More

    ವೈದ್ಯನಾಥೇಶ್ವರ ಸ್ವಾಮಿ ರಥೋತ್ಸವ

    ಮದ್ದೂರು: ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇಗುಲದಲ್ಲಿ ಮಹಾ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಬೆಳಗ್ಗೆ 10.15 ರಿಂದ 10.45 ರೊಳಗಿನ ಶುಭ ಮೀನ ಲಗ್ನದಲ್ಲಿ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥವನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಪ್ರಮುಖ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಯಿತು.

    ರಾತ್ರಿ 9 ಗಂಟೆಗೆ ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರಸ್ವಾಮಿಯ ಬಸವಪ್ಪನ ಜತೆಗೆ ಮದ್ದೂರಿನ ಶ್ರೀ ಮದ್ದೂರಮ್ಮ, ಆಲೂರಿನ ಶ್ರೀ ಆಲೂರಮ್ಮ, ನಗರಕೆರೆಯ ಶ್ರೀ ಪಟ್ಟಲದಮ್ಮ, ಹಳೆ ಬೂದನೂರಿನ ಶ್ರೀ ಅಂಕನಾಥೇಶ್ವರಸ್ವಾಮಿ ಉತ್ಸವ ನೆರವೇರಿತು. ಚನ್ನಪಟ್ಟಣದ ತಾಲೂಕಿನ ವಿರೂಪಾಕ್ಷಪುರ ಹೋಬಳಿ, ಜೆ.ಬ್ಯಾಡರಹಳ್ಳಿಯ ಶ್ರೀ ವೈದ್ಯನಾಥೇಶ್ವರ ಸಮಿತಿ ಹಾಗೂ ಗ್ರಾಮಸ್ಥರಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ವಿನಾಯಕ ಗೆಳೆಯರ ಬಳಗದಿಂದ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು. ವಿನಾಯಕರ ಗೆಳೆಯರ ಬಳಗದ ವಿ.ಎಸ್.ಪ್ರಭು, ಅನು, ಲತೇಶ್, ದಯಾನಂದ್, ಶಂಕರ್, ಲೋಕೇಶ್, ವಿನಯ್, ಅನುಪ, ಶಿವರಾಮು ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts