More

    ವೈದ್ಯರೊಂದಿಗೆ ಸಂಯಮದಿಂದ ವರ್ತಿಸಿ

    ಕಾರವಾರ: ವೈದ್ಯರೊಂದಿಗೆ ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು. ಅಲ್ಲದೆ, ಅವರಿಗೆ ಸಹಕಾರ ನೀಡಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದರು.

    ಉಳಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಜನರ ಅನುಕೂಲಕ್ಕಾಗಿ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆ, ಲ್ಯಾಬ್ ಮುಂತಾದ ಸೌಲಭ್ಯವನ್ನು ಕಲ್ಪಿಸುತ್ತಿದೆ. ಆದರೆ, ವೈದ್ಯರು ಹಳ್ಳಿಗೆ ಬಂದು ಸೇವೆ ಮಾಡಲು ಒಪ್ಪುತ್ತಿಲ್ಲ. ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ವೈದ್ಯರ ಸಮಸ್ಯೆಗಳ ಬಗ್ಗೆ ತಿಳಿದು ಗ್ರಾಮಸ್ಥರು ಅವರೊಟ್ಟಿಗೆ ಸರಿಯಾಗಿ ನಡೆದುಕೊಳ್ಳಬೇಕು ಎಂದು ವಿನಂತಿಸಿದರು.

    ತಾಪಂ ಅಧ್ಯಕ್ಷೆ ಪ್ರಮಿಳಾ ಸುರೇಶ ನಾಯ್ಕ, ತಾಲೂಕು ವೈದ್ಯಾಧಿಕಾರಿ ಡಾ. ಸೂರಜಾ ನಾಯಕ, ಇಂಜಿನಿಯರ್ ರವಿದಾಸ ನಾಯ್ಕ, ಸ್ಥಳೀಯ ಮುಖಂಡರಾದ ರಾಜೇಶ್ವರಿ ಗಾಂವ್ಕರ್, ಉಲ್ಲಾಸ ಪ್ರಭು, ಸುನೀಲದತ್ತ ಎಸ್.ಗಾಂವ್ಕರ್, ವಿಠೋಬ ನಾಯ್ಕ ಇದ್ದರು.

    ನಾಡಕಚೇರಿ ಉದ್ಘಾಟನೆ: ಘಾಡಸಾಯಿ ಹೋಬಳಿಯ ನಾಡ ಕಚೇರಿಯ ನೂತನ ಕಟ್ಟಡವನ್ನು ಶಾಸಕಿ ರೂಪಾಲಿ ನಾಯ್ಕ ಶುಕ್ರವಾರ ಉದ್ಘಾಟಿಸಿದರು. ತಹಸೀಲ್ದಾರ್ ರಾಮಚಂದ್ರ ಕಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts