More

    ಶಖಾಪುರ ಶ್ರೀಮಠದ ದ್ವಾರ ಬಾಗಿಲಿಗೆ 10 ಲಕ್ಷ ರೂ. ಅನುದಾನ; ಡಾ.ಅಜಯಸಿಂಗ್​

    ಜೇವರ್ಗಿ: ಶಕಾಪುರ ತಪೋವನಮಠ ಸಹಸ್ರಾರು ಭಕ್ತ ಸಮೂಹವನ್ನು ಹೊಂದಿದ್ದು, ಶ್ರೀಮಠದ ದ್ವಾರ ಬಾಗಿಲು ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಕಲ್ಯಾನ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಭರವಸೆ ನೀಡಿದರು.

    ಶಕಾಪುರ (ಎಸ್.ಎ) ಸದ್ಗುರು ವಿಶ್ವಾರಾಧ್ಯ ತಪೋವನ ಮಠದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮ ಶಿವಯೋಗಿಗಳ 73ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿ, ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಧರ್ಮ ಕಾರ್ಯದ ಜತೆಗೆ ದಾಸೋಹ ಸೇವೆ ಸೇರಿ ಇನ್ನಿತರ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಶ್ರೀಮಠದ ಪರಂಪರೆಯನ್ನು ಅಚ್ಚುಕಟ್ಟಾಗಿ ಮುಂದುವರಿಸಿಕೊAಡು ಹೋಗುತ್ತಿದ್ದಾರೆ ಎಂದರು ಬಣ್ಣಿಸಿದರು.

    ಶಕಾಪುರದ ಶ್ರೀ ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶ್ರೀ ಸಿದ್ಧರಾಮ ಶಿವಯೋಗಿಗಳು ಜೀವನದುದ್ದಕ್ಕೂ ಧರ್ಮ ಪ್ರಚಾರ ಹಾಗೂ ದಾಸೋಹ ಸೇವೆ ನಡೆಸಿಕೊಂಡು ಬಂದಿದ್ದಾರೆ. ಸಾಕಷ್ಟು ಪವಾಡಗಳ ಮೂಲಕ ಜನರನ್ನು ಕಷ್ಟಗಳಿಂದ ದೂರ ಮಾಡಿದ್ದಾರೆ. ಸಮಾಜಕ್ಕೆ ಶ್ರೀಗಳ ಕೊಡುಗೆ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವು ಸಾಗುತ್ತಿz್ದೆÃವೆ ಎಂದು ನುಡಿದರು.

    ಮುಚಳಂಬಾದ ಶ್ರೀ ಪ್ರಣವಾನಂದ ಸ್ವಾಮೀಜಿ, ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು, ತಾಂಬಾಳದ ಶ್ರೀ ವಿಜಯಕುಮಾರ ಸ್ವಾಮೀಜಿ, ಶಹಾಪುರದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, ವೆಂಕಟಬೇನೂರಿನ ಶ್ರೀ ಸಿದ್ಧರೇಣುಕ ಶಿವಾಚಾರ್ಯರು, ಸೇಡಂನ ಶ್ರೀ ಸದಾಶಿವ ಸ್ವಾಮೀಜಿ, ಬೆಳಗುಂಪಿಯ ಶ್ರೀ ಅಭಿನವ ಪರ್ವತೇಶ್ವರ ಶಿವಚಾರ್ಯರು, ಚಿನಮಳ್ಳಿಯ ಶ್ರೀ ಸಿದ್ಧರಾಮ ಸ್ವಾಮೀಜಿ, ಕಲಕೇರಿಯ ಶ್ರೀ ರಾಜಗುರು ಗುರುಸ್ವಾಮಿ, ಕುಳೇಕುಮಟಗಿಯ ಶ್ರೀ ಗುರುಸ್ವಾಮಿ ಶರಣರು ನೇತೃತ್ವ ವಹಿಸಿದ್ದರು.
    ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಪ್ರಮುಖರಾದ ಎಂ. ಬಿ. ಪಾಟೀಲ್ ಹರವಾಳ, ಮಲ್ಲಿನಾಥಗೌಡ ಯಲಗೋಡ, ತಿಪ್ಪಶೆಟ್ಟಿ ಸರಡಗಿ, ರೇವಣಸಿದ್ದಪ್ಪ ಸಂಕಾಲಿ, ವಿಜಯಕುಮಾರ ನರಿಬೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts