More

    ವೈದ್ಯರಿಗೆ ಕರ್ತವ್ಯ ನಿರ್ವಹಿಸಲು ಸಹಕರಿಸಿ

    ರಾಣೆಬೆನ್ನೂರ: ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗದ ಪ್ರತಿಯೊಬ್ಬರ ಆರೋಗ್ಯ ತಪಾಸಣೆಯನ್ನು ಅವರ ಮನೆಮನೆಗೆ ತೆರಳಿ ಆರೋಗ್ಯ ಇಲಾಖೆ ವೈದ್ಯರು ನಡೆಸಲು ಮುಂದಾಗಿದ್ದು, ಜನತೆ ಅವರಿಗೆ ಸ್ಪಂದಿಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

    ತಾಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಜನರಲ್ಲಿ ಕರೊನಾ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಕರೊನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಈಗಾಗಲೇ ಹಲವಾರು ಜನರನ್ನು ತಪಾಸಣೆಗೆ ಒಳಪಡಿಸಿ ಹೋಮ್ ಕ್ವಾರೆಂಟೈನ್​ನಲ್ಲಿ ಇಡಲಾಗಿದೆ. ಈವರೆಗೂ ಯಾರಲ್ಲೂ ಕರೊನಾ ಸೋಂಕು ದೃಢಪಟ್ಟಿಲ್ಲ. ಆದ್ದರಿಂದ ರಾಣೆಬೆನ್ನೂರ ಮಾತ್ರವಲ್ಲ, ಇಡೀ ಜಿಲ್ಲೆ ಸೇಫ್ ಆಗಿದೆ. ಹಾಗಂತ ಜನತೆ ಕರೊನಾ ಸೋಂಕನ್ನು ಸುಲಭವಾಗಿ ತಿಳಿಯಬಾರದು. ಆರೋಗ್ಯ ಇಲಾಖೆ ಹಾಗೂ ಸರ್ಕಾರ ಸೂಚಿಸಿದ ಮಾರ್ಗಸೂಚಿಯಂತೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್​ನಿಂದ ಕೈ ತೊಳೆಯುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

    ಕರೊನಾ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಆರೋಗ್ಯ ಇಲಾಖೆಯಿಂದ ಮುಂಜಾಗ್ರತೆ ಕ್ರಮವಾಗಿ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದಾಗ ಎಲ್ಲರೂ ಸಹಕಾರ ನೀಡಿ, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಾಲೂಕು ಆರೋಗ್ಯಾಧಿಕಾರಿ ಡಾ.ಸಂತೋಷಕುಮಾರ, ತಾಪಂ ಇಒ ಎಸ್.ಎಂ. ಕಾಂಬಳೆ, ಪ್ರಮುಖರಾದ ಬಿ.ಸಿ. ಹನುಮನಗೌಡ್ರ, ಚಂದ್ರಪ್ಪ ಹಕ್ಕಿ, ಚನ್ನಬಸನಗೌಡ ಪಾಟೀಲ, ನಿಂಗಪ್ಪ ಕೂನಬೇವು, ಹನುಮಂತರಾಜು ಚನ್ನಗೌಡ್ರ, ರಾಜಪ್ಪ ಬಾಲಪ್ಪನವರ, ಅಂಜನಪ್ಪ ಮೇಗಳಮನಿ ಮತ್ತಿತರರು ಇದ್ದರು.

    ಪಡಿತರ ವಿತರಣೆ ಪರಿಶೀಲನೆ

    ತಾಲೂಕಿನ ಮಾಕನೂರ, ಕೋಡಿಯಾಲ ಹೊಸಪೇಟೆ, ಹಿರೇಬಿದರಿ, ಐರಣಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಅರುಣಕುಮಾರ ಪೂಜಾರ, ಪಡಿತರ ವಿತರಣೆ ಪರಿಶೀಲಿಸಿದರು. ಜನತೆಗೆ ಯಾವುದೇ ರೀತಿ ತೊಂದರೆ ಆಗದಂತೆ ಪಡಿತರ ವಿತರಿಸಬೇಕು. ಬೆಳಗ್ಗೆಯಿಂದ ರಾತ್ರಿಯವರೆಗೆ ಪಡಿತರ ವಿತರಿಸಬೇಕು. ಪಡಿತರ ಪಡೆಯಲು ಬರುವ ಜನತೆಯನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಬೇಕು ಎಂದು ನ್ಯಾಯಬೆಲೆ ಅಂಗಡಿಕಾರರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts