More

    ವೈಕುಂಠ ಏಕಾದಶಿ ವೈಭವ

    ಕಾಳಗಿ: ಕಲ್ಯಾಣಕರ್ನಾಟಕ ತಿರುಪತಿ ಎಂದು ಕರೆಸಿಕೊಳ್ಳುವ ಸುಗೂರ(ಕೆ) ಗ್ರಾಮದಲ್ಲಿ ಸೋಮವಾರ ಬಾಲಾಜಿ ದರ್ಶನಕ್ಕೆ ಸಂಭ್ರಮ ಕಂಡುಬಂದಿತು.
    ಕಲಬುರಗಿ, ಬೀದರ್, ಯಾದಗಿರಿ, ರಾಯಚೂರ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಂದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ವೈಕುಂಠ ಏಕಾದಶಿಯಂದು ಸೂಗುರು ಬಾಲಜಿಯ ದರ್ಶನ ಪಡೆದು ಪುನೀತರಾದರು. ಭಕ್ತರ ಸರಳ ದರ್ಶನಕ್ಕೆ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.
    ಬಾಲಾಜಿ ದೇವಸ್ಥಾನವನ್ನು ಸಂಪೂರ್ಣವಾಗಿ ಹೂವು, ಬಾಳೆ ದಿಂಡು, ತೆಂಗಿನ ಗರಿಗಳಿಂದ ಅಲಂಕರಿಸಲಾಗಿತ್ತು. ವಿದ್ಯುತ್ ದೀಪದ ಕಣ್ತುಂಬಿ ಬಂದಿತ್ತು. ಗೋವಿಂದ.. ಗೋವಿಂದ.. ವೆಂಕಟರಮಣ ಗೋವಿಂದ ಎಂಬ ಪದ ಸತತವಾಗಿ ಮೊಳಗುತಿತ್ತು. ಬಾಲಾಜಿ ದರ್ಶನಕ್ಕೆ ಆಗಮಿಸಿದ ಭಕ್ತರು ಸಹ ಗೋವಿಂದ.. ಗೋವಿಂದ ಎಂದು ಘೋಷಣೆ ಕೂಗುತ್ತಿದ್ದರು. ಅನೇಕರು ಸೆಲ್ಫಿ ಸಂಭ್ರಮದಲ್ಲಿದದ್ದು ಕಂಡುಬಂದಿತು. ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರು ಬರುತ್ತಿದ್ದರು. ಅಲ್ಲಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.
    ಸೋಮವಾರ ಬೆಳಗ್ಗೆ 4ಕ್ಕೆ ಮೆರವಣಿಗೆ ಮೂಲಕ ಪುಷ್ಕರಣಿಯಿಂದ ತಂದ ಜಲದಿಂದ ವೆಂಕಟೇಶ್ವರ ಮೂತರ್ಿಗೆ ವಿಶೇಷ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ ನಡೆಯಿತು. ಸುಮಾರು 25 ಕ್ವಿಂಟಾಲ್ನ ವಿವಿಧ ಹೂಗಳಿಂದ ಉತ್ತರ ದ್ವಾರವನ್ನು ಅಲಂಕಾರ ಮಾಡಲಾಗಿತ್ತು. ತಿರುಮಲ ತಿರುಪತಿಯ ಅರ್ಜುನ ದಾಸ ಮಹಾರಾಜ, ಕೃಷ್ಣದಾಸ ಮಹಾರಾಜ, ಸುಗೂರಿನ ವೆಂಕಟೇಶ್ವರ ದೇವಸ್ಥಾನದ ಪವಾನದಾಸ ಮಹಾರಾಜ ನೇತೃತ್ವದಲ್ಲಿ ಲಕ್ಷ್ಮೀ, ಪದ್ಮಾವತಿ ಸಮೇತ ಶ್ರೀ ವೆಂಕಟೇಶ್ವರನಿಗೆ ಸಹಸ್ರ ಪೂಜೆ ನೆರವೇರಿಸಿ, ಭಕ್ತರಿಗೆ ಉತ್ತರ ದ್ವಾರ ದರ್ಶನದ ಅವಕಾಶ ಮಾಡಿಕೊಡಲಾಯಿತು.
    ರಾತ್ರಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಂದ ಧಾರ್ಮಿಕ ಸಾಂಸ್ಕೃತಿ ಕಾರ್ಯಕ್ರಮಗಳು ಹಾಗೂ ಭಜನೆ-ಕೀರ್ತನೆಗಳು ನಡೆದವು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ಐತಿಹಾಸಿಕ ದೇವಸ್ಥಾನಗಳಾದ ನೀಲಕಂಠ ಕಾಳೇಶ್ವರ, ಅಣವೀರಭದ್ರೇಶ್ವರ, ರೇವಗ್ಗಿ ಜಗದ್ಗುರು ರೇವಣ ಸಿದ್ಧೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿದರು.
    ತಿರುಮಲ ತಿರುಪತಿಯ ಅಜರ್ುನದಾಸ ಮಹಾರಾಜ, ಕೃಷ್ಣದಾಸ ಮಹಾರಾಜ, ಸೂಗುರ ವೆಂಕಟೇಶ್ವರ ದೇವಸ್ಥಾನದ ಪವನದಾಸ ಮಹಾರಾಜ, ಬಾಲಕದಾಸ ನಾಗಾಸಾಧು, ತಿರುಪತಿ ತಿರುಮಲ ಹಾತಿರಾಮಜಿ ಮಠದ ಆಪ್ತ ಕಾರ್ಯದರ್ಶಿ  ವ್ಹಿ.ಪಿ ಮಿಶ್ರ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಪ್ರಮುಖರಾದ ಪರಮೇಶ್ವರ ಪಾಟೀಲ್, ಚಂದ್ರಕಾಂತ ರೆಮ್ಮಣಿ, ದತ್ತಾತ್ರೇಯ ಮುಚ್ಚಟ್ಟಿ, ಜಗನ್ನಾಥ ಕೊಳ್ಳಿ, ಖೇಮು ರಾಠೋಡ್, ಹಣಮಂತರಾವ ಮುಚ್ಚಟ್ಟಿ, ಸಿದ್ದು ಕೇಶ್ವರ, ಉದಯಕುಮಾರ ಹಡಪದ ಇದ್ದರು. ಕಾಳಗಿ ವಾಸವಿ ಕ್ಲಬ್ನ ಮಹಿಳಾ ಮಂಡಳಿ ಹಾಗೂ ಕಲಬುರಗಿ ಸರದಾರ ವಲ್ಲಾಬಾಯಿ ಪಟೇಲ್ ಮೆಮೋರಿಯಲ್ ಶಾಲೆ ಸ್ಕೌಡ್ಸ್ ಗೈಡ್ಸ್ ವಿದ್ಯಾರ್ಥಿಗಳು ದೇವಸ್ಥಾನ ಆವರಣದಲ್ಲಿ ಶಿಸ್ತನ್ನು ಕಾಪಾಡಿದರು. 

    ವಿಸ್ಮಯ ಭತ್ತದ ಮಹಾಪ್ರಸಾದ ಇಂದು
    ದ್ವಾದಶಿ ದಿನವಾದ ಮಂಗಳವಾರ ಬೆಳಗ್ಗೆ ವೆಂಕಟೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ಅರ್ಚನೆ, ಮಂಗಳಾರತಿ ನಡೆಯಲಿದೆ. ನಂತರ ದೇವಸ್ಥಾನ ಪಕ್ಕದ ಸುವರ್ಣಗಿರಿ ಬೆಟ್ಟದ ಮೇಲೆ ಬಿತ್ತದೆ, ಉಳುಮೆ ಮಾಡದೆ ಬೆಳೆದಿರುವ ವಿಸ್ಮಯಕಾರಿ ಭತ್ತದಿಂದ ಬಂದಿರುವ ಅಕ್ಕಿಯಿಂದ ಮಹಾಪ್ರಸಾದ ವಿತರಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಸಾದವನ್ನು ಸ್ವೀಕರಿಸಬೇಕು ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.

    ನಮಗೆ ಸೂಗುರು ಗ್ರಾಮವೇ ತಿರುಪತಿ ಇದ್ದಂತೆ. ದೂರದ ತಿರುಮಲಕ್ಕೆ ಹೋಗಿ ದರ್ಶನ ಪಡೆಯುವುದು ಕಷ್ಟ. ಹೀಗಾಗಿ ನಾವು ಇಂದು ಸುಗೂರಿಗೆ ಬಂದು ತಿಮ್ಮಪ್ಪನ ದರ್ಶನ ಪಡೆದುಕೊಂಡೆವು.
    | ಸುವರ್ಣ ಕುಲಕರ್ಣಿ , ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts