಲ್ಲಿ ಹೊಸ ಮಾರ್ಗ ಆರಂಭಿಸುವದರೊಂದಿಗೆ ವಿಶ್ವವಿದ್ಯಾಲಯದ ಐಇಇಇ ವಿದ್ಯಾರ್ಥಿ ಶಾಖೆ ಪ್ರತಿಷ್ಠಿತ ಕ್ಲಬ್ಗೆ ಸೇರ್ಪಡೆಗೊಳ್ಳುವ ಮೂಲಕ ಶರಣಬಸವ ವಿಶ್ವವಿದ್ಯಾಲಯಕ್ಕೆ ಗರಿ ಮೂಡಿದೆ ಎಂದು ಐಇಇಇ ಇಂಡಿಯಾ ಕೌನ್ಸಿಲ್ ಅಧ್ಯಕ್ಷ ಪುನೀತ್ಕುಮಾರ್ ಮಿಶ್ರಾ ಹೇಳಿದರು.
    ನಗರದ ಶರಣಬಸವ ವಿಶ್ವವಿದ್ಯಾಲಯದ ಸಮಾವೇಶ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶರಣಬಸವ ವಿಶ್ವವಿದ್ಯಾಲಯದ ಐಇಇಇ ವಿದ್ಯಾರ್ಥಿ ಶಾಖೆ ಜಾಗೃತಿ ಮತ್ತು ಸದಸ್ಯತ್ವದ ವಿಷಯದ ವೆಬಿನಾರ್ ಉದ್ಘಾಟಿಸಿ ಮಾತನಾಡಿದರು.
    ಪ್ರಸಕ್ತ ವರ್ಷ ಐಇಇಇ ಶಾಖೆಗೆ ಧನಸಹಾಯ ನೀಡುವ ಯೋಜನೆಗಳ ಸಂಖ್ಯೆ 50ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದರಿಂದ ಹೆಚ್ಚಿನ ಅರ್ಹ ವಿದ್ಯಾರ್ಥಿಗಳು ಯೋಜನೆ ಸಿದ್ಧಪಡಿಸಲು ಮತ್ತು ತಮ್ಮ ಪ್ರಾಯೋಗಿಕ ಕಾರ್ಯ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
    ವಿವಿ ಕುಲಸಚಿವ ಡಾ.ಅನೀಲ ಕುಮಾರ್ ಬಿಡವೆ ಮಾತನಾಡಿ, ಐಇಇಇ ವಿದ್ಯಾರ್ಥಿ ಶಾಖೆಯಿಂದ ಬೋಧಕವರ್ಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಐಇಇಇ ವಿದ್ಯಾರ್ಥಿ ಗಳಿಗೆ ತಮ್ಮ ಜ್ಞಾನ ಹೆಚ್ಚಿಸಲು ವೇದಿಕೆ ಒದಗಿಸಲಿದೆ ಎಂದರು.
    ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದಶರ್ಿ ಬಸವರಾಜ ದೇಶಮುಖ, ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡಾ.ಲಕ್ಷ್ಮಿ ಪಾಟೀಲ್ ಮಾಕಾ, ಡಾ. ಬಸವರಾಜ ಮಠಪತಿ ಪಾಲ್ಗೊಂಡಿದ್ದರು. ಪ್ರೊ.ಶಶಿಧರ ಸೊನ್ನದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts