More

    ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ

    ಗದಗ: ಸಮರ್ಪಕ ಚಿಕಿತ್ಸೆ ನೀಡದ್ದರಿಂದ ರೋಗಿಯ ಸಾವು ಸಂಭವಿಸಿದೆ ಎಂದು ಆರೋಪಿಸಿ ರೋಗಿಯ ಕುಟುಂಬ ಸದಸ್ಯರು ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರ ನಗರದ ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಯಲ್ಲಿ ಜರುಗಿದೆ.

    ತಾಲೂಕಿನ ಚಿಂಚಲಿ ಗ್ರಾಮದ ದೊಡ್ಡಹನುಮಪ್ಪ ಪೂಜಾರ ಜ್ವರದಿಂದ ಬಳಲುತ್ತಿದ್ದುದರಿಂದ ಅವರನ್ನು ಸಂಬಂಧಿಕರು ಸೋಮವಾರ ಮಧ್ಯಾಹ್ನ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಳ್ಳಲು ಕೊಂಚ ವಿಳಂಬ ಮಾಡಲಾಯಿತು. ಅಲ್ಲದೆ, ಸಮರ್ಪಕ ಚಿಕಿತ್ಸೆ ನೀಡಲಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸುತ್ತಿದ್ದಾರೆ. ರೋಗಿಯು ಜ್ವರದಿಂದ ಬಳಲುತ್ತಿದ್ದರಿಂದ ಅವರ ಗಂಟಲ ದ್ರವದ ಮಾದರಿ ತೆಗೆದು ಕೋವಿಡ್-19 ತಪಾಸಣೆಗೆ ಕಳಿಸಲಾಯಿತು. ಆದರೆ, ಒಂದೆರಡು ಗಂಟೆ ನಂತರ ರೋಗಿ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಿತರಾದ ರೋಗಿಯ ಸಂಬಂಧಿಕರು, ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಆಸ್ಪತ್ರೆ ವೈದ್ಯರು, ನರ್ಸ್ ಮತ್ತು ಡಿ ಗ್ರುಪ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯ ಕಿಟಕಿ ಗಾಜು ಒಡೆದು ಹಾಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರಿಂದ ಪರಿಸ್ಥಿತಿ ತಿಳಿಗೊಂಡಿತು. ರೋಗಿಯ ಸಂಬಂಧಿಕರು ಖಾಸಗಿ ವಾಹನದಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಚಿಕಿತ್ಸೆ ಆರಂಭಿಸಲಾಗಿತ್ತು: ಸೋಮವಾರ ರೋಗಿಯನ್ನು ಆಸ್ಪತ್ರೆಗೆ ಕರೆಲಾಗಿತ್ತು. ರೋಗಿಯೂ ಆಸ್ಪತ್ರೆಗೆ ಬರುವ ಸಂದರ್ಭದಲ್ಲಿಯೂ ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದರು. ರೋಗಿಗೆ ಆಕ್ಸಿಜನ್ ಪೂರೈಸಿ, ಚಿಕಿತ್ಸೆ ನೀಡಲಾರಂಭಿಸಿದರು. ಆದರೆ ಒಂದೆರಡು ಗಂಟೆ ನಂತರ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟಿದ್ದಾರೆ. ರೋಗಿ ಮೃತಪಟ್ಟಿದ್ದರಿಂದ ಅವರ ಸಂಬಂಧಿಕರು ವೈದ್ಯರು ಮತ್ತು ನರ್ಸ್​ಗಳ ಮೇಲೆ ಹಲ್ಲೆ ಮುಂದಾಗಿದ್ದಾರೆ. ಇದರಿಂದ ವೈದ್ಯರು ಮತ್ತು ನರ್ಸ್​ಗಳು ಅಲ್ಲಿಂದ ಹೊರಬಂದು ಹಲ್ಲೆಯಿಂದ ತಪ್ಪಿಸಿಕೊಂಡಿದ್ದಾರೆ. ಮೃತದೇಹವನ್ನು ರೋಗಿಯ ಸಂಬಂಧಿಕರು ತೆಗೆದುಕೊಂಡು ಹೋಗಿದ್ದಾರೆ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

    ಸೋಂಕಿನಿಂದ 100 ಜನ ಗುಣ

    ಗದಗ: ಜಿಲ್ಲೆಯಲ್ಲಿ ಸೋಮವಾರ 177 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 100 ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಬ್ಬರು ಸೋಕಿನಿಂದ ಮೃತಪಟ್ಟಿದ್ದಾರೆ.

    ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಜೆ.ಟಿ. ಕಾಲೇಜು ರಸ್ತೆ, ಜಿಮ್್ಸ್ಸ ಕ್ವಾರ್ಟರ್ಸ್, ಗಂಗಿಮಡಿ, ವೀರಸೋಮೇಶ್ವರ ನಗರ, ಸೆಟ್ಲಮೆಂಟ್, ಪಂಚಾಕ್ಷರಿ ನಗರ, ರಾಜೀವಗಾಂಧಿ ನಗರ, ಕೆ.ಸಿ. ರಾಣಿ ರಸ್ತೆ, ಟರ್ನಲ್​ಪೇಟ, ಎಸ್.ಬಿ. ನಗರ, ಕುಂಬಾರ ಓಣಿ, ಆದರ್ಶ ನಗರ, ಕುರಟ್ಟಿ ಪೇಟೆ, ಅಂಚೆ ಕಚೇರಿ ಹತ್ತಿರ, ಕೆಎಸ್​ಆರ್​ಟಿಸಿ ಕಾಲನಿ, ಹುಡ್ಕೋ ಕಾಲನಿ, ಆರ್.ಕೆ.ನಗರ, ಪಂಚಾಕ್ಷರಿ ನಗರ, ಡಿ.ಸಿ. ಮಿಲ್ ರಸ್ತೆ, ವಕ್ಕಲಗೇರಿ ಓಣಿ, ದಾಸರಗಲ್ಲಿ, ಕಳಸಾಪುರ ರಸ್ತೆ, ಬಸವೇಶ್ವರ ನಗರ, ರೈಲ್ವೆ ಕ್ವಾರ್ಟರ್ಸ್, ಶಹಾಪುರ ಪೇಟೆ, ವೀರನಾರಾಯಣ ಬಡಾವಣೆ, ಹಕಾರಿ ಗಲ್ಲಿ, ಕೆ.ವಿ. ನಗರ, ಕಾಶಿ ವಿಶ್ವನಾಥ ಓಣಿ, ಎಸ್.ಎಂ.ಕೆ. ನಗರ, ವಿ.ಎನ್.ಟಿ. ರಸ್ತೆ, ಶಿವಬಸವ ನಗರ, ಸವೋದಯ ಕಾಲನಿ, ಟೌನ್ ಪೊಲೀಸ್ ಠಾಣೆ, ಕರಿಯಮ್ಮ ಕಲ್ಲ ಬಡಾವಣೆ, ಪ್ರವಾಸಿ ಮಂದಿರ ಹತ್ತಿರ, ಕೆಳಗೇರಿ ಓಣಿ, ಬ್ಯಾಂಕರ್ಸ್ ಕಾಲನಿ, ಗದಗ ತಾಲೂಕಿನ ಬಳಗಾನೂರ, ಶ್ಯಾಗೋಟಿ, ಕೋಟುಮಚಗಿ, ನಾರಾಯಣಪುರ, ಹರ್ತಿ, ಬಿಂಕದಕಟ್ಟಿ, ಲಕ್ಕುಂಡಿ, ಹೊಸೂರ, ಶಿರೂರ, ಕುರ್ತಕೋಟಿ, ಕಣವಿ.

    ಮುಂಡರಗಿ ಪಟ್ಟಣದ ಎ.ಡಿ.ನಗರ, ಆಯುರ್ವೆದಿಕ್ ಕಾಲೇಜ್, ಮುಂಡರಗಿ ತಾಲೂಕಿನ ಪೇಠಾಲೂರ, ಅಳವಂಡಿ, ಹಿರೇವಡ್ಡಟ್ಟಿ, ವೀರಾಪುರ ತಾಂಡಾ, ಡೋಣಿ, ಹಾರೋಗೇರಿ, ಸಿಂಗಟರಾಯನಕೇರಿ ತಾಂಡಾ, ಮುಂಡವಾಡ, ಕೊರ್ಲಳ್ಳಿ, ಹಮ್ಮಗಿ, ಬಿಡ್ನಾಳ, ಡಂಬಳ. ನರಗುಂದ ಪಟ್ಟಣದ ಹಾಲಬಾವಿ ಕೇರಿ, ಲೋಡಿ ಗಲ್ಲಿ, ಹುಬ್ಬಳ್ಳಿ-ಸೊಲ್ಲಾಪುರ ರಸೆ, ಟಿಎಲ್​ಎಚ್ ರಸ್ತೆ, ಕಸಬಾ ನರಗುಂದ, ನರಗುಂದ ತಾಲೂಕಿನ ಭೈರನಟ್ಟಿ, ದಂಡಾಪುರ, ವಾಸನ, ಹಿರೇಕೊಪ್ಪ, ಸೋಮಾಪುರ, ಕಳಕೇರಿ, ಬನಹಟ್ಟಿ, ಹೊಸೂರ, ಶಿರೋಳ. ರೋಣ ಪಟ್ಟಣದ ಶಿವಪೇಟ, ಕೊಪ್ಪದ ಪ್ಲಾಟ್, ಮಾದರ ಓಣಿ, ರೋಣ ತಾಲೂಕಿನ ಲಕ್ಕಲಕಟ್ಟಿ, ಹೊಳೆ ಹಡಗಲಿ, ಮಾಳವಾಡ. ಗಜೇಂದ್ರಗಡ ಪಟ್ಟಣದ ವಡ್ಡರ ಓಣಿ, ಪತ್ತಾರ ಗಲ್ಲಿ. ಶಿರಹಟ್ಟಿ ತಾಲೂಕಿನ ಗೊಜನೂರ, ರಣತೂರ, ದೇವಿಹಾಳ, ಬಾಲೇಹೊಸೂರ, ಬೆಳ್ಳಟ್ಟಿಯಲ್ಲಿ ಸೋಂಕು ಪತ್ತೆಯಾಗಿದೆ. ಗದಗ ತಾಲೂಕಿನ 60 ವರ್ಷದ ಪುರುಷ, ಗಜೇಂದ್ರಗಡದ 48 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts