More

    ವೇತನ ಕಡಿತ ಮಾಡಬೇಡಿ

    ಕಾರವಾರ : ಗೋವಾ ರಾಜ್ಯದ ವಿವಿಧ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರವಾರದ ನೌಕರರ ಲಾಕ್​ಡೌನ್ ಅವಧಿಯ ವೇತನ ಕಡಿತ ಮಾಡದಂತೆ ಶಾಸಕಿ ರೂಪಾಲಿ ನಾಯ್ಕ ಅವರು ಗೋವಾ ಸಿಎಂ ಪ್ರಮೋದ ಸಾವಂತ ಅವರಿಗೆ ಪತ್ರ ರವಾನಿಸಿದ್ದಾರೆ.

    ಕಾರವಾರದ 3 ಸಾವಿರಕ್ಕೂ ಅಧಿಕ ನೌಕರರು ಗೋವಾದ ವಿವಿಧ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕೆಲವರು ನಿತ್ಯ ಕಾರವಾರದಿಂದ ರೈಲಿನಲ್ಲಿ ಓಡಾಟ ನಡೆಸುತ್ತಿದ್ದರು. ಕೆಲವರು ಅಲ್ಲಿಯೇ ಉಳಿದಿದ್ದರು. ಲಾಕ್​ಡೌನ್ ಅವಧಿಯಲ್ಲಿ ಕಂಪನಿಗಳು ಮುಚ್ಚಿದ್ದರಿಂದ ಹಲವರು ಸ್ವಗ್ರಾಮಕ್ಕೆ ಮರಳಿದ್ದರು. ಈಗ ಗೋವಾದಲ್ಲಿ ಕಂಪನಿಗಳು ಪುನರಾರಂಭವಾಗಿದ್ದು, ಕಾರ್ವಿುಕರು ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ. ಆದರೆ, ಕಂಪನಿಗಳು ವೇತನ ಕಡಿತ ಮಾಡುವ ಸೂಚನೆ ನೀಡಿವೆ. ಇದರಿಂದ ಆತಂಕಿತರಾದ ಕಾರ್ವಿುಕರು ಶಾಸಕಿ ರೂಪಾಲಿ ಅವರನ್ನು ಭೇಟಿಯಾಗಿ ಸಮಸ್ಯೆ ವಿವರಿಸಿದ್ದರು.

    ಶಾಸಕಿ ರೂಪಾಲಿ ಅವರು ಪ್ರಮೋದ ಸಾವಂತ ಅವರ ಜತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ‘ಗೋವಾ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ರೂಪಾಲಿ ನಾಯ್ಕ ತಿಳಿಸಿದ್ದಾರೆ.

    ಬಾಂದಾರು ನಿರ್ವಿುಸಲು ಮನವಿ: ಜಿಲ್ಲೆಯ ಕರಾವಳಿಯಲ್ಲಿ ಸಮುದ್ರದ ಉಪ್ಪು ನೀರು ನುಗ್ಗಿ ಸಾವಿರಾರು ಎಕರೆ ಕೃಷಿ ಭೂಮಿ ಹಾನಿಯಾಗುತ್ತಿದೆ. ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ, ಬಾಂದಾರುಗಳನ್ನು ನಿರ್ವಿುಸಿ ಕೃಷಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಅವರು ಶಿರಸಿಗೆ ಸೋಮವಾರ ಆಗಮಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಲ್ಲಿ ಮನವಿ ಮಾಡಿದ್ದಾರೆ. ಕಾರವಾರ ಎಪಿಎಂಸಿ ಬಲವರ್ಧನೆ ಮಾಡಬೇಕು. ಮಾವಿನ ಹಣ್ಣು, ಕಲ್ಲಂಗಡಿಗೆ ಮಾರುಕಟ್ಟೆ ಒದಗಿಸಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ನೀಡಬೇಕು. ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts