More

    ವ್ಯವಸ್ಥೆ ಸುಧಾರಣೆಗೆ ಮುಂದಾಗದ ಕೆಆರ್​ಐಡಿಎಲ್

    ಭಾಲ್ಕಿ: ಕನರ್ಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ಐಡಿಎಲ್) ಅಡಿ ತಾಲೂಕಿನಲ್ಲಿ ಕೈಗೊಂಡ ಬಹುತೇಕ ಕಾಮಗಾರಿಗಳು ಅಪೂರ್ಣ ಹಾಗೂ ವಿಳಂಬ ಆಗುತ್ತಿರುವ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಆದರೆ ಅಧಿಕಾರಿಗಳು ವ್ಯವಸ್ಥೆ ಸುಧಾರಣೆಗೆ ಮುಂದಾಗುತ್ತಿಲ್ಲ ಎಂದು ಶಾಸಕ ಈಶ್ವರ ಖಂಡ್ರೆ ಅಸಮಾಧಾನ ಹೊರಹಾಕಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ತುತರ್ು ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗ್ರಾಮ ವಿಕಾಸ ಯೋಜನೆಯಡಿ ಚಳಕಾಪುರ ವಾಡಿ, ನೇಳಗಿ, ರುದನೂರು ಮೊದಲಾದ ಕಡೆ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ ಇತರ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಚಳಕಾಪುರ ವಾಡಿಯಲ್ಲಿ ಕೊಳವೆಬಾವಿ ಕೊರೆಸಿ ಮೂರು ವರ್ಷವಾದರೂ ನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆದಾರನಿಗೆ ಕೆಆರ್ಐಡಿಎಲ್ ಹಣ ಪಾವತಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.

    ವಿಳಂಬವಾಗಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಪದೇಪದೆ ಹೇಳುತ್ತಿದ್ದೇನೆ. ಆದರೆ ಇಲ್ಲಸಲ್ಲದ ಸಬೂಬು ಹೇಳಿ ಪ್ರತಿಸಲ ನುಣುಚಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇನ್ಮುಂದಾದರೂ ಎಚ್ಚೆತ್ತುಕೊಂಡು ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ. ಇಲ್ಲದಿದ್ದರೆ ಕೆಆರ್ಐಡಿಎಲ್ ಬ್ಲಾಕ್ ಲಿಸ್ಟ್ಗೆ ಸೇರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
    ಜಿಪಂ ಸಿಒ ಶಿಲ್ಪಾ ಎಂ., ತಹಸೀಲ್ದಾರ್ ಕೀತರ್ಿ ಚಾಲಕ್, ತಾಪಂ ಇಒ ದೀಪಿಕಾ ನಾಯ್ಕರ್ ಇತರರಿದ್ದರು.

    ರಸ್ತೆಗಳಲ್ಲಿನ ತಗ್ಗು ಮುಚ್ಚಿಸಿ: ಮಳೆಗೆ ಗಾಮೀಣ ಸೇರಿ ಮುಖ್ಯ ರಸ್ತೆಗಳಲ್ಲಿ ತಗ್ಗುಗುಂಡಿಗಳು ಬಿದ್ದಿದ್ದು, ಜನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಲೋಕೋಪಯೋಗಿ, ಪಂಚಾಯತ್ ರಾಜ್, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ತಗ್ಗುಗಳನ್ನು ತಕ್ಷಣ ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಖಂಡ್ರೆ ತಾಕೀತು ಮಾಡಿದರು.

    ಪ್ರಕೃತಿ ವಿಕೋಪದಡಿ ತಕ್ಷಣ ಪರಿಹಾರ ಕೊಡಿ: ಸಭೆಯಲ್ಲಿ ಮಳೆ ಹಾನಿ ವರದಿ ಪಡೆದ ಶಾಸಕರು ಡಿಸಿಗೆ ಕರೆ ಮಾಡಿ ತಾಲೂಕಿನಲ್ಲಿ ಮೊದಲ ಹಂತದಲ್ಲಿ ಆಗಿರುವ ಮಳೆ ಹಾನಿ ವರದಿಯನ್ನು ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಪರಿಶೀಲಿಸಿ ತಕ್ಷಣ ಪ್ರಕೃತಿ ವಿಕೋಪದಡಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದು ಶಾಸಕ ಖಂಡ್ರೆ ಹೇಳಿದರು.

    ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲೆಡೆ ಹೆಚ್ಚೆಚ್ಚು ಗಿಡ ನೆಡಲು ಆದ್ಯತೆ ನೀಡಬೇಕು. ಮುಂಬರುವ ಕೆಲ ದಿನಗಳಲ್ಲಿ ಗ್ರಾಮೀಣ, ಮುಖ್ಯ ರಸ್ತೆ, ಪಂಚಾಯಿತಿ ವ್ಯಾಪ್ತಿಯ ಕೆಲ ರಸ್ತೆ ಬದಿಯಲ್ಲಿ ಒಂದೇ ದಿನ 5000 ಗಿಡ ನೆಡುವ ಗುರಿ ಹೊಂದಲಾಗಿದ್ದು, ಅರಣ್ಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು.
    | ಈಶ್ವರ ಖಂಡ್ರೆ, ಶಾಸಕ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts