More

    ಶರಣಬಸವೇಶ್ವರ ರಥೋತ್ಸವ 12ರಂದು

    ಕಲಬುರಗಿ: ಆರು ದಿನಗಳ ಕಾಲ ನಡೆಯುವ ಕಲ್ಯಾಣ ನಾಡಿನ ಆರಾದ್ಯ ದೈವ, ೨೦೧ನೇ ಐತಿಹಾಸಿಕ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ೮ರಿಂದ ಆರಂಭವಾಗಲಿದ್ದು, ಮಾ.೧೨ರಂದು ರಥೋತ್ಸವ ನೆರವೇರಲಿದೆ. ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾ ಮನೆಯಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರು ಜಾತ್ರೆ ಕುರಿತು ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ನೀಡಿದ ಮಾಹಿತಿ ಹೀಗಿದೆ.
    ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ ಭಕ್ತರಿಂದ ಪಾದಪೂಜೆ ಸ್ವೀಕರಿಸಲು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡು, ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ನೆರವೇರಲಿದೆ ಎಂದು ಹೇಳಿದರು.
    ಜಗನ್ನಾಥ ಡಿಗ್ಗಿ ದಂಪತಿಗಳ ಸಾಮಾಜಿಕ-ಧಾರ್ಮಿಕ ಸೇವೆ ಗುರುತಿಸಿ ದಾಸೋಹ ಜ್ಞಾನರತ್ನ ಪ್ರಶಸ್ತಿ ನೀಡಲಾಗುತ್ತಿದೆ. ನಿತ್ಯ ಶರಣಬಸವೇಶ್ವರ ಲೀಲೆಗಳ ಕುರಿತು ವಿವಿಧ ಪೂಜ್ಯರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನ ನಡೆಯಲಿದೆ. ಐದನೇ ದಿನ 12ರಂದು ಶರಣಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ರಥೋತ್ಸವ ನಡೆಯಲಿದ್ದು, ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಕಾಶಿಯ ಗಂಗಾರತಿ ಮಾದರಿಯಲ್ಲಿ ಶರಣಾರತಿ ಕಾರ್ಯಕ್ರಮ ಕಾಶಿಯ ಪಂಡಿತರಿಂದ ನಡೆಯಲಿದೆ ಎಂದು ತಿಳಿಸಿದರು.
    ೯ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ, ಅವರ ಸಹೋದರಿಯರಾದ ಕು. ಭವಾನಿ ಎಸ್. ಅಪ್ಪ, ಕು. ಶಿವಾನಿ ಎಸ್ ಅಪ್ಪ , ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ.ನಿರಂಜನ ನಿಷ್ಠಿ, ಕುಲಸಚಿವ ಅನಿಲ್‌ಕುಮಾರ್ ಬಿಡವೆ, ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಡೀನ್ ಡಾ. ಲಕ್ಷ್ಮೀ ಮಾಕಾ, ಭೀಮಾಶಂಕರ ಪಾಟೀಲ್ ಇತರರು ಇದ್ದರು.

    ವಾರಣಾಸಿ ಪುರೋಹಿತರಿಂದ ಶರಣಾರತಿ ೧೮ನೇ ಶತಮಾನದ ಸಂತ ಶ್ರೀ ಶರಣಬಸವೇಶ್ವರರ ಪುಣ್ಯತಿಥಿ ಅಂಗವಾಗಿ ೧೨ರಂದು ರಥೋತ್ಸವ ಜರುಗಲಿದ್ದು, ನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ವಾರಣಾಸಿಯ ೧೨ ಜನ ಪುರೋಹಿತರ ತಂಡವು ಗಂಗಾ ಆರತಿ ಮಾದರಿಯಲ್ಲಿ ಶರಣಾರತಿ ನೆರವೇರಿಸಲಿz್ದÁರೆ. ಶರಣಾರತಿಯು ಕಣ್ಮನ ಸೆಳೆಯುವ ದೃಶ್ಯವಾಗಿದ್ದು, ವಿಶೇಷವಾಗಿ ನಿರ್ಮಿಸಿದ ಪೀಠದ ಮೇಲೆ ವಾರಣಾಸಿಯ ಪುರೋಹಿತರು ಆರತಿ ದೃಶ್ಯ ಜನರಿಗೆ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಇದು ೨೦೧ನೇ ಶರಣಬಸವೇಶ್ವರ ಜಾತ್ರೆಯ ವೈಶಿಷ್ಠÈಗಳಲ್ಲಿ ಒಂದಾಗಿದೆ ಎಂದು ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ದಾಕ್ಷಾಯಿಣಿ ಅವ್ವಾಜಿ ಹೇಳಿದರು.

    ನಾಟಕ ಪ್ರದರ್ಶನ: ೫ನೇ ದಿನದ ರಥೋತ್ಸವದ ನಂತರ ಆರನೇ ದಿನ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಹವ್ಯಾಸಿ ಕಲಾ ಬಳಗದ ೩೦ ಜನ ಸದಸ್ಯರಿಂದ ಮಹಾದಾಸೋಹಿ ಶರಣಬಸವೇಶ್ವರರ ಕುರಿತು ನಾಟಕ ಪ್ರದರ್ಶನ ನಡೆಯಲಿದೆ. ಆಂಧ್ರಪ್ರದೇಶದ ಶ್ರೀಶೈಲಂ ಸಾರಂಗ ಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ಚೌದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿz್ದÁರೆ. ರಮೇಶ್ ಬಂಧು ನಿರ್ಮಿಸಿರುವ ನಾಟಕವನ್ನು ಬಸವರಾಜ ಪಂಚಗಲ್ ಬರೆದು ನಿರ್ದೇಶಿಸಿz್ದÁರೆ. ೧೧ ಮತ್ತು ೧೨ರಂದು ಶರಣಬಸವೇಶ್ವರ ಜಾತ್ರಾ ಮೈದಾನ, ೧೩ರಂದು ದೇವಸ್ಥಾನ ಪ್ರಾಂಗಣದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts